ಪುಟ:Mrutyunjaya.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೯೦

ಮ್ರತ್ಯುಂಜಯ

“ ಹೊರಡೋಣ ಬಟಾ.” (ತಾನೇ ಹೇಳಿದೆ, ಅಲ್ಲವೆ ?)
ಕಟ್ಟೆಯ ಗೂಟಕ್ಕೆ ದೋಣಿಯನ್ನು ಕಟ್ಟಿದ್ದ ಹಗ್ಗವನ್ನು ಬಿಟಾ ಬಿಚ್ಚಿದ.
ದೋಣಿಯನ್ನು ತುಸು ತಳ್ಳಿ, ಚಂಗನೆ ಒಳಕ್ಕೆ ಹಾರಿ, ಚುಕ್ಕಾಣಿ ಮೂಲೆ
ಯಲ್ಲಿ ನಿಂತು. ಹುಟ್ಟು ಹಾಕುವವರಿಗೆ ಸನ್ನೆ ಮಾಡಿದ.

    ನಾವೆ ಚಲಿಸತೊಡಗಿತು.   ಕೆಳಗಿದ್ದ ಹಲವು ಪುಟ್ಟದೋಣಿಗಳೂ ಜೀವ
ತಳೆದುವು. (ಮಹಾಪೂರ ಇಳಿದು ಮತ್ತೆ ನಿರ್ಮಲವಾಗಿದ್ದ ನೀಲನದಿ, ಮೊದಲು
ಅದರ ಮಧ್ಯಕ್ಕೆ. ಅನಂತರ ಉತ್ತರಾಭಿಮುಖವಾಗಿ——ನೀರು ಹರಿಯುತ್ತಿದ್ದ
ದಿಕ್ಕಿಗೆ.)

ಮುಗಿಲೆತ್ತರಕ್ಕೆ ಮುಟ್ಟುತ್ತಿದ್ದ ಕಲರವ, ಜಯಘೋಷ.
" ಓ! ಮೆನೆಪ್ಟ  ! ಓ! ಮೆನೆಪ್ಟ  ! "
ನಾಯಕ ಕಣ್ಣೆವೆಗಳನ್ನು ಎರಡು ಮೂರು ಬಾರಿ ಒತ್ತಿ ತೆರೆದ. ದೋಣಿ
ಕಟ್ಟಿ ಈಗ ನಿಚ್ಚಳವಾಗಿ ಕಂಡಿತು. ಸಹಸ್ರಾರು ತೋಳುಗಳು ಬೀಸಿ ವಿದಾಯ
ನುಡಿಯುತ್ತಿದ್ದುವು.
ಚಿಕ್ಕ ದೋಣಿಗಳಲ್ಲಿ ಜನ ಯಾಕೆ ಬರಬೇಕು ? ಇದು ಕಾಲಹರಣ
ವಲ್ಲದೆ ಇನ್ನೇನು ? ಇನ್ನೊಂದು ಮೆರವಣಿಗೆ—ಈ ನದಿಯಲ್ಲಿ ?
" ಓ ಮೆನೆಪ್ಟಾ  ! ಓ ಮೆನೆಪ್ಟಾ  ! "
ದೋಣಿಕಟ್ಟೆಯ ದೃಶ್ಯ ಮಬ್ಬಾಗುತ್ತಿದೆ. ಘೋಷದ ಅಲೆಗಳು ಮಾತ್ರ
ತೇಲಿ ಬರುತ್ತಿವೆ.
ಒಂದು ಕಿರು ದೋಣಿಯಲ್ಲಿ ಖ್ನೆಮ್ ಹೊಟೆಪ್ !ತಾನು ಚುಕ್ಕಾಣಿ
ತಿರುವುತ್ತ ಇತರರಿಗೆ ಆತ ಆಜ್ಞಾಪಿಸುತ್ತಿದ್ದಾನೆ :
" ಇನ್ನು ಸಾಕು ! ಹೊರಳಿ !”
ಮೆನೆಪ್ಟಾನ ದೋಣಿಯ ಕಡೆಗೂ ಬಂತು ಅವನ ಧ್ವನಿ :
" ಔಟ ! ಬೆಕ್ ! ಜೋಪಾನ ! "
ಆದೇಶ ತನಗಲ್ಲ, ಅನುಚರರಿಗೆ (ಅಂಗರಕ್ಷಕರಿಗೆ)....
ಮೆನೆಪ್ಟಾ ನೀಲನದಿಯುದ್ದಕ್ಕೂ ನೋಡಿ, ಉಸಿರೆಳೆದುಕೊಂಡ.