ಪುಟ:Mrutyunjaya.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೧೮೭

ಜನರ ವಿಶಿಷ್ಟ ತಂಡ. ఆಬ್ಟು ಯಾತ್ರೆಯ ಬಾಂಧವರು. ಅಹೂರಾನೂ
ಇದ್ದಳು, ಕುಟು ಕುಟು ನಡೆಯುತ್ತಿದ್ದ ಮಗಳೊಡನೆ. ಅವರ ಜೊತೆ ಬಟಾ.
" ಹೇಳು ಬಟಾ ಹೇಳು,ಹೇಳು."
" ಮೆನೆಪ್ಟಾ ಅಣ್ಣ. ಇವರೆಲ್ಲ ಮೆಂಫಿಸಿಗೆ ಬರ್ತಾರಂತೆ!”
" ಮೆನೆಪ್ಟಾ ನಕ್ಕ. ಬಟಾನೇ ಅಂದ :
“ ನಾನು ಹೇಳಿದ್ದೇನೆ: ಇದು ರಾಜಕಾರ್ಯಕ್ಕೆ ಸಂಬಂಧಿಸಿದ್ದು. ಈ
ಸಲ ಖಂಡಿತ ಬೇಡ___ಅಂತ."
ಅವರನ್ನೆಲ್ಲ ಒಲವಿನ ನೋಟದಿಂದ ದಿಟ್ಟಿಸುತ್ತ ಮೆನೆಪ್ಟಾ ಅಂದ:
"ಹೌದು."
"ಈ ಸಲ ಬೇಡ."
"ಮುಂದಿನ ಸಲ ? ಖಂಡಿತ ?"
"ಹೂಂ__ಹೂಂ."
ಮಧ್ಯಾಹ್ನ...
ರಾಮೆರಿಪ್ಟಾನ ಜತೆ ಊಟ.
"ಆಬ್ಟುವಿನಲ್ಲಿ ಕೊಂಡ್ಕೊಂಡ ಲಿಪಿಸುರುಳಿ ನೆನಪಿದೆಯಾ ರಾಮೆರಿ?"
"ಓ ! ನಿನ್ನ ತಾಯಿ ನಿನಗಾಗಿ ಏನೇನು ಮಾಡಿರುವಳೆಂಬುದನ್ನು
ನೀನೆಂದೂ ಮರೆಯಬೇಡ !..."
" ಅಮ್ಮನನ್ನು ನೋಡ್ಕೊ.”
" ಹೂಂ."
ನೆಫೆರುರಾ ಬಂದು ಹೋದಳು:
" ನೆಫಿಸ್ ಅಕ್ಕ. ಇದನ್ನು ತಗೊಳ್ಳಿ. ಅಣ್ಣನಿಗೆ ದಾರಿಬುತ್ತಿ."
" ನಾನು ಆಗಲೇ ಬುತ್ತಿ ಕಟ್ಟಿದ್ದೇನೆ, ನೆಫೆರು”
" ನನ್ನದೂ ಒಂದು ಇರಲಿ...ಅಣ್ಣ ಹೋಗಿ ಬನ್ನಿ..."
ಮೆನೆಪ್ಟಾ ಆಕೆಯ ಮುಖ ನೋಡಿ ತುಟಿಗಳಲ್ಲಿ ನಗೆಸೂಸಿ ಅಂದ:
“ ಆಗಲಿ ನೆಫೆರುರಾ.”
ಬುತ್ತಿಗಳು ಇನ್ನೂ ಹಲವಿದ್ದುವು. ಅಬ್ಟು ಯಾತ್ರಿಕರು ತಂದುದನ್ನಂತೂ
ಬಿಡುವಂತಿಲ್ಲವಲ್ಲ ? ಬಟಾನೆಂದ : "ಬುತ್ತಿಗಳು ಇನ್ನೂ ಬಂದರೆ ಮೊಸಳೆ