ಪುಟ:Mrutyunjaya.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೧೬ ದೇವಸೇವಕನನ್ನು ಹಿಡಿಯಲು ತಡೆಯಲು ಮುಂದಾದರು. "ಇರಲಿ ಬಿಡಿ,"ಎಂದ ಮೆನೆಷ್ ಟಾ. ಮೆನ್ನ ಬೆಚ್ಚಿಬಿದ್ದು ತಾನೇ ದೂರ ಸರಿದು ನಿಂತ. " ಓ ! ನಿಮ್ಮ ಅಂಗರಕ್ಷಕರು! ನಾಯಕ, ನಾನು ಕನಸಿನಲ್ಲಿ ನಿಮ್ಮನ್ನು ಕಂಡಿದ್ದೆ. ಅಸ್ಪಷ್ಟ ಆಕಾರ. ಆದರೂ ಹೆಚ್ಚುಕಡಮೆ ಹೀಗೆಯೇ ಇದ್ದಿರಿ ಅನಿಸ್ತ್ತದೆ. ఇల్ల, ಇನ್ನೂ ಎತ್ತರ ಇದ್ದಿರಿ. ಇವತ್ತು ನೀವು ಮನುಷ್ಯ. ನಾಳೆ ನೀವೇ ದೇವರು. ಐಗುಪ್ತದ ಎರಡು ಸಾವಿರ ದೇವರೆಲ್ಲ ಹಿಂದೆ ಮನುಷ್ಯರೋ ಪ್ರಾಣಿಗಳೋ ಆಗಿದ್ರು, ಹಹ್ಹ! ಹೀಗೆ ಹೇಳಿದ್ದಕ್ಕೆ ನನ್ನನ್ನು ಹುಚ್ಚ ಅಂದ್ರ.ಹೇಳಿ ಜನನಾಯಕ ಮೆನೆಷ್ ಟಾ,ನಾನು ಹುಚ್ಚ ಹೌದಾ, ಅಲ್ಲವಾ ? ಹೊಹ್ಹೊಹೊ!...." ಮೆನ್ನನ ನಗೆ ನದಿಯ ಎದುರು ದಂಡೆಗೂ ಅಪ್ಪಳಿಸಿತು. ಇಷ್ಟು ಗಟ್ಟಿಯಾಗಿ ನಗುವ ಸಾಮರ್ಥ್ಯವಿದೆಯಲ್ಲ ಈ ಬಡಕಲು ಜೀವಕ್ಕೆ ಎಂದು ಮೆನೆಷ್ ಟಾ ಅಚ್ಚರಿಪಟ್ಟ, ತನ್ನ ನಗೆಯ ಪ್ರತಿಧ್ವನಿ ಕೇಳಿಸಿ ಮೆನ್ನನಿಗೂ ವಿಸ್ಮಯವಾಗಿತ್ತು, ఆ ನಗೆ ತನ್ನದೇ ಎಂದು ಖಚಿತಪಡಿಸಿಕೊಳ್ಳುವುದಕ್ಕೋಸ್ಕರ, ಆತ ಮತ್ತೊಮ್ಮೆ “ಹ್ಹೊ ಹ್ಹೊ ಹ್ಹೊ!" ಎಂದು ನಕ್ಕ. ಅರಮನೆಯ ಕಾವಲು ಭಟರು ಬಳಿ ಸಾರಿ ಮೆನ್ನನನ್ನು ಸುತ್ತುವರಿದರು. “ನೀವಿನ್ನು ಒಳಗೆ ನಡೀರಿ,” ಎಂದ ಅವರಲ್ಲೊಬ್ಬ ಮೆನ್ನನಿಗೆ. ವಿಶ್ರಾಂತಿಯ ಹೊತ್ತಾಯ್ತು. ನೀವು ಒಳಗೆ ಹೋಗಬಹುದಲ್ಲ," ಎಂದ ಇನ್ನೊಬ್ಬ, ಮೆನೆಷ್ ಟಾನ ಕಡೆ ನೋಡಿ. "ಅತಿಥಿಗೃಹದಲ್ಲಿ ಇದೀರಿ ಅಲ್ಲವಾ?" ಎಂದಷ್ಟೇ ಪಿಸುದನಯಲ್ಲಿ ನುಡಿದು, ಮೆನ್ನ ತನ್ನ ಕೈಹಿಡಿದಿದ್ದ ಭಟನನ್ನು ವಿಧೇಯನಾಗಿ ಹಿಂಬಾಲಿಸಿದ. "ಪಾಪ," ಎಂದ ಬಟಾ. ಮೆನೆಷ್ ಟಾನೆಂದ: “ದಹಿಸುವ ಕೆಂಡ.ಸಂಕಟವಾಗ್ತದೆ. 'ಪಾಪಪೀಡಿತವೀ ನೆಲ ನಾ ಜರ್ಜರಿತ; ಕೊನೆಯೇ ಇಲ್ಲ, ಇದಕೆ ಕೊನೆಯೇ ఇల్ల'...."