ಪುಟ:Mrutyunjaya.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಮೃತ್ಯುಂಜಯ ಬೊಟ್ಟು ಮಾಡಿ ತೋರಿಸುತ್ತ ಗೇಬು ಅಂದ : “ ಈ ಕಡೆ ಪ್ರಾಕಾರದಲ್ಲಿ ಇನ್ನೊಂದು ದ್ವಾರ ಇದೆ. ಅದನ್ನು ದಾಟಿ ಹೊರ ಹೋದರೆ ನೀಲನದಿಯ ದಂಡೆ ಸಿಗ್ರದೆ. ಒಂದೊಂದು ರಾತ್ರೆ ಪೆರೋ ಮತ್ತು ರಾಣೀ ವಾಸದವರು ಅಲ್ಲಿ ತಿರುಗಾಡೋದುಂಟು. ಆ ದ್ವಾರ ದಾಟಿ ದೊಡನೆ ಸಿಗೋದು ಅರಮನೆಯ ದೇವಮಂದಿರ. ಇದು ಪೂರ್ವಾಭಿಮುಖ. ಅರಮನೆಯ ಶಾಲೆಯೂ ಅದರಲ್ಲೇ. ಹತ್ತಿರದಲ್ಲಿ ಪವಿತ್ರ ಕೊಳವಿದೆ. ಒತ್ತಿ ಕೊಂಡು ದೇವಸೇವಕರ ಮನೆಗಳಿವೆ. ಮಹಾಮನೆಗೂ ಮಂದಿರಕ್ಕೂ ನಡುವೆ ವಿಶಾಲ ಬಯಲು. ಮಹಾಮನೆಯ ಎಡ ಮಗ್ಗುಲಲ್ಲಿರೋದು ಅಮಾತ್ಯ ಭವನ. ರಾಜಕಾರ್ಯ, ವಿಚಾರಣೆ, ತೀರ್ಪು ಎಲ್ಲಾ ಆ ಭವನದಲ್ಲಿ. ರಾಜ ಬಂದಿಗಳಿಗಾಗಿ ಕಾರಾಗೃಹ, ವಧಸ್ಥಾನ. ಅದರ ಪಕ್ಕದಲ್ಲಿರೋದು ದಾಖಲೆ ದಸ್ತಾವೇಜುಗಳ ಉಗ್ರಾಣ. ದೇವಮಂದಿರದ ಆಚೆಗೆ ಅರಮನೆಯ ಕರ್ಮಾ ಗಾರಗಳು. ಆರಮನೆಗೆ ಸಂಬಂಧಿಸಿದ ಮರದ ಕೆಲಸವಿರಲಿ,ನೆಯ್ಗೆ ಇರಲಿ, ಹೊಲಿಗೆ ಇರಲಿ ಎಲ್ಲ-ಈ ಕರ್ಮಾಗಾರಗಳಲ್ಲಿ ನಡೀತವೆ. ಮುಂದೆ ಶಸ್ತ್ರಾಗಾರ,ಕಣಜಗಳು,ಪಶುಶಾಲೆ,ಕಾವಲು ಭಟರು ನರ್ತಕರು ಹಾಡುಗಾರರ ಗಾರ,ಕಣಜಗಳು,ಪಶುಶಾಲೆ,ಕಾವಲು ಭಟರು ನರ್ತಕರು ಹಾಡುಗಾರರ_ದಾಸದಾಸಿಯರ ಮನೆಗಳು ಅಮಾತ್ಯ ಭವನದ ಪಕ್ಕದಲ್ಲಿ ಒಂದು ಕಟ್ತಿ ದಾರಲ್ಲ ? ಅದು ದಂಡನಾಯಕರ ಕಾರ್ಯಾಲಯ, ಸಂದರ್ಶನ ಕೊಠಡಿ,ಸಭಾಮಂದಿರ, ಔತಣ ಭವನ, ಕಿರೀಟ ಕೊಠಡಿ, ವೇಷಭೂಷಣ ಕೊಠಡಿಗಳೆಲ್ಲ ಮಹಾಮನೆಯ ಮುಂದಿನ ಅರ್ಧದಲ್ಲಿವೆ; ಹಿಂದಿನ ಅರ್ಧ ಪೆರೋ ಮತ್ತು ಅಂತಃಪುರದವರ ವಾಸಕ್ಕೆ. ಅಲ್ಲಿಯೇ ಒಂದು ಕಡೆ ಬೊಕ್ಕಸದ ಕೊಠಡಿಯೂ ಇದೆ. ಮಹಾಮನೆಗೆ ಹತ್ತಿರದಲ್ಲೇ ಇವೆ_ಅಡುಗೆ ಮನೆ, ಉಗಾಣಗಳು.” ಮೆನೆಪ್ ಟಾ ಮುಗುಳುನುಕ್ಕು ಅಂದ : "ಇಷ್ಟನ್ನೆಲ್ಲ ಒಂದು ಪುಟ್ಟ ನಗರ ಅಂತಲೇ ಕರೀಬಹುದು." “ ಓಹೋ ನಗರದೊಳಗೊಂದು ನಗರ. ಜಗತ್ತಿನಲ್ಲೇ ಅತ್ಯಂತ ಬಲಾಢ್ಯವಾದ ರಾಷ್ಟ್ರದ ಕೇಂದ್ರ ಬಿಂದು ಇದು. ದಂಡೆಯ ಹತ್ತರವಿರುವ ಆ ದೊಡ್ಡ ಗೋಪುರ ಕಂಡಿರಾ ? "