ಪುಟ:Mrutyunjaya.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೨೫ ಒಂದು ಬೆರಳಿನ ವ್ಯತಾಸವಾದರೂ ಇದ್ದೇ ಇರದೆ !.... ಪೆರೋ ದರ್ಶನ ಮುಗಿಸಿ ಅಮಾತ್ಯರು ಆಗಲೇ ಬರಬೇಕಾಗಿತ್ತು.” ಒಬ್ಬ ಸೇವಕ ಇಣಿಕಿ ನೋಡಿ, ಲಿಪಿಕಾರನನ್ನು ಕಂಡು ಬಳಿ ಸಾರಿ, ನುಡಿದ : “ ಮಹಾಪ್ರಭು ದೇವಮಂದಿರದಿಂದ ಬಂದ್ರು. ಅಮಾತ್ಯರು ಅವರ ಜತೆ ಮಾತಾಡ್ತಿದ್ದಾರೆ.” ಲಿಪಿಕಾರನೆಂದ : “ ಹಾಗಾದರೆ ಇನ್ನೇನು ಅಮಾತ್ಯರು ಬಂದ್ಬಿಡ್ತಾರೆ." (ಅಮಾತ್ಯ ವರ್ಷಕ್ಕೆ ಒಮ್ಮೆಯೋ ಎರಡು ಸಲವೋ ನೀಲನದಿಯುದ್ದಕ್ಕೂ ಸಂಚಾರ ಹೊರಡುತ್ತಿದ್ದ ತನಿಖೆ ಪ್ರವಾಸ, ಉತ್ತರದಲ್ಲಿ ಮಹಾ ಹಸುರು ಸಮುದ್ರ ದಂಡೆಯ ತನಕ. ಅದು ಅತ್ಯಂತ ಫಲವತ್ತಾದ ನದೀಮುಖಜ ಭೂಮಿ, ದಕ್ಷಿಣದಲ್ಲಿ ಸ್ಯೆನೆಯ ವರೆಗೆ. ಅಪಾರ ಶಿಲಾಸಂಪತ್ತಿನ ಸ್ಥಳ ಅದು. ಉಳಿದ ಕಾಲದಲ್ಲಿ ರಾಜಧಾನಿಯಲ್ಲೇ ಆತನ ವಾಸ್ತವ್ಯ. ಪ್ರಾಂತಪಾಲರಿಂದಲೂ ಇತರ ಅಧಿಕಾರಿಗಳಿಂದಲೂ ವರ್ಷಕ್ಕೆ ಮೂರು ಸಲ ವರದಿಗಳು ಬರುತ್ತಿದ್ದುವು. ಅವನ್ನು ಕ್ರೋಡೀಕರಿಸಿ ಅಮಾತ್ಯ ತನ್ನ ವರದಿಗಳನ್ನು ಸಿದ್ಧಪಡಿಸುತ್ತಿದ್ದ. ಪ್ರತಿ ದಿನವೂ ಅರಮನೆಗೆ ಬಂದು ಪೆರೋನಿಗೆ ನಮಿಸಿ ಅಂದಿನ ವರದಿ ಒಪ್ಪಿಸುವುದು ಔಪಚಾರಿಕ ಕ್ರಮ. ಅದು ನಿತ್ಯದ ದೇವಪೂಜೆ ಇದ್ದ ಹಾಗೆ. ಅದಕ್ಕೆ ಚ್ಯುತಿ ಇಲ್ಲ. ಹಲವು ಹದಿನೆಂಟು ಅಧಿಕಾರಗಳು ಅಮಾತ್ಯನಿಗೆ. ಆತ ಅರಸನ ಕಣ್ಣು ಕಿವಿ; ರಾಜನ ಹೃದಯವನ್ನು ಮುದಗೊಳಿಸುವ ದೇಶದ ಸಂದೇಶವಾಹಕ ; ಅರಸನ ಅಂಗರಕ್ಷಕ ಬಲದ ಮುಖ್ಯಸ್ಥ ; ಅವನ ಶಿಕ್ಷಕ ; ಅರಸನ ಮುದ್ರಾವಾಹಕ, ಆತನ ಏಕಮಾತ್ರ ಸಂಗಾತಿ ; ಹೊಲಗಳು ಅರಮನೆ ಹಸುಗಳು ದಾಸರು ರೈತರು ಕಣಜಗಳು- ಇವೆಲ್ಲದರ ಮೇಲ್ವಿಚಾರಕ ; ಎಲ್ಲ ನಾವೆ ನೌಕೆಗಳ ನಿಯಂತ್ರಕ ; ನಿರ್ಮಾಣ ಕಾರ್ಯಗಳ ಮೇಲಧಿಕಾರಿ ; ಪ್ರಭುತ್ವದ ಮುಖ್ಯ ಅಧಿಕಾರಿ ; ಪರಮನ್ಯಾಯಮೂರ್ತಿ ; ಉಚ್ಚತಮ ಕಂದಾಯ ಅಧಿಕಾರಿ ; ವಿದೇಶೀಯ ಕಪ್ಪಕಾಣಿಕೆಗಳ ಸಂಗ್ರಾಹಕ ; ಯುದ್ಧ

೧೫