ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೦೦ ಮೃತ್ಯಂಜಯ
ವಂದನೆಯ ಸಮಸ್ಯೆಯನ್ನು ಗೇಬು ಬಗೆಹರಿಸಿದ. ಸರಸರನೆ ನಡೆದು ಬಂದು,ಮುಗುಳುನಗುತ್ತಿದ್ದ ಮೆನೆಪ್ ಟಾನ ಕೈಗಳನ್ನು ತನ್ನ ಕೈಗಳಿಂದ ಹಿಡಿದುಕೊಂಡು, ಆ ಕಡೆ ಈ ಕಡೆ ತೊಟ್ಟಿಲಾಡಿಸುತ್ತ, ಅವನೆಂದ : “ಓ ಮೆನೆಪ್ ಟಾ. ಅಂತೂ ಬಂದಿರಲ್ಲ! ಅಮಾತ್ಯರು 'ಗೇಬು, ನೀನೇ ಹೋಗಿ ಕರಕೊಂಡ್ಬಾ'ಅಂದ್ರು.'ಖಂಡಿತ ಹೋಗ್ತೇನೆ. ಅದಕ್ಕಿಂತ ಹೆಚ್ಚು ಸಂತೋಷದ ಕೆಲಸ ಬೇರೆ ಇಲ್ಲ,' ಎಂದೆ. ಊರಲ್ಲಿ ಎಲ್ಲರೂ ಕ್ಷೇಮವಾ?” “ಹ್ಞ.ಕ್ಷೇಮವಾಗಿದ್ದಾರೆ.” “ನಾನು ನಿಮ್ಮ ಬಂಧು.. ನನ್ನ ಹೆಸರು ಹಿಡಿದ ಗೇಬು' ಅಂತ ಕರೀರಿ." ಮೆನೆಪ್ ಟಾನಕ್ಕ. “ಹೀಗೆ ನಗಾನಗ್ತಾನೆ ಎಲ್ಲರ ಮನಸ್ಸನ್ನೂ ಗೆದ್ದಿರಿ ಅಂತ ಕಾಣ್ತದೆ... ರಾಜಧಾನಿಗೆ ಇದೇ ಪ್ರಥಮ ಭೇಟಿ ಅಲ್ವಾ?” "ಹೌದು, ಪ್ರಥಮ ಭೇಟಿ." ಕಟ್ಟಿಯ ಅಧಿಕಾರಿ ಬಾಗಿ ನಮಿಸುತ್ತ,"ಗೂಡಾರದಲ್ಲಿ ವಿಶ್ರಾಂತಿ...." ಎಂದು ತೊದಲಿದ. ಗೇಬು ದರ್ಪದ ಧ್ವನಿಯಲ್ಲಿ, “ಇಲ್ಲ. ನಾವು ನೇರವಾಗಿ ಅರಮನೆಗೇ ಹೋಗ್ತೇವೆ”ಎಂದು ನುಡಿದು ತನ್ನ ಎಡಗೈಯನ್ನು ಹಿಂದಕ್ಕೆ ತೆಗೆದುಕೊಂಡು, ಬಲಗೈಯಿಂದ ಮೆನೆಪಟಾನ ಎಡಗೈಯನ್ನಷ್ಟೇ ಹಿಡಿದುಕೊಂಡು, "ನಡೀರಿ," ಎಂದ. ಗೂಡಾರದಿಂದ ಹೂಹಾರಗಳು ಬಂದವು.ಕಟ್ಟಿಯ ಅಧಿಕಾರಿ ಮೆನೆಪ್ ಟಾ ಮತ್ತು ಗೇಬು ಇಬ್ಬರಿಗೂ ಹಾರ ಹಾಕಿ, ತನ್ನ ಕರ್ತವ್ಯ ನೆರವೇ ರಿಸಿ,ಚಪ್ಪಾಳೆ ತಟ್ಟಿದ.ನೆರೆದ ಎಲ್ಲರ ಅಂಗೈಗಳೂ ಸದ್ದು ಮಾಡಿದುವು. ಭಟರು ದ್ವಾರದ ಬಳಿಗೆ ಸಾಗಿದುದರಿಂದ ಕಟ್ಟೆಯ ಮೇಲಿನ ಜನ ಸಾಲು ಕಡಿದು ಗುಂಪಾದರು. ಪಲ್ಲಕಿಯ ಪೀಠಗಳ ಮೇಲೆ ಗೇಬು, ಮೆನೆಪ್ ಟಾ ಇಬ್ಬರೂ ಕುಳಿತರು.