ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೯೮ ಮೃತ್ಯುಂಜಯ
(ಮಾತುಗಳು:
“ಹಿಡಿದು ತಂದಿದ್ದಾರೊ ?”
“ಇಲ್ಲ. ತಾನಾಗಿಯೇ ಬಂದಿದ್ದಾನೆ."
“ನೋಟಕ್ಕೆ ತೀರಾ ಸಾಮಾನ್ಯ ಮನುಷ್ಯ”
“ಜನನಾಯಕ ಅಲ್ಲವಾ?”
“ತಪ್ಪಾಯ್ತು ಅಂತ ಕ್ಷಮೆ ಕೇಳ್ತಾನಂತೊ ?”
"ಛೆ! ಛೆ! ಎಷ್ಟು ಶಾಂತವಾಗಿದ್ದಾನೆ! ಅಮಾತ್ಯರೇ ಕರೆಸಿರ
ಬೌದು_ಸೆಡ್ ಉತ್ಸವಕ್ಕೆ.”
“ಆಹ! ಸೆಡ್ ಉತ್ಸವ! ಯಾವಾಗಲಂತೆ?”
“ಈ ತಿಂಗಳು ಅಥವಾ ಮುಂದಿನ ತಿಂಗಳು. ಮಹಾ ಆರ್ಚಕರು
ಊರಲ್ಲಿಲ್ಲ. ಅವರು ಒಂದ್ಮೇಲೆ ದಿನ ಗೊತ್ಮಾಡ್ತಾರೆ....”
“ಸ್ವಲ್ಪಹೊತ್ತು ಇಲ್ಲೇ ಇರೋಣ. ಈ ನಾಯಕ ಹೋಗೋದು ಅರ
ಮನೆಗೂ ಸೆರೆಮನೆಗೂ ಅನ್ನೋದು ತಾನಾಗಿಯೇ ಗೊತ್ತಾಗ್ತದೆ.”)
ಸ್ವಲ್ಪ ಹೊತ್ತಿನಲ್ಲಿಯೇ ಗದಾಧಾರಿ ಭಟರು ಬಂದರು. ದಟ್ಟಗೊಳ್ಳು
ತ್ತಿದ್ದ ಜನಸಂದಣಿಯನ್ನು ಉದ್ದೇಶಿಸಿ ಅವರೆಂದರು :
“ಹಿಂದಕ್ಕೆ ಸರೀರಿ! ಸಾಲಾಗಿ ನಿಲ್ಲಿ!”
ಸಾಲು ಬೆಳೆಯಿತು. ದೋಣಿಕಟ್ಟೆಯ ವಿಶಾಲ ಬೀದಿಯ ಎರಡೂ
ಬದಿಗಳಲ್ಲಿ ಜನ ಕಲೆತರು. ಬೀದಿ ದಾಟಲು ಅನುಮತಿ ದೊರೆಯದೆ ದಾರಿ
ಹೋಕರು ಅಲ್ಲಲ್ಲೇ ನಿಂತರು.
(ತಡವಾಗಿ ಬಂದವರು ಕೇಳಿದರು:
“ಯಾರು ಬರ್ತಾರೆ?”
“ಗೊತ್ತಿಲ್ಲಪ್ಪ, ಪೆರೋ ಇರ್ಬೌದು.”
“ಪೆರೋ ಆಗಿದ್ರೆ ಭಟರ ಉಸ್ತುವಾರಿಗೆ ದಳಪತಿ ಬರಿದ್ದ. ಅಮಾತ್ಯ
ರೂಂತ ಕಾಣ್ತದೆ.”
“ಸ್ವಲ್ಪ ಹೊತ್ತು ಕಾದಿರಿ; ತಾನೇ ಗೊತ್ತಾಗುತ್ತಲ್ಲ?”)
* * * *