ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೧೯೯ ಸ್ವಲ್ವ ಸಮಯದಲ್ಲೇ ಕರಿಯ ಸೇವಕರು ಹೊತ್ತ ಅರಮನೆಯ ಪೀಠ ಪಲ್ಲಕಿ ಬಂತು. ಛಾವಣಿಯ ಕೆಳಗೆ ಒಬ್ಬ ವ್ಯೆಕ್ತಿ ಕುಳಿತಿದ್ದ. ನಡುಪಟ್ಟಿಯ ಕೊರಳ ಆಭರಣಗಳು ಸಿರಿವಂತಿಕೆಯನ್ನು ಸೂಚಿಸುತ್ತಿದ್ದುವು. ಯಾರೊ ? ಜನರಿಗೆ ತಿಳಿಯದು. ಸಾಲಿನಲ್ಲಿ ಇದ್ದ ರಾಜಧಾನಿಯ ಪ್ರತಿಯೊಬ್ಬ ಹತ್ತಿರದ ಭಟನನ್ನು ಕೇಳಿದ: “ಪೀಠಪಲ್ಲಕಿಯಲ್ಲಿರೋದು ಯಾರು?” “ಗೊತ್ತಿಲ್ಲಪ್ಪ,” ಎಂದ ಕಾರ್ಯನಿರತ ಭಟ. “ಪಲ್ಲಕಿ ದಾಟಿದೊಡನೆ ಜನ ಬೀದಿಗಿಳಿಯಲು ಯತ್ನಿಸಿದರು.ಭಟರು ಬಿಡಲಿಲ್ಲ. ಅವರೆಂದರು : “ಕಟ್ಟೆಯಿಂದ ಪಲ್ಲಕಿ ವಾಪಸಾಗೋವರೆಗೂ ಅಲ್ಲಿಯೇ ಇರಿ!” ದೋಣಿಕಟ್ಟೆಯ ಮೇಲಿನ ಕಲರನ ಕಡಿಮೆಯಾಯಿತು.ಬರಬೇಕಾದ ವರು ಬಂದರು ಎನ್ನುವುದಕ್ಕೆ ಅದು ಮುನ್ಯೂಚನೆ. ಬಟಾನ ದೃಷ್ಟಿ ಕಟ್ಟೆಯ ದ್ವಾರದ ಮೇಲೆ ನೆಟ್ಟಿತ್ತು. ಕಟ್ಟೆಯ ಅಧಿಕಾರಿ ಅತ್ತ ಧಾವಿಸಿದುದನ್ನೂ ಬೋಯಿಗಳು ಪಲ್ಲಕಿಯನ್ನು ಕೆಳಕ್ಕೆ ಇಟ್ಟು ದನ್ನೂ ಆತ ಕಂಡ. ಪೀಠದಲ್ಲಿದ್ದವನು ಎದ್ದು ಹೊರಬರುತ್ತಿದ್ದಂತೆ ಬಟಾ ಉದ್ಗರಿಸಿದ: "ಓ ಸೆತ್! ಇದನೋಡು! ಗೇಬು!" ಗೇಬುವನ್ನು ಕರೆದುಕೊಂಡು ಕಟ್ಟೆಯ ಅಧಿಕಾರಿ ನೀರಾನೆ ಪ್ರಾಂತದ ದೋಣಿಯತ್ತ, ಬರತೊಡಗಿದ. ಮೆನೆಪ್ ಟಾನ ಎದೆಗುಂಡಿಗೆ ಒಂದು ಕ್ಷಣ ತೀವ್ರವಾಗಿ ತುಡಿಯಿತು. ಆತ ಆಳವಾಗಿ ಉಸಿರಾಡುತ್ತ ಭಾವೋದ್ವೇಗವನ್ನು ಹತೋಟಿಗೆ ತಂದು ಕೊಂಡ.ಬಟಾ ನೀಡಿದ ಕೈಯನ್ನು ಹಿಡಿದು ದೋಣಿಯ ಅಂಚಿನ ಮೇಲಿಂದ ಆತ ಕಟ್ಟಿಗೆ ಬಂದ. ಆತ್ಮವಿಶ್ವಾಸದ ನಿಲುವು. ಜನಜಂಗುಳಿಯ ದೃಷ್ಟಿಯೇ ಅವನ ಮೇಲೆ. ಗೇಬುವೂ ನೋಡುತ್ತಿದ್ದ. ಇರುವುದಕ್ಕಿಂತಲೂ ಹೆಚ್ಚು ಎತ್ತರದವನಾಗಿ ತಾನು ಕಾಣಿಸುತ್ತಿದ್ದೇನೆ ಎಂದು ಭಾಸವಾಯಿತು ಮೆನೆಪ್ ಟಾಗೆ.