ಪುಟ:Mrutyunjaya.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಮೃತ್ಯು೦ಜಯ

 " ಈ ರಾಜಕುಮಾರ ಏನೂ ಮಾಡ್ಲಿಲ್ವೋ ?"
" ತ೦ದೆಯ ಜೊತೆ ಇವನೂ ಬೇಟೆಗೆ ಹೋಗಿದ್ದ."
" ಇಲ್ಲಿ ಕೇಳಮ್ಮ. ಬಾತುಕೋಳಿ ನೀಲ ನದಿಯ ಅಕ್ಷಯ ಭಂಡಾರಕ್ಕೆ
ಸೇರಿದ್ದು. ಖ್ನೆಮು ದೇವರ ಸೊತ್ತು. ಬೆಲೆ ಇಲ್ಲದ್ದು. ಆದರೂ ಒಂದು
ಉಟೆನ್ ಮೌಲ್ಯ ಹಿಡೀತೇನೆ."
" ಸುರುಳಿಯ ಮೌಲ್ಯ ಎರಡು ಉಟೆನ್ಗೆ ಇಳಿಸಿ, ಗುರುಗಳೆ. ಬಾತು
ಕೋಳಿಯ ಮೌಲ್ಯ ಎರಡು ಉಟೆನ್ಗೆ ಏರಿಸಿ. ಅಲ್ಲಿಗೆ ಸರಿ ಹೋಗ್ತದೆ."
" ಆಗೋದಿಲ್ಲವಪ್ಪ. ಸುರುಳಿಗಳನ್ನು ಓದಿದ್ದರ ಶುಲ್ಕ ಒ೦ದು ರೊಟ್ಟಿ
ಕೊಟ್ಟ ನೀವು ಹೊರಡಿ."
ಊರಲ್ಲಿ ಸಮವಯಸ್ಕರಿಗೆ ಹೆಮ್ಮೆಯಿ೦ದ ಸುರುಳಿಯನ್ನು ತೋರಿಸ
ಬಹುದು ಎ೦ದುಕೊ೦ಡಿದ್ದ ರಾಮೆರಿಪ್ಟಾ. ಲಿಪಿಕಾರನ ಮಾತಿನ ಧಾಟಿ
ಯಿ೦ದ ಅವನಿಗೆ ಕಸಿವಿಸಿಯಾಯಿತು. ಮುಖ ಕಪ್ಪಿಟ್ಟಿತು.
ಅದನ್ನು ಗಮನಿಸಿದ ನೆಫಿಸ್ ಗಂಡನತ್ತ ನೋಡಿ ನುಡಿದಳು :
" ಬಾತುಕೋಳಿ ಜೊತೆಗೆ ಒ೦ದು ಕೈಚೀಲಾನೂ ಕೊಟ್ಟಬಿಡೋಣ."
ಮೆನೆಪ್ಟಾ "ಹೂ೦" ಎನ್ನುತ್ತಿದ್ದ೦ತೆ ಲಿಪಿಕಾರನೂ ಅ೦ದ :
" ಸರಿಯಪ್ಪ. ಚೂಟಿ ಹುಡುಗ ವಿದ್ಯಾವಂತನಾಗ್ತಾನೆ ಅ೦ತ ಹೇಳ್ದೆ.
ಹ್ಯಾಗೆ ತಾನೆ ಲಿಪಿ ಸುರುಳಿ ಕೊಡ್ದೇ ಇರ್ಲಿ ? ತಗೊಳ್ಳಿ. ಒ೦ದೇ ದಿವಸ
ದಲ್ಲಿ ಜೀರ್ಣವಾಗೋ ಬಾತುಕೋಳಿಗೆ ಬದಲಾಗಿ, ಸಹಸ್ರ ಕಾಲ ಬಾಳೋ
ಸುರುಳಿ ಕೊಡ್ತಾ ಇದ್ದೇನೆ, ವಿದ್ಯಾಧಿದೇವತೆ ಥೊಥ್ ನನ್ನನ್ನು ಕ್ಷಮಿಸ್ಲಿ.
ಎಲ್ಲಿನವರು ನೀವು ?"
" ನೀರಾನೆ ಪ್ರಾಂತ," ಎಂದ ಹುಡುಗ ರಾಮೆರಿಪ್ಟಾ.
" ಸರಿ! ಮಾತು ಬರ್ತದೆ. ಇನ್ನು ಓದು ಕಲಿತರಾಯ್ತು. ಅಕ್ಷರ
ಬರೋರು ಅಲ್ಲಿ ಇದಾರಾ ?"
ಮೆನೆಪ್ಟಾನೆ೦ದ :
" ಕ೦ದಾಯ ಲೆಕ್ಕ ಬರೆಯೋ ಒಬ್ರಿದಾರೆ."
"ಮಜಾ ಕೆಲ್ಸ. ಸ್ವಲ್ಪ ಹೆಚ್ಚು ಕಮ್ಮಿ ಬರೆದರಾಯ್ತು.ಒಳ್ಳೆ ಸ೦ಪಾದ್ನೆ."