ಪುಟ:Mrutyunjaya.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೬ ಮ್ರುತ್ಯಂಜಯ ನಿನ್ನ ಕೆಲಸದ ಗೊತ್ತುಗುರಿ ನನಗೀಗ ಚೆನ್ನಾಗಿ ಅರ್ಥವಾಗ್ತದೆ, ಪ್ಟಾ..” ಊಟಾ ಮುಗಿದು--- ಮೆನೆಪ್ಟಾ ಪತ್ನಿಯನ್ನು ಅಪ್ಪಿಕೊಂಡ, ತನ್ನ ಮೈ ಆಕೆಯ ಒಡಲನ್ನು ಒತ್ತದಂತೆ. “ ನಾನು ಸುಖಿ, ನೆಫಿ.” “ ನಾನೂ.. ಅಲ್ಲಿ ಹುಷಾರಾಗಿರು.. ಅಪಾಯ ಇರಬಹುದು.” "ಹೂಂ" "ಪ್ರತಿ ದಿನ ನನ್ನನ್ನು ಜ್ಞಾಪಿಸ್ಕೋತೀಯಾ?" "ಪ್ರತಿ ರಾತ್ರೆ.” ಚುಂబన , ಮರುಚುಂబన. "ಒಂದು ಕೆಲಸ ಬಾಕಿ ಉಳೀತು." “ ಯಾವುದು ನೆಫಿ ?” "ಚಿಕ್ಕಮ್ಮನ ಹಳ್ಳಗೆ ಹೋಗಿಬರೋದು." “ ನಾನು ವಾಪಸಾದ್ಮೇಲೆ, ಕುಯಿಲು ಮುಗಿಸಿ, ಹೋಗೋಣ.” " ಹೂಂ.ಪ್ಟಾ.ನೀನಿನ್ನು ಮಲಕೋ.ನಿದ್ದೆ ಬೇಡವಾ? ವಿಶ್ರಂತಿ ಬೇಡವಾ?" " ನಿದ್ದೆ ವಿಶ್ರಾಂತಿ ನಿಮಗೂ ಬೇಕು--–ನಮ್ಮಿಬ್ಬರಿಗೂ....” " ಹುಂ." "ಸ್ವಲ್ಪ ಅಳ್ತೀಯಾ ?” ನೆಫಿಸ್ ನಕ್ಕಳು. " ಇವತ್ತು ನಿನ್ನ ತೋಳೇ ನನಗೆ ದಿಂಬು, ಪ್ಟಾ. ಕಣ್ಣೀರಿನಿಂದ ತೋಯಿಸೋದಿಲ್ಲ, ಜೊಲ್ಲು ಸುರಿಸಿ ಒದ್ದೆ ಮಾಡತ್ತೇನೆ.” ಕುಳಿತಲ್ಲೇ ನಿದ್ದೆ. ಮೈ ಚಾಚಿಕೊಂಡು ನಿದ್ದೆ.... ಬೆಳಗಾಯಿತು... ಮಂದಿರಕ್ಕೆ ಹೋಗಿ ಬರುವುದರೋಳಗೆ ನಾಲ್ಕು ಕಡೆಗಳಿಂದ ರಾತ್ರೆಯೇ ఎದ್ದು ನಡೆದು ಬಂದಿದ್ದವರೊಡನೆ ಊರವರೂ ಸೇರಿದರು,ಒಟ್ಟು ನಾಲ್ವತ್ತು.