ಪುಟ:Mrutyunjaya.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮ ಮೃತ್ಯುಂಜಯ ಎಡಗೈ ಬೆರಳುಗಳಿಂದ ನಾಯಕನ ಬಲತೋಳನ್ನು ಮುಟ್ಟಿ, "ಮೆನೆಪ್ ಟಾ," ಎಂದ- ಯಾವ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೆ, ತಾನು ಮುಂದಕ್ಕೆ ಸಾಗಿದ "ಬನ್ನಿ" ಎನ್ನುತ್ತ. ಅವನ ಹಿಂದೆಯೇ ಇದ್ದರು-ಒಬ್ಬ ಕಟ್ಟಾಳು ಸಶಸ್ತ್ರ ಭಟ, ಲಿಪಿಸುರುಳಿಗಳ ಜಾಡಿಯನ್ನುಹೊತ್ತಿದ್ದ ಸೇವಕನೊಬ್ಬ, ಯುವಕ ಲಪಿಕಾರರಿಬ್ಬರು. ಮೆನೆಪ್ ಟಾ ವೇದಿಕೆಯನ್ನೇನೋ ಏರಿದ, ಆದರೆ ಎಲ್ಲಿ ಕುಳಿತುಕೊಳ್ಳ ಬೇಕು? ಎಷ್ಟು ದೂರದಲ್ಲಿ? ಆಮೆರಬ್ ತನ್ನ ಪೀಠದ ಮೇಲೆ ಕುಳಿತೊಡನೆಯೇ ಆ ಸಮಸ್ಯೆ ಬಗೆಹರಿಯಿತು. ಬಲಪಾರ್ಶ್ವದಲ್ಲಿ ತನಗೆ ತೀರಾ ಹತ್ತಿರದಲ್ಲಿದ್ದ ಪೀಠದತ್ತ ಬೊಟ್ಟು ಮಾಡಿ, ಆತ “ಕುಳಿತುಕೊಳ್ಳಿ,” ಎಂದ. ಆಸೀನನಾದ ನಾಯಕನನ್ನು ಅವನು ಕೇಳಿದ : "ಅತಿಥಿಗೃಹದಲ್ಲಿ ಎಲ್ಲ ಅನುಕೂಲವಾಗಿದೆಯಾ?" "ಹಹ್ಞ." ಹೊರಹೋಗಿ ನೋಡಿ ಬಂದ ಹಿರಿಯ ಲಿಪಿಕಾರ ಕಿವಿಯಲ್ಲೇನೋ ಉಸುರಲು, "ಬರಲಿ, ಮಾತಾಡಿ ಕಳಿಸಿಬಿಡೋಣ" ಎಂದ ಆಮೆರಬ್. ಹೊರಗೆ ಒಂದು ಗುಂಪು ನೆರೆಯುತ್ತಿದ್ದುದು ಮೆನೆಪ್ ಟಾಗೆ ಕುಳಿತಲ್ಲಿಂದಲೇ ಕಾಣಿಸಿತು. ಆ ಗುಂಪಿಗಿಂತ ತುಸು ದೂರದಲ್ಲಿ ತನ್ನ ಪರಿವಾರದವರನ್ನು ಕಂಡಂತಾಯಿತು. ಸೆನೆಬ್ “ಪ್ರವಾಸಿಗಳ ಅಧಿಕಾರಿಯನ್ನು ಕರಿ,” ಎಂದ, ಒಬ್ಬ ಸೇವಕನಿಗೆ. "ಪ್ರವಾಸಿಗಳ ಅಧಿಕಾರಿಯವರು ಸನ್ನಿಧಿಗೆ ಬರಬೇಕೂಂತ ಅಪ್ಪಣೆಯಾಗಿದೆ." ಎಂದು ಬಾಗಿಲ ಬಳಿ ನಿಂತು ಹೊರನೋಡುತ್ತ , ಸೇವಕ ಸಾರಿದ, ಆ ಅಧಿಕಾರಿ ಒಳಬಂದು, ವೇದಿಕೆಯ ತುಸು ದೂರದಲ್ಲೇ ನಿಂತು, " ಪೆರೋನ ಸಂಪತ್ತು ವರ್ಧಿಸಲಿ," ಎಂದು ಉದ್ಗರಿಸಿ, ಅಮಾತ್ಯನಿಗೆ ಬಾಗಿ ನಮಿಸಿದ. “ಏನು ಖೊನ್ಸು?" ಎಂದು ಪ್ರಶ್ನಿಸಿದ ಆಮೆರಬ್. ಅಧಿಕಾರಿ ಖೊನ್ಸು ಒಂದೊಂದು ಪದವನ್ನು ನುಂಗುತ್ತ ಅವಸರ ಅವಸರವಾಗಿ ನುಡಿದ: " ರಾಜಧಾನಿಗೆ ಬರೋ ಪ್ರವಾಸಿಗಳಿಗೆ ಊಟಕ್ಕೆ ಸ್ವಲ್ಪ ತೊಂದರೆ