ಪುಟ:Mrutyunjaya.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೦೭ "ಹ್ಞ."
"ತಲೆಯ ಮೇಲೆ ಕೆರೆ! ನದಿಯಿಂದ ಷಾಡೂಪ್ ನಲ್ಲಿ ನೀರೆತ್ತಿ ಒಂದು
ಕೆರೆಗೆ ಸುರಿಯೋದು. ಆದರಿಂದ ಎತ್ತಿ ಎತ್ತರದ ಇನ್ನೊಂದು ಕೆರೆಗೆ. ಅದ
ರಿಂದ, ಮೇಲಿನದಕ್ಕೆ ಅಲ್ಲಿಂದ ನೀರು ತಾಮ್ರದ ಕೊಳಾಯಿಗಳಲ್ಲಿ ಹರಿದು
ಈ ಪುಟ್ಟ ನಗರದ ಮೂಲೆ ಮೂಲೆಗೂ ಹೋಗ್ತದೆ. ಇಲ್ಲಿ ಜಮೆಯಾಗುವ
ಕೊಳೆ ನೀರೆಲ್ಲ ಒಳಚರಂಡಿಯ ಮೂಲಕ ದೂರ ಹೋಗ್ರದೆ-ಬಡ ರೈತರ
ಹೊಲಗಳಿಗೆ. ಹೇಗಿದೆ ವ್ಯವಸ್ಥೆ ?"
"ವಿಸ್ಮಯಕರ!”
ತಲೆಬಾಗಿಲ ಬಳಿ ಯಾರೋ ಒಬ್ಬ ಎರಡು ಮೂರು ಸಾರೆ ಮುಖ
ತೋರಿಸಿದಂತೆ ಗೇಬುಗೆ ಭಾಸವಾಗಿತ್ತು.
"ಯಾರದು?" ಎಂದು ಆತ ಕೇಳಿದ.
ಮನುಷ್ಯ_ಲಿಪಿಕಾರ_ಹೊಸ್ತಿಲು ದಾಟಿ ಬಂದು, ಗೇಬು ಮೆನೆಪ್
ಟಾರಿಬ್ಬರಿಗೂ ದೂರದಿಂದಲೇ ನಮಿಸಿ, ಕಣ್ಣುಸನ್ನೆಯಿಂದ ಗೇಬುವನ್ನು
ತನ್ನೆಡೆಗೆ ಕರೆದ; ಕಿವಿಯಲ್ಲಿ ಏನನ್ನೋ ಉಸುರಿದ. ಮತ್ತೆ ನಮಿಸಿ ಹೊರಟು
ಹೋದ.
ಗೇಬು ಮೆನೆಪ್ ಟಾನೊಡನೆ ಅಂದ:
“ಆಮಾತ್ಯರು ಈಗ ತಾನೇ ದಿನದ ರಾಜಕಾರ್ಯ ಮುಗಿಸಿ,ನಿಮಗೆ
ಆದರಾತಿಥ್ಯ ನೀಡಲು ಆದೇಶವಿತ್ತು, ಮನೆಗೆ ಹೋದರಂತೆ. ಇನ್ನು ನಾಳೆ
ಬೆಳಿಗ್ಗೆ ಅವರ ಭೇಟಿ. ನಾಳೆ ಅಮಾತ್ಯ ಭವನ ತಲಪಿದ ಸ್ವಲ್ಪ ಹೊತ್ತಿನಲ್ಲೇ
ನಿಮಗೆ ಹೇಳಿ ಕಳಿಸ್ತಾರಂತೆ.”
ನೀರಾನೆ ಪ್ರಾಂತದ ನಾಯಕನನ್ನು ಕಾಣಲು ಅಮಾತ್ಯರು ಆತುರ
ತೋರಬಹುದು, ಆ ದಿನವೇ ಭೇಟಿ ಸಾಧ್ಯವಾದೀತು__ಎಂದುಕೊಂಡಿದ್ದ
ಮೆನೆಪ್ ಟಾ. ಆದರೆ ಪರಿಸ್ಥಿತಿ ಹಾಗಿರಲಿಲ್ಲ.
ದೋಣಿಕಟ್ಟೆಯಲ್ಲಿ ಪರಸ್ಪರ ಕಂಡಾಗ ಹೇಗೆ ಮಾಡಿದ್ದನೋ ಅದೇ ರೀತಿ,
ಗೇಬು ಮೆನೆಪ್ ಟಾನ ಕೈಗಳನ್ನು ತನ್ನೆರಡೂ ಕೈಗಳಿಂದ ಹಿಡಿದುಕೊಂಡು
ತೊಟ್ಟಿಲಾಡಿಸಿ, “ನನಗಿನ್ನು ಅಪ್ಪಣೆ ಕೊಡಿ,"ಎಂದ.