ಪುಟ:Mrutyunjaya.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೧೯೫ ಕಟ್ಟೆಯ ಹತ್ತಿರ ಹಲವು ನಾವೆಗಳಿದ್ದುವು. ಬಟಾನ ದೃಷ್ಟಿ ಅತ್ತ ಅಲೆ ದುದನ್ನು ಗಮನಿಸಿ ಮೆನೆಪ್ಟಾ ಕೇಳಿದ. “ ಏನು ಹುಡುಕ್ತಿದೀಯಾ?”

  • ಸೈಪ್ರಸಿನ ಒಂದು ವ್ಯಾಪಾರೀ ನೌಕೆ ಇದೆ. ಮಿನೋ ದ್ವೀಪದ್ದೆಂದು. ಆ ನಾವಿಕರ ರೂಪಲಕ್ಷಣ ನೋಡಿ ಹೇಳ್ತಿದ್ದೇನೆ....ಕೆಫ್ತಿಯು ದ್ವೀಪದವರಲ್ಲ.ಕೆಫ್ಟು ಮಹಾ ಹಸುರು ಸಮುದ್ರದ ತೀರ ಪಟ್ಟಣಗಳಿಗೆ ಹೋಗಿದ್ದಾನೇಂತ ತೋರದೆ.”

ನೀಳವಾಗಿದ್ದ ದೋಣಿಯಲ್ಲಿನ ಜನಸಮ್ಮರ್ದ ಕಂಡು ಬೆರಗಾಗಿ,ಔಟ "ಅಬ್ಬ್!"ಎಂದ. ಈ ಗದ್ದಲದಲ್ಲಿ ಕಟ್ಟೆ ತಲಪುವುದು ತಡವಾಗುತ್ತದೆಂದು ಬಟಾನಿಗೆ ಆತಂಕ. ಆತ ! ದಾರಿ ! ದಾರಿ ! " ಎಂದು ಕಿರಿಚಿದ. ಕಟ್ಟೆಯ ಕಾವಲ ಭಟನೊಬ್ಬನ ಗಮನವನ್ನು ಸೆಳೆದ. ಅ ಭಟ “ತಡೆ!” ಎಂದು ಕೈಸನ್ನೆ ಮಾಡಿದ. ಕೆಲ ನಿಮಿಷಗಳಲ್ಲಿ ಕಟ್ಟೆಯಿಂದ ಧ್ವని ಕೇಳಿಸಿತು : " ಹೊಸದಾಗಿ ಬಂದ ದೋಣಿ ಈಶಾನ್ಯ್ ಮೂಲೆಗೆ ಸಾಗ್ಲಿ!” ಆಗಬಹುದು ಎನ್ನುವಂತೆ ಬಟಾ ಕೈ ಆಡಿಸಿದನಾದರು, ಆ ಕಾವಲು ಭಟ ತನ್ನ ಆದೇಶವನ್ನು ಮತ್ತೋಮ್ಮೆ ಸ್ಪಷ್ಟವಾಗಿ ಉಚ್ಚರಿಸಿದ. ದೋಣಿ ದಾರಿ ಮಾಡಿಕೊಂಡು ಈಶಾನ್ಯ ಮೂಲೆಯನ್ನು ಮುಟ್ಟಿತು. ಮೊದಲ ಕೆಲಸ ಕಟ್ಟೆಯ ಅಧಿಕಾರಿಯನ್ನು ಕಾಣುವುದು. ಗೂಟವನ್ನು ಹಿಡಿದು ಬಟಾ ಕಟ್ಟೆಗೆ ಜಿಗಿದ. “ ನೀವೆಲ್ಲ ದೋಣಿಯಲ್ಲೇ ಇರಿ,” ಎಂದು ಹೇಳಿ, ಆತ ಮಾಯವಾದ. ಬಟಾನ ಉದ್ಯೋಗಿಗಳಿಬ್ಬರು ಇಳಿದು ದೋಣಿಯನ್ನು ಗೂಟಕ್ಕೆ ಕಟ್ಟದರು. ಅಧಿಕಾರಿಯ ಗೂಡಾರದಲ್ಲಿ, ಒಬ್ಬ ವರ್ತಕ ತೆರಬೇಕಾಗಿದ್ದ ಕಟ್ಟೆಯ ಮೌಲ್ಯಕ್ಕೆ ಸಂಬಂಧಿಸಿ ವಿವಾದ ನಡೆಯುತ್ತಿತ್ತು, ಕುಳಿತಿದ್ದ ಅಧಿಕಾರಿಯ ಸುತ್ತಲೂ ಜನ ಗುಂಪು ಕೂಡಿದ್ದರು. ಬಟಾ ಸುಮ್ಮನೆ ನಿಂತ. ಒಮ್ಮೆ ಮಾತುಗಳ ನಡುವೆ ಕ್ಷಣಮಾನ ನೆಲೆಸಿದಾಗ, “ ಕಟ್ಟೆಯ ಅಧಿಕಾರಿಗಳಿಗೆ ವಂದನೆ.” ಎಂದ. (ಹೀಗೆ ವಂದಿಸುವವರು ಅದೆಷ್ಟು ಜನವೊ)ಅಪರಿಚಿತ ಕಂಠ.ನಿಧಾನ