ಪುಟ:Mrutyunjaya.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೦೫ ಸುಮಾರು ಹದಿನಾರು ಮೊಳ ಅಗಲ. ಎರಡಾಳು ಎತ್ತರ. ಥಳಥಳನೆ ಹೊಳೆಯುತ್ತಿದ್ದ ಬಂಗಾರ ಲೇಪನದ ಬಾಗಿಲು. ಆ ಕಡೆ ಈ ಕಡೆ ಸಶಸ್ತ್ರ ದ್ವಾರ ಪಾಲಕರು ಒಳಗೆ ವಿಶಾಲ ಪುಪ್ಪೋದ್ಯಾನ. ಉದ್ಯಾನದ ನಡುವೆ ಕೆಂಪು ಇಟ್ಟಿಗೆಯ ಭವ್ಯ ಸೌಧ. ಆ ಸೌಧದ ಬಾಗಿಲವರೆಗೂ ದಾರಿ.ಮಹಾಮನೆ ಅರಸನ ವಸತಿ. ಜತೆಗೆ ಮತ್ತೂ ಹತ್ತಾರು ಕಟ್ಟಡಗಳಿದ್ದುದು ಕಂಡು ಬರುತ್ತಿತ್ತು. ಪ್ರವೇಶ ಗೋಪುರದಿಂದ ಮೊದಲ್ಗೊಂಡು ಆ ವಿಸ್ತಾರ ಪ್ರದೇಶವನ್ನೆಲ್ಲ ಆವರಿಸಿತ್ತು. ಮರಳುಗಲ್ಲಿನ ಎರಡು ಮೊಳ ಅಗಲದ ಹೆಬ್ಬಾಗಿಲಿನಷ್ಟೇ ಎತ್ತರದ ಪ್ರಾಕಾರ. ಮಹಾದ್ವಾರವನ್ನು ಸಮೀಪಿಸಿದ ಪಲ್ಲಕಿ ಬಲಕ್ಕೆ ಹೊರಳಿತು. ಗೇಬು ನುಡಿದ:

  “ನಾವು ನೇರವಾಗಿ ಅತಿಥಿ ಗೃಹಕ್ಕೆ ಹೋಗ್ತಿದ್ದೇವೆ. ಅದಕ್ಕೆ ಬೇರೆಯೇ ದಾರಿ ಇದೆ.”

ನೂರು ಮಾರು ಹೋದೊಡನೆ ಪ್ರಾಕಾರದಲ್ಲಿ ಇನ್ನೊಂದು ಬಾಗಿಲು ಕಾಣಿಸಿತು. ತಲಪುವಷ್ಟರಲ್ಲೇ ಕಿರ್ರೆಂದು ಆದು ತೆರೆದುಕೊಂಡಿತು. ದ್ವಾರ ಪಾಲಕರು ನಮಿಸಿದರು. ಪಲ್ಲಕಿ ಒಳಗೆ ಹೋಯಿತು.

  ಅತಿಥಿಗೃಹದ ಮುಂದೆಯೂ ಪ್ರತ್ಯೇಕ ಹೂದೋಟ, ಮೀನುಕೊಳ ಇದ್ದುವು. ಅತಿಥಿಗೃಹದ ಉಸ್ತುವಾರಿಯ ಅಧಿಕಾರಿ ಬಂದವರನ್ನು ಸ್ವಾಗತಿಸಿ ಒಳಕ್ಕೆ ಕರೆದೊಯ್ದ. ನಾಲ್ಕಾರು ಕೊಠಡಿಗಳು, ಮಂಚಗಳು, ಹಲವಾರು ಪೀಠೋಪಕರಣಗಳು, ಸೇವಕರು. ಬಣ್ಣ ಬಣ್ಣದ ಚಿತ್ತಾರಗಳಿದ್ದ ಹುಲ್ಲು

ಚಾಪೆಗಳಿಂದ ಗೋಡೆಗಳು ಅಲಂಕೃತವಾಗಿದ್ದುವು.

  ಪ್ರಾಂತಪಾಲರೆಲ್ಲ ಇಲ್ಲಿಯೇ ವಸತಿ ಮಾಡ್ತಾರೇನು?”

_ ಮೆನೆಪ್ಟಾ ಕೇಳಿದ. " ಛೆ! ಛೆ! ನಾಲ್ವತ್ತು ಜನರಿಗೆ ಇಲ್ಲೆಲ್ಲಿದೆ ಜಾಗ ? ನಗರದ ನೈಋತ್ಯ ಭಾಗದಲ್ಲಿ ದೊಡ್ಡ ರಾಜಭವನವಿದೆ. ನಾನೂ ಅಲ್ಲಿಯೇ ಇರ್ತೇನೆ. ನೀವು, ನಿಮ್ಮ ಅಂಗರಕ್ಷಕರು, ಸೇವಕರಿಗೆಲ್ಲ ಇಲ್ಲಿ ಆತಿಥ್ಯ” ಮೆನೆಪ್ ಟಾನೊಂದಿಗೆ ಮೊಗಸಾಲೆಯಲ್ಲಿ ನಿಂತು, ದೂರ ದೂರಕ್ಕೆ