ಪುಟ:Mrutyunjaya.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಮೃತ್ಯುಂಜಯ

 ದೂರದಿಂದ ಆಲಾಪನೆ ಕೇಳಿಸಿದಂತಾಗಿ, “ ಯಾರೋ ಹಾಡ್ತಿದಾರೆ!” 

ಎಂದು ಮೆನೆಪ್ ಟಾ ಉದ್ಗರಿಸಿದ.

 “ ದೇವಸೇವಕನಿರಬೇಕು. ನಡಿ, ಅಲ್ಲಿಗೆ ಹೋಗೋಣ,” ಎಂದ

ಮೆನೆಪ್ ಟಾ.

 ಅತ್ತ ಸರಿದಂತೆ ಹಾಡಿನ ಪದಗಳು ಸ್ಪಷ್ಟವಾದುವು. ಅಡಿಗಡಿಗೂ 

ಅಳಲಿನ ಪಲ್ಲವಿ ಇತ್ತು :

 " ಇಂದು ಯಾರೊಡನೆ ನಾ ಮಾತಾಡಲೀ!...."
 ಒಂದು ಬರಿದು ಶಿಲಾಪೀಠದ ಬುಡದಿಂದ ಸ್ವರ ಬರುತ್ತಿತ್ತು. ನೀರನ್ನು 

ನೋಡುತ್ತ ಪೀಠದ ಕಾಲಿಗೆ ಒರಗಿ ಕುಳಿತಿದ್ದ ಆತ. ಮೆನೆಪ್ಟಾ ಮತ್ತಿತರರು ಹತ್ತು ಹೆಜ್ಜೆ ದೂರ ಸದ್ದಿಲ್ಲದೆ ನಿಂತರು.

 ಯಾರ ಪರಿವೆಯೂ ಇಲ್ಲದೆ ಅವನು ಹಾಡಿದ:
 " ಇಂದು ಯಾರೊಡನೆ ನಾ ಮಾತಾಡಲೀ....
 ಮನುಜನ ಹೃದಯ ದುರಾಶೆಯ ಕಡಲು 
 ಸಂಧಿ ಸಿಕ್ಕರೆ ಪರರ ಸೊತ್ತಿಗೆ ಕೈಹಾಕುವ ನೀತ
 " ಇಂದು ಯಾರೊಡನೆ ನಾ ಮಾತಾಡಲೀ....
 ನಯ ವಿನಯ ಇನ್ನಿಲ್ಲ
 ಸೊಕ್ಕಿನವರೆಲ್ಲರೂ
 " ಇಂದು ಯಾರೊಡನೆ ನಾ ಮಾತಾಡಲೀ....
 ಶಿಷ್ಟನ ಕೆರಳಿಸಿ ದುಷ್ಟನು ನಗುವನು 
 ಉಳದವರದ ನೋಡುತ ಅಣಕಿಪರು 
 " ಇಂದು ಯಾರೊಡನೆ ನಾ ಮಾತಾಡಲೀ....
 ಮುಖಗಳನೆಲ್ಲ ಮರೆ ಮಾಡಿಹರು
 ನೇರ ನೋಟವಿಲ್ಲ ಸೋದರನೆಡೆಗೆ