ಪುಟ:Mrutyunjaya.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೪ ಮೃತ್ಯುಂಜಯ ಬೀದಿಗೆ ಸೇರ್‍ತದೆ.”

     ಮೆನೆಪ್‍ಟಾ ಕೇಳಿದ:
     " ಪ್ರಾಂತಪಾಲರೆಲ್ಲ ಬಂದಿದ್ದಾರೇನು ?”
     “ ಈಗಲೇ ಎಲ್ಲಿ ? ನೀವು ಬರ್‍ತೀರಿ ಅಂತ ನನ್ನನ್ನು ಮೊದಲೇ ಕರೆಸಿದ್ರು.
ಉಳಿದವರೆಲ್ಲ ಇನ್ನು ಮೇಲಿಂದ ಒಬ್ಬೊಬ್ಬರಾಗಿ ಬರ್‍ಬೌದು."
   ಅಕ್ಕಸಾಲಿಗರ ಬೀದಿಯಲ್ಲಿ ಹೆಂಗಳೆಯರು ಹೇರಳ ಸಂಖ್ಯೆಯಲ್ಲಿದ್ದರು.
ದಾಸಿಯರೊಡನೆ ಒಬ್ಬ ಅಕ್ಕಸಲಿಗನಿಂದ ಇನ್ನೊಬ್ಬನಲ್ಲಿಗೆ ಅಲೆಯುತ್ತಿದ್ದ
ಶ್ರೀಮಂತ ಸ್ತ್ರೀಯರು (ಕೆನ್ನೆ ತುಟಗಳಿಗೆ ಕೆಂಪು, ವಕ್ಷಸ್ವಲ ತುಂಬ ಆಭರಣ.)
ನಡುಬಟ್ಟೆಯ ಮೇಲೆ ಇನ್ನೊಂದು ಅರಿವೆ. ಬಳುಕುವ ಶರೀರವನ್ನು ಪಾದ
ಗಳಿಂದ ಎಡಸ್ತನದ ವರೆಗೂ ಅದು ಆಚ್ಛಾದಿಸಿತ್ತು. ಒಂದು ಅಂಚು ಎಡ
ಭುಜವನ್ನು ಹಾದು ಬಲಸ್ತನದ ಕೆಳಗಿನ ವರೆಗೆ ಬಂದು, ಅಲ್ಲಿ ಇನ್ನೊಂದರೊಡನೆ
ಗಂಟು ಕೂಡುತ್ತಿತ್ತು.  ಸಿರಿವಂತಿಕೆಯ ಲಕ್ಷಣಗಳಿಲ್ಲದ ಸ್ತ್ರೀಯರೂ ಇದ್ದರು.
ಇವರಲ್ಲಿ ಪ್ರಾಧಾನ್ಯ ಬೆಳ್ಳಿಗೆ, ಬಂಗಾರಕ್ಕಲ್ಲ.ಮಂಡಿಗಳ ತನಕ ನಡುಬಟ್ಟೆ;
ಒಂದು ಮೇಲುದ.
   ಪಲ್ಲಕಿ ಬಂದಿತೆಂದು, ಅವರೆಲ್ಲರ ದೃಷ್ಟಿಯೂ ಅದರೆಡೆಗೆ. ಮಹಾನು
ಭಾವರು ಯಾರೆಂದು ತಿಳಿಯುವ ಬಯಕೆ. ಆದರೆ ಅದನ್ನು ತಣಿಸುವವರು
ಯರು ?
  ಒಬ್ಬಾಕೆ-ಶ್ರೀಮಂತ ಸುಂದರಿ-ಗೇಬುವನ್ನು ನೋಡಿ ಮೋಹಕ ನಗೆ
ಬೀರಿದಳು. ಗೇಬು ಕೈ ಆಡಿಸಿದ; ಮೆನೆಪ್ ಟಾನ ದೃಷ್ಟಿಯನ್ನು ಗಮನಿಸಿ,

"ಪರಿಚಯದವಳು,"ಎಂದ.

   ಕೆಲವೇ ನಿಮಿಷಗಳಲ್ಲಿ ವಿಶಾಲ ಬೀದಿ ಕಾಣಿಸಿತು. ಬಲಕ್ಕೆ ಹೊರಳಿ
ದೊಡನೆಯೇ ಕಣ್ಣಿಗೆ ಬಿತ್ತು, ಪಶ್ಚಿಮಾಭಿಮುಖವಾಗಿದ್ದ ಪೆರೋನ ಅರ
ಮನೆಯ ಮಹಾದ್ವರ.
   
 ಆರಾಳು ಎತ್ತರದ ಪ್ರವೇಶ ಗೋಪುರ. ತುದಿಯಲ್ಲಿ ಎಡದಿಂದ ಬಲಕ್ಕೆ
ಎಂಟು ಮೊಳ; ಆಳ ನಾಲ್ಕು ವೊಳ.   ಆ ಗೋಪುರದಲ್ಲಿ ಹೆಬ್ಬಾಗಿಲು. ಅದು