ಪುಟ:Mrutyunjaya.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೦೩

   "ಅದೆಲ್ಲ ರಾಜಕಾರಣ. ನೀವೇ ಮಾತಾಡ್ಕೊಳ್ಳಿ. ಅಂತೂ ಆ ಕೆಪ್ಘು 

ಪವಾಡವನ್ನೇ ಸಾಧಿಸಿದ. ಅವನು ನಿಮ್ಮ ಆಡಳಿತವನ್ನು ಹೊಗಳಿದ್ದೇ ಹೊಗಳಿದ್ದು. ಅವನು ಬಂದಾಗ ಟೆಹುಟ ಊರಲ್ಲಿರ್‍ಲಿಲ್ಲ. ಇದ್ದಿದ್ದರೆ ಸ್ವಲ್ಪ ಕೂಗಾಟವಾಗ್ತಿತ್ತು.

    “ ಈಗ ಟೆಹುಟ ಇಲ್ಲಿಯೇ ಇದ್ದಾರೆ ಅಲ್ಲವಾ ?”
    ನಸುನಕ್ಕು, ಒಂದು ಕ್ಷಣ ಸುಮ್ಮನಿದ್ದು, ಗೇಬು ನುಡಿದ:
    “ ಹೇಳ್ತೇನೆ. ನನಗೇನಂತೆ ? ಅಮಾತ್ಯರಿಗೆ ವಯಸ್ಸಾಯ್ತು; ಆಡಳಿತದ
ಮೇಲಿನ ಬಿಗಿ ಸಡಿಲವಾಗಿದೆ-ಅಂತ ಟೆಹುಟಯ ದೂರು. ಅಮೆರಬ್‍ರನ್ನು
ಮನೆಗೆ ಕಳುಹಿಸಿ ತಾನೇ ಅಮಾತ್ಯನಾಗಬೇಕು ಅನ್ನೋ ಆಸೆ ಅವನಿಗೆ. ಆಗಲೇ
ಗುಟ್ಟಾಗಿ ಮಹಾ ಅರ್ಚಕರ ಪಕ್ಷ ವಹಿಸಿದ್ದಾನೆ. ಚಾಣಾಕ್ಷ ಅಮೆರಬ್‍ಗೆ
ಇದೆಲ್ಲ ತಿಳಿಯದ್ದಲ್ಲ. ಉತ್ತರದ ಪ್ರಾಂತಗಳಲ್ಲಿ ಗಣತಿ ಕೆಲಸ ಕೊಟ್ಟು ಟೆಹುಟ
ಯನ್ನು ಕಳಿಸಿ ಬಿಟ್ಟಿದ್ದಾರೆ. ಸೆಡ್ ಉತ್ಸವಕ್ಕೆ ಅಂತ ನೀವೇನೋ ಬಂದಿದ್ದೀರಿ.
ಆದರೆ ಉತ್ಸವಕ್ಕೆ ಇನ್ನೂ ದಿನ ಗೊತ್ತಾಗಿಲ್ಲ. ಮಹಾ ಅರ್ಚಕರೇ ರಾಜಧಾನಿ
ಯಲ್ಲಿಲ್ಲ. ಆನ್‍ನಲ್ಲಿ ವಸತಿ ಮಾಡಿದ್ದಾರೆ. ಹಲವಾರು ಮುಖ್ಯ ದೇವಸೇವಕ
ರನ್ನು ಆಲ್ಲಿಗೆ ಕರೆಸಿದ್ದಾರಂತೆ. ಧಾರ್ವಿಕ ಜಿಜ್ಞಾಸೆಯಂತೆ.”
   ಪಲ್ಲಕಿ ಬೇರೊಂದು ಬೀದಿಗೆ ತಿರುಗಿತು.ಅಲ್ಲಿಯೂ ಇಕ್ಕೆಲ್ಲಗಳಲ್ಲಿ

ಜನರಿದ್ದರು. ಪಲ್ಲಕಿ ಕಂಡೊಡನೆ ಅವರು ಕರತಾಡನ ಮಾಡಿದರು.

   ಗೇಬುವೆಂದು :
  " ಅದೃಷ್ಟದ ಬೀದಿ ಒಂದು ಕಾಲದಲ್ಲಿ ಜನ್ಮದಿನದ ಆಧಾರದ ಮೇಲೆ
ಭವಿಷ್ಯ ಹೇಳುವ ಹತ್ತಾರು ದೇವಸೇವಕರು ಈ ಬೀದೀಲಿ ವಾಸವಾಗಿದ್ರು.
ಕೆಲವರು ತಮ್ಮ ಅದೃಷ್ಟದ ಬೆನ್ನಟ್ಟ ಬೇರೆ ಊರುಗಳಿಗೆ ಹೋದ್ರು. ಈಗಲೂ
ನಾಲ್ಕಾರು ಕುಟುಂಬಗಳಿವೆ.ಆದರೆ ಕುಶಲಕರ್ಮಿಗಳೇ ಹೆಚ್ಚು ಸಂಖ್ಯೆ
ಯಲ್ಲಿ ವಾಸವಾಗಿದ್ದಾರೆ. ಹೆಸರು ಮಾತ್ರ ಅದೃಷ್ಟದ ಬೀದಿ ಆಂತಲೇ ಉಳ
ಕೊಂಡಿದೆ. ಇದನ್ನು ದಾಟಿದರೆ ಅಕ್ಕಸಾಲಿಗರ ಬೀದಿ. ಆಭರಣ ಮಾಡು
ವವರು, ಮಾಡಿಸುವವರು, ಮಾರುವವರು, ಕೊಳ್ಳುವವರು, ಒತ್ತೆ ಇಡುವವರು-
ನಾನಾ ಬಗೆಯ ಜನ ಅಲ್ಲಿರ್‍ತಾರೆ ಆ ರಸ್ತೆ ಅರಮನೆಯ ಮುಂಭಾಗದ ವಿಶಾಲ