ಪುಟ:Mrutyunjaya.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೮೮

ಮೃತ್ಯುಂಜಯ

ಗಳಿಗೆ ಕೊಡಬೇಕಾದೀತು."
ಖ್ನೆಮ್ ಹೊಟೆಪ್ ನಿರ್ಧಾರ ಕೈಗೊಂಡ.
" ಇನ್ನು ಒಬ್ಬೊಬ್ಬರದು ಒಂದೊಂದು ಹಿಡಿ ಮಾತ್ರ.”
ಯಾರೋ ನಗುತ್ತ ಕೇಳಿದಳು :
" ನಿನ್ನ ಅತ್ತೆ ಬರ್ತಿದ್ದಾರೆ. ಬುತ್ತಿ ತರ್ತಿದ್ದಾರೆ !”
ಖ್ನೆಮ್ ದೃಢವಾಗಿ ಅಂದ :
" ಎಲ್ಲರಿಗೂ ಒಂದೇ ನಿಯಮ "
ಸಂಜೆ ರಾ ಮುಳುಗಲು ಇನ್ನೂ ಒಂದು ತಾಸಿದೆ ಎನ್ನುವಾಗ ರಾಜಗೃಹ
ದಿಂದ ಒಂದು ಮೆರವಣಿಗೆ ಹೊರಟಿತು. ಎಡ ಬಲಗಳಲ್ಲಿ ಸಾಲುಗಟ್ಟಿದ ಜನರು.
ಖ್ನೆಮ್ ಹೊಟೆಪನ ಶಿಸ್ತು, ನಡುವೆ ಹೂಮಾಲೆಗಳು ಕೊರಳನ್ನು ಬಳಸಿದ್ದ,
ಜೊಂಡಿನ ಪಾದರಕ್ಷೆ ಮೆಟ್ಟಿದ್ದ, ನೆಫಿಸ್ ಬಾಚಿದ್ದ ತಲೆಗೂದಲನ್ನು ಭುಜಗಳ
ತನಕ ಇಳಿಬಿಟ್ಟಿದ್ದ ಮೆನೆಪ್ಟಾ. ಅವನನ್ನು ಸುತ್ತುವರಿದವರು ಸ್ನೊಫ್ರು,
ಸೆಬೆಕ್ಖು, ಸೆಮ ಮತ್ತಿತರ ಹಿರಿಯರು ಅವರ ಹಿಂದಿನಿಂದ ಇಪ್ಯುವರ್, ಔಟ,
ಬೆಕ್. (ಗರ್ಭಿಣಿ ತಾಯಿಯೊಡನೆ ರಾಮೆರಿಪ್ಟಾ ದೋಣಿಕಟ್ಟೆಗೆ ಮೊದಲೇ
ಸಾಗಿದ್ದ ) ಹರ್ಷೋತ್ಸಾಹದ ಬುಗ್ಗೆಗಳು ಮಾತಾಗಿ ಕಲರವವಾಗಿ ಚಿಮ್ಮು
ತ್ತಿದುವು. ನಡುನಡುವೆ ಜಯಘೋಷ: “ಓ! ಮೆನೆಪ್ಟಾ! ಓ!
ಮೆನೆಪ್ಟಾ ! "
ದೋಣಿಕಟ್ಟೆಯನ್ನು ತಲಪಿದ್ದ ನೂರಾರು ತೊರೆಗಳನ್ನು ಮೆರವಣಿಗೆಯ
ಪ್ರವಾಹವೂ ಕೂಡಿಕೊಂಡಿತು. ಅಸ್ವಸ್ಥರು ಮತ್ತು ತೊಟ್ಟಿಲ ಕೂಸುಗಳನ್ನು
ಬಿಟ್ಟು ಮುಖ್ಯ ಪಟ್ಟಣದ ಜನರೆಲ್ಲ ಅಲ್ಲಿ ನೆರೆದಿದ್ದರು. ಅವರೋಂದಿಗೆ ಪ್ರಾಂತದ
ಬೇರೆ ಬೇರೆ ಹಳ್ಳಿಗಳಿಂದ ಬಂದವರೂ ಇದ್ದರು.
ಬಟಾನ ದೋಣಿ ಸಿದ್ಧವಾಗಿತ್ತು, ಅದನ್ನು ಹಿಂಬಾಲಿಸಿ ಒಂದಷ್ಟು,
ದೂರ ಹೋಗುವ ಆಸೆಯಿಂದ ಹಲವು ಪೆಪೈರಸ್ ದೋಣಿಗಳೂ ನೀರಿಗೆ ಇಳಿ
ದಿದ್ದುವು.
ದೋಣಿಕಟ್ಟೆಯ ವೇದಿಕೆಗೆ ಮೆನೆಪ್ಟಾನನ್ನು ಖೈಮ್ ಹೊಟೆಪ್
ಹತ್ತಿಸಿ, “ ಅಣ್ಣ ಏನಾದರೂ ಹೇಳಿ,” ಎಂದ.