ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೨೧೧ ಪೆರೋಗೂ ಬಂಡಾಯ ನಾಯಕನ ಬಗೆಗೆ ತಿಳಿಸುವ ಹೊಣೆಯೂ ಆತನಿಗಿತ್ತು.
ಎಲ್ಲರಿಗೂ ಅಪೂರ್ವ ಅತಿಥಿಯನ್ನು ಕುರಿತು ತಿಳಿದುಕೊಳ್ಳುವ ಆತುರ. * * * * “ಮುಂದುಗಡೆ ಭಟರು, ಹಿಂದುಗಡೆ ಭಟರು. ಮಧ್ಯದಲ್ಲಿ ಪೆಟಾರಿ
ಗಳನ್ನು ಹೊತ್ತ ಕತ್ತೆ, ಜತೆಗೆ ನಾವು, ರಾಜಧಾನಿಯ ಪ್ರಜೆಗಳು ನೋಡಿದ್ದೇ
ನೋಡಿದ್ದು, ಕಳವಿನ ಸಾಮಾನು ಸಹಿತ ಕಳ್ಳರನ್ನು ಹಿಡಿದ ಹಾಗಿತ್ತು ! ನಮಗೆ ನಕ್ಕು ನಕ್ಕು ಸಾಕಾಯ್ತು, ಕತ್ತೆಯೂ ವಿಚಿತ್ರವಾಗಿ ಅರಚ್ಚಿತ್ತು,” ಎಂದು ಬಟಾ ತಮ್ಮ ದೋಣಿಯಿಂದ ಕಾಣಿಕೆ ಪೆಟಾರಿಯನ್ನೂ ಬಟ್ಟೆಬರೆ ಯನ್ನೂ ಕೊಳಲನ್ನೂ ತಾವು ತಂದುದನ್ನು ಬಣ್ಣಿಸಿದ. ಸ್ನಾನ ಮೊದಲೋ ? ಊಟ ಮೊದಲೊ ? "ಊಟವೂ ಒಂದು ರೀತಿಯ ಸ್ನಾನವೇ. ಗಂಟಲು ಹೊಟ್ಟೆ ತೋಯಿ ಸಿದ್ಮೇಲೆ ಮೈಗೆ," ಎಂದು ಬಟಾ. ಭೋಜನದ ಕೊಠಡಿಯಲ್ಲಿ ಎಲ್ಲರೂ ఒಟ್ಟಿಗೆ ಉಂಡರು. ಮದಿರೆ, ಭಕ್ಷ್ಯಭೋಜ್ಯಗಳು ಎಲ್ಲವೂ ರುಚಿಕರ. ಪ್ರತಿಯೊಬ್ಬರಿಗೂ ಹೊಟ್ಟೆ ಭಾರ. “ಒಂದಷ್ಟು ದಿವಸ ಹೀಗೆಯೇ ಉಂಡರೆ ಹುಟ್ಟು ಹಾಕುವವರಿಗೂ ಕಷ್ಟ. ಪಲ್ಲಕಿ ಹೊರುವವರಿಗೂ ಕಷ್ಟ." ಮೆನೆಪ್ ಟಾ ನಕ್ಕ. ಬಡಿಸುತ್ತಿದ್ದವರ ಮುಖ್ಯಸ್ಥನೊಡನೆ ಬಟಾ ತಮ್ಮೆಲ್ಲರ ಪರವಾಗಿ ಕಿವಿ
ಯಲ್ಲಿ ಉಸುರಿದ :
“ಈಗ ತಿಂದದ್ದು ಜೀರ್ಣವಾಗೋದಕ್ಕೆ ಕಾಲಾವಕಾಶ ಬೇಕು. ರಾತ್ರೆ ಒಂದಿಷ್ಟು ಮದಿರೆ ಸಾಕು. ಬೇರೇನೂ ಬೇಡ." ಅತಿಥಿಗೃಹದ ಸೇವಕರಿಗೆ ಈ ಜನ ಮೇಲಣ ಅಂತಸ್ತಿನವರಲ್ಲವೆಂದು
ತುಸು ಅಸಮಾಧಾನ, ತುಸು ಸಮಾಧಾನ.....
* * * *