ಪುಟ:Mrutyunjaya.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೧೩

ಸಲ್ಲಿಸುವುದು ಯಾವಾಗ ? ಆ ಕೆಫ್ಟು ಎಲ್ಲಿರುವನೋ ಈಗ ? ಊರು

ಬಿಟ್ಟು ಒಂದು ವಾರವಾಯಿತು. ತಾನಿಲ್ಲದೆ ಆಡಳಿತ ನಡೆಸುವುದು ಸ್ನೊಫ್ರುಗೆ,

ಸೆಬೆಕ್ಖುಗೆ, ಹಿರಿಯರ ಸಮಿತಿಗೆ ರೂಢಿಯಾಗಿರಬೇಕು. ಯೋಚನೆ ಕದಡಿತು. ನೆಫಿಸಳ ನೆನಪು. ರಾಮೆರಿಪ್ಟಾ... “ಮೆನೆಪ್ಟಾ ಅಣ್ಣ. ಮದಿರೆ ಬೇಡ ಅಲ್ಲವಾ?” -ಬಟಾನ ಪ್ರಶ್ನೆ. ಉತ್ತರ: "ಊಹೂಂ." “ಅಬ್ಟು ಯಾತ್ರೇಲಿ ಮೆನೆಪ್ಟಾ ಅಣ್ಣನ ಮಾತ್ನಂತೆ ನಡಕೊಳ್ಳಿ ಅಂತ ನಮ್ಮ ಜನರಿಗೆ ನಾನು ಹೇಳಿದ್ದು ನೆನಪಿದೆಯಾ ?” "ಹೂಂ." "ಆ ಕ್ಷಣದಲ್ಲೇ ನೀನು ನಾಯಕನಾದೆ. ನಮ್ಮ ಜನರು ಮಾತ್ರವಲ್ಲ, ನಾನೂ ನಿನ್ನ ಮಾತಿನಂತೆ ನಡೆಯೋ ಹಾಗಾಯ್ತು!” “ನಮ್ಮ ಊರಲ್ಲಿ ಇಷ್ಟು ಹೊತ್ನಲ್ಲಿ ಏನು ಮಾಡ್ತಿರಬಹುದು?” "ಯಾರು?" “ನಮ್ಮ ಜನ?” “ರಾಜಧಾನೀಲಿ ನಾಯಕ ಏನ್ಮಾಡ್ತಿದಾನೊ_ಅಲ್ಲ, ಏನ್ಮಾಡ್ತಿದಾರೊ_ಅಂತ ಜನ ಯೋಚಿಸ್ತಿರಬೌದು.” "ಸರಿ!" “ನಡಿ. ನದಿ ದಂಡೆ ಕಡೆ ಹೋಗ್ಬರೋಣ. ಬಾಗಿಲು ತೆರೆಯುತ್ತೊ ಇಲ್ಲವೋ ಅಂತ ನೋಡಿದ ಹಾಗೂ ಆಯ್ತು.” ಒಬ್ಬ ಸೇವಕ ದಾರಿ ತೋರಿಸಿದ. ಮೆನೆಪ್ಟಾ ಮತ್ತು ಬಟಾ ಅವನ ಹಿಂದಿನಿಂದ ನಡೆದರು. ಔಟ ಮತ್ತು ಬೆಕ್ ನಡುಪಟ್ಟಿಯಲ್ಲಿ ಭರ್ಚಿ ಸಿಕ್ಕಿಸಿ ಕೊಂಡು ಸ್ವಲ್ಪ ದೂರದಿಂದ ಹಿಂಬಾಲಿಸಿದರು. ಮೊದಲು ದೇವಮಂದಿರಕ್ಕೆ. ಹೊರಗಿನ ದೀಪಗಳು_ಸೊಡರುಗಳು_