ಪುಟ:Mrutyunjaya.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಮೃತ್ಯುಂಜಯ " ಇನ್ನು ಒಂದರ್ಧ ತಾಸಿನ ದೂರ.” ನದೀ ಕಣಿವೆ ವಿಸ್ತಾರಗೊಂಡಿತು. ಮತ್ತೆ ಅಗಲ ಕಿರಿದಾಯಿತು. ಎಡಕ್ಕೂ ಬಲಕ್ಕೂ ಎತ್ತರದ ದಿಬ್ಬಗಳು. ಅವುಗಳ ನಡುವೆ ತಿರುವುತ್ತ ಹೊರಳುತ್ತ ಮಾರ್ಗ ಕ್ರಮಣ, ಬಳಿಕ ಇಬ್ಬದಿಗಳಲ್ಲಾ ಸಮತಟ್ಟ ನೆಲದ ಮೇಲೆ ಹಸುರು ಹೊಲಗಳು, ತಾಳೆ ಮರಗಳು, ಖರ್ಜೂರವೃಕ್ಷಗಳು. ಕೆಳಗಿನಿಂದ ಹಾಯಿ ಬಿಡಿಸಿದ ದೋಣಿಗಳು. ಮೇಲಕ್ಕೆ ಬರುತ್ತಿದ್ದವು .ಇವು ರಾಜಧಾನಿಯ ದೋಣಿಕಟ್ಟೆಯಿಂದ ಹೊರಟ ನಾವೆಗಳು ಪವನ ಅತ್ತಣಿಂದ ಜನ ಸಮುದಾಯದ అప్ప్ఫ్ట్చే ಧ್ವನಿಗಳನ್ನು ಹೊತ್ತು ತಂದಿತು. ಮೆನೆಪ್ ಟಾ ಕುತೂಹಲದಿಂದ ಎಡದಂಡೆಯತ್ತ ನೋಡಿದ. ಇತರ ಕಡೆಗಳಂತೆ ಇಲ್ಲಿಯೂ.ನೀರಿಗಿಳಿದು ಜಲಸಸ್ಯಗಳ ನಡುವೆ ಜನರು-ಬಡ ಜನರು-ಅಲೆಯುತ್ತಿದ್ದರು. ಜೊಂಡು ಸಸ್ಯಗಳಿಗಾಗಿ ಗಡ್ಡೆಗಿಡಗಳಿಗಾಗಿ ಶೋಧೆ. ಇದು ಅವರ ಆಹಾರ. ಪುಟ್ಟ ದೋಣಿಗಳಲ್ಲಿ ಸಿರಿವಂತರೂ ಸಂಚರಿಸು ತ್ತಿದ್ದರು. ಅದು ವಿಹಾರ, ಬೇಟೆ. ಕೈಕೋಲುಗಳಿಂದ ಹೊಡೆದು ಅವರು ಕೆಡವಿದ ಕಾಡು ಬಾತುಕೋಳಿಗಳನ್ನು ಸೇವಕರು ನೀರಲ್ಲಿ ಈಸಾಡಿ ಹಿಡಿದು ಕೊಳ್ಳುತ್ತಿದ್ದರು. ಅವು ಔತಣದ ಊಟಕ್ಕೆ. ಸಹಸಾರು ದೋಣಿಗಳು ನದಿಯನ್ನು ಆವರಿಸಿದು ವು. ಎತ್ತರದ ಕೃತಕ ಎಡದಂಡೆ. ಮಹಾಪೂರ ತನ್ನ ಮಟ್ಟదే ಗುರುತನ್ನು ಬಿಟ್ಟು ಹೋಗಿತ್ತು. ದಂಡೆಯುದ್ದಕ್ಕೂ ಜನಸಂಚಾರ ಇಲ್ಲಿನ ಜನರ ನಡಿಗೆಯ ಗತಿ ತುಸು తీవ్రే, ಗುಡಿಸಲುಗಳು, ಮನೆಗಳು, ಕೊಂಚ ದೂರದಲ್ಲಿ ಭವ ಸೌಧಗಳು. ಬಟಾ ವಿವರಿಸಿದ : “ ಅವುಗಳಲ್ಲಿ ಒಂದು ಸಣ್ಣ ಅರಮನೆ. ಪೆರೆಯೋನ ಇಬ್ಬರು ಸೋದರಿ ಯರೂ ಅವರ ಮಕ್ಕಳೂ ಅಲ್ಲಿ ವಾಸ ಮಾಡ್ತಾರೆ. ಪೆರೆಯೋನ ಮಹಾಮನೆ ಕಟ್ಟೆಯ ಉತ್ತರ ದಿಕ್ಕಿನಲ್ಲಿ ನದಿಗೆ ಅಂಟಿಕೊಂಡೇ ಇದೆ. ಆದರೆ ಆ ಕಡೆ ಯಿಂದ ಅಗಮನ ನಿರ್ಗಮನ ಅರಸ ಅರಸಿಯರ ನಾವೆಗಳದು ಮಾತ್ರ. ಅಲ್ಲಿ ಇತರರಿಗೆ ಪ್ರವೇಶವಿಲ್ಲ.”