ಪುಟ:Mrutyunjaya.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦ ಮೃತ್ಯುಂಜಯ ನೆಲ ಪಾಪ ಪೀಡಿತ. ಮೆನೆಷ್ ಟಾನೇನೂ ಜರ್ಜರಿತವಲ್ಲ, ಆದರೂ ಮೆನ್ನನ ಯಾತನೆ ನೆನೆದು ಅವನಿಗೆ ಸಂಕಟ. ಆತ ನಿಟ್ಟುಸಿರು ಬಿಟ್ಟ. ನದಿಸಾನ್ನಿಧ್ಯವನ್ನು ಅಷ್ಟಕ್ಕೇ ಮುಕ್ತಾಯಗೊಳಿಸಿ ಅವರು ಅತಿಥಿಗೃಹ ದತ್ತ ನಡೆದರು. ಮೆನೆಪ್ ಟಾ ಮಲಗಲು ಅಣಿಗೊಳಿಸಿದ್ದ ಕೊಠಡಿ ವಿಶಾಲವಾಗಿತ್ತು. ಮಂಚವನ್ನು ನೋಡಿ ಆತನೆಂದ: “ಐಗುಪ್ತದ ಜನರಿಗೆ ಮಂಚದ ಮೇಲೆ ಮಲಗಲು ಮೆನೆಸ್ ದೊರೆ ಹೇಳಿ ಕೊಟ್ಟು ಏಳುನೂರು ವರ್ಷಗಳೇ ಸಂದಿವೆ. ಆದರೂ, ನನ್ನಲ್ಲಿಗೆ ಇನ್ನೂ ಆ ಪಾಠ ಮುಟ್ಟಲ್ಲ. ಶಯನಕ್ಕೆ ನೆಲವೇ ನನಗಿಷ್ಟ.” ಇದನ್ನು ತಿಳಿದಾಗ ಅತಿಥಿಗೃಹದ ಸೇವಕರಿಗೆ ಆಶ್ಚರ್ಯ. ಅವರು ಆ ನಾಲ್ವರಿಗೆ ಮಲಗಲು ಮೆತ್ತೆಗಳನ್ನೂ ಹೊದೆಯಲು ಬಟ್ಟೆಗಳನ್ನೂ ತಂದು ಕೊಟ್ಟರು.

ಅತಿಥಿಗೃಹದ ಅಧಿಕಾರಿ ಬಾಗಿಲ್ಲ ಬಳಿ ನಿಂತು, “ನಾಳೆ ಬೆಳಿಗ್ಗೆ ಉಪಾ  ಹಾರವಾದ ಮೇಲೆ ಅಮಾತ್ಯರ ಭೇಟ"ಎಂದ.

...ತೋಳಿಗೆ ತಲೆ ಸೋಕಿದೊಡನೆಯೇ ಬಟಾ ಗೊರಕೆ ಆರಂಭಿಸಿದ. ಎಳೆಯ ಜವ್ವನಿಗರಾದ ಔಟ, ಬೆಕ್ ಶಾಂತವಾಗಿ ಉಸಿರಾಡುತ್ತ ಮೈ ಮರೆತರು. ನಾಯಕ ಬಹಳ ಹೊತ್ತು, ಕ್ರಮಕ್ರಮವಾಗಿ ಕಡಿಮೆಯಾಗತೊಡಗಿದ ಬಾಹ್ಯಸದ್ದುಗಳಿಗೆ ಕಿವಿಗೊಟ್ಟಿ, ಲಿಷ್ಟ್ ನಲ್ಲಿ ಎಚ್ಚರಗೊಂಡಾಗಿನಿಂದ ಬೆಳಗ್ಗೆ ಆವರೆಗಿನ ಘಟನೆಗಳನ್ನೆಲ್ಲ ಮೆಲುಕುಹಾಕಿದ. ಮೆನ್ನನ 'ಇಂದು ಯಾರೊಡನೆ ನಾ ಮಾತಾಡಲೀ....'ಪಲ್ಲವಿ ಸಾಲು ಗುಂಯ್ ಗುಟ್ಟಿತು. ನೀರಾನೆ ಪ್ರಾಂತವನ್ನು, ಬಂಧುಗಳನ್ನು, ನೆಫಿಸ್ ರಾಮೆರಿಷ್ ಟಾರನ್ನು ಸ್ಮರಿಸಿದ..... ಕಣ್ಣೆವೆಗಳು ಮೆಲ್ಲನೆ ಒಂದನ್ನೊಂದು ಸಮಿಪಿಸಿದುವು. ಇವನ ಪಾಲಿಗೆ ಬಟಾನ ಗೊರಕೆ ಸದ್ದು ಕ್ಷೀಣವಾಗುತ್ತ ಹೋಯಿತು.

 *               *             *             *