ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೧೦ ಮೃತ್ಯುಂಜಯ
ರಾಜಸಭೆ, ಸಮರ ಪೋಷಾಕಿನಲ್ಲಿ ಪೇಪಿ, ಭಕ್ತನ ಉಡುಗೆಯಲ್ಲಿ ಪೇಪಿ, ಕೆಲವು
ಹಳೆಯ ಚಿತ್ರಗಳು, ಕೆಲವು ಹೊಸವು. ಆದರೆ ಎಲ್ಲ ಚಿತ್ರಗಳಲ್ಲೂ ಪೇಪಿ ಜವ್ವನಿಗ. ಮತ್ತೆ ಮತ್ತೆ ಸೆಡ್ ಉತ್ಸವ ಅಗತ್ಯವಿದ್ದರೂ ಚಿತ್ರಕಾರರ
ಮಟ್ಟಿಗೆ ಆತ ಸದಾ ಯುವಕ.
ಶತಪಥ ತುಳಿಯುತ್ತ ತನ್ನ ಮನಸ್ಸನ್ನು ಮೆನೆಪ್ ಟಾ ಇಷ್ಟ ಬಂದತ್ತ
ಅಲೆಯಲು ಬಿಟ್ಟಿ. ('ಸತ್ತವನ ಆತ್ಮ ಬೆನ್ನುಪಕ್ಷಿಯಾಗಿ ಅಲೀತದೆ. ಬದುಕಿ
ರುವವನ ಮನಸ್ಸೂ ಸ್ವಚ್ಛಂದವಾಗಿ ಹಾರಾಡ್ತದೆ.') ಪ್ರದೇಶದ ನೂರಾರು ನಿವಾಸಿಗಳು-ಅರಮನೆಗೆ ಸೇರಿದವರು-ಒಬ್ಬೊ ಬ್ಬರಾಗಿ ಇಬ್ಬಿಬ್ಬರಾಗಿ, ಪೆರೋಗಿದಿರು ಬಂಡಾಯವೆದ್ದಿದ್ದ ಪ್ರಾಂತದ ನಾಯಕ
ನನ್ನು 'ನೋಡಿಹೋಗಲು' ಬಂದರು. ವಂದನೆಯಾಗಲೀ ಮಾತಾಗಲೀ ಇಲ್ಲದ ಇಣಿಕು ನೋಟ.
ಔಟ ಕೇಳಿದ: “ಅತಿಥಿಗೃಹದ ಹತ್ತಿರ ಬರಬೇಡಿ ಅಂತ ಅವರಿಗೆ ಹೇಳ್ಲಾ ?” “ಬೇಡ. ಏನೋ ಕುತೂಹಲ. ನೋಡಿ ಹೋಗ್ತಾರೆ.” ಹೋರಗಿಣಿಕಿ ಬಂದು ಬೆಕ್ ಹೇಳಿದ: "ಬಾಗಿಲಿನ ಆ ಕಡೆ ಈ ಕಡೆ ಸಶಸ್ತ್ರ ಭಟರು ಮೌನವಾಗಿ ನಿಂತಿದ್ದಾರೆ. ಅತಿಥಿಗೃಹದ ಅಡಧಿಕಾರಿ ಅವರೋಡನೆ ಮಾತಾಡ್ತಿದ್ದಾನೆ.” ಅಷ್ಟರಲ್ಲಿ ಅಧಿಕಾರಿಯೇ ಒಳಗೆ ಬಂದು, "ಊಟ ಸಿದ್ಧವಾಗಿದೆ,”
ಎಂದ.
ಮೆನೆಪ್ ಟಾ ಉತ್ತರಿಸಿದ : “ನಮ್ಮ ಅಂಬಿಗರು ಬಂದ್ಮೇಲೆ ಊಟ.” ಅದಿಕಾರಿಗೆ ಅಚ್ಚರಿ, ವಿಸ್ಮಯ. ಸೇವಕರು ಬರುವ ತನಕ ಊಟ ಮಾಡದ ನಾಯಕ! ಅತಿಥಿಗೃಹದ ಆಳುಗಳಿಗೆ, 'ಭೋಜನಕ್ಕೆ ಅಣಿಗೊಳಿಸಿರಿ' ಎಂದು
ನಿರ್ದೇಶ ನೀಡಿ, ಆ ಅಧಿಕಾರಿ ಕಣ್ಮರೆಯಾದ ರಾಣಿ ನೆಫರುಟೀಮಳ ಆಪ್ತ ದಾಸಿ ಆಗಲೇ ಆತನಿಗೆ ಹೇಳಿ ಕಳುಹಿಸಿದ್ದಳು. ಸಂಜೆ ಅಮಾತ್ಯನಿಗೂ ಸ್ವತಃ