ಪುಟ:Mrutyunjaya.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ಮೃತ್ಯುಂಜಯ

ವಾಗಿ ಅಧಿಕಾರಿ ಬಟಾನೆಡೆಗೆ ಕತ್ತು ತಿರುಗಿಸಿದ, “ನೀರಾನೆ ಪ್ರಾಂತದಿಂದ," ಎಂದ ಬಟಾ, ಅದು ಕೇಳಿಸಿದ್ದೇ ತಡ, ಅಧಿಕಾರಿ ಸೆಟೆದು ಕುಳಿತು, ಚಂಗನೆ ಎದ್ದ, ಅವನ ಮುಖ ವಿವರ್ಣವಾಯಿತು. ತನ್ನ ತುಟಿಗಳನ್ನು ನಾಲಿಗೆಯಿಂದ ಸವರಿ ಅತ ಕೇಳಿದ: “ ನಾಯಕರು ಬಂದಿದ್ದಾರೊ ?” "ಹೌದು." “ ನಡೀರಿ, ಹೋಗೋಣ.” ವರ್ತಕ, “ ನನಗೆ ತಡವಾಯಿತಲ್ಲ.” ಎಂದು ಗೊಣಗಿದ. * ಇರಪ್ಪ ಬರ್ತೆನೆ,” ಎಂದು ಅಧಿಕಾರಿ ಸಿಡಿನುಡಿದ. ಕಟ್ಟೆಯ ಅಧಿಕಾರಿಯನ್ನು ಕರೆದುಕೊಂಡು ಬಟಾ ಬಂದಾಗ, ನದಿಯನ್ನೂ ದಂಡೆಯನ್ನು ನೋಡುತ್ತ ದೋಣಿ ಛಾವಣಿಯ ಕೆಳಗೆ ಮೆನೆಪ್ಟಾ ಕುಳಿತಿದ್ದ. ಅವನೆಡೆಗೆ ದೃಷ್ಟಿಬಿರಿ “ಇವರೇ ನಮ್ಮ ನಾಯಕರು,” ಎಂದ ಬಟಾ. ಅಧಿಕಾರಿಗೆ ನಿರಾಸೆ, ಆಡಂಬರದ, ದರ್ಪದ ವ್ಯಕ್ತಿಯನ್ನು ಅವನು ನಿರೀಕ್ಷಿಸಿದ್ದ, ನಿರುತ್ಸಾಹದ ಸ್ವರದಲ್ಲಿ ಅವನೆಂದ : “ ಇವತ್ತೊ ನಾಳೆಯೇ ನೀವು ಬರಬೌದು, ಆದರದಿಂದ ಬರಮಾಡಿಕೊ ಬೇಕು-ಅಂತ ಅಮಾತ್ಯರಿಂದ ನಾನು ಆಜ್ಞಪ್ತನಾಗಿದ್ದೇನೆ. ನಿಮಗೆ ವಂದನೆ.” ಮೆನೆಪ್ಟಾ ನಸುನಗುತ್ತ ಗೋಣು ಆಡಿಸಿ, ವಂದನೆ ಸ್ವೀಕರಿಸಿದ. ಅಧಿಕಾರಿ ಮತ್ತೂ ಅಂದ ; "ಅರಮನೆಗೆ ಸುದ್ದಿ ತಲಪಿಸ್ತೆನೆ. ಅಲ್ಲಿಂದ ಯಾರಾದರೂ ಬರೋ ತನಕ ಗೂಡಾರದಲ್ಲಿ ವಿಶ್ರಾಂತಿ ತಗೊಳ್ಳಿ.”

  • ದೊಡ್ಡದಲ್ಲಿ, ನಾವೆಲ್ಲ ಇಲ್ಲೇ ದೋಣೀಲೇ ಇತ್ತೇವೆ.” “ ಹಾಗೇ ಮಾಡಿ. ಆದರೆ ನಾನು ಉಪಚರಿಸಲಿಲ್ಲ ಅಂತ ಅಮಾತ್ಯರು ಸಿಟ್ಯಾಗಾರೋ ಏನೋ."

" ಆ ಚಿಂತೆ ನಿಮಗೆ ಬೇಡ.ಚೆನ್ನಾಗಿಯೇ ನೋಡಿಕೊಂಡಿರೀಂತ ನಾನು ಅವರಿಗೆ ಹೇಳ್ತೀನೆ.”ಅಧಿಕಾರಿ ಹಲ್ಲು ಕಿರಿದ. ಮೆಚ್ಚತಕ್ಕ ಗಾಂಭೀರ್ಯ, ತೂಕದ ಮಾತು