ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೨೨೯ ಯಾಗ್ತಿದೆ . ಭೋಜನ ಗೃಹಗಳಲ್ಲಿ ಗೋದಿ, ಯನೆ ದಾಸ್ತಾನು ಸಾಕಷ್ಟಿಲ್ಲ.ಕುಯಿಲು ಆಗಿ ಹೊಸ ಧಾನ್ಯ ಬರೋವರೆಗೂ ಗೋದಿ ಪೂರೈಕೆಗಾಗಿ ಏನಾದರೂ ಮಾಡ್ಬೇಕು ಅಂತ ಅರಿಕೆ."
ಅಮಾತ್ಯನೆಂದ : " ಒಳ್ಳೇದು. ರಾಜಕಣಜದಿಂದ ಅಗತ್ಯವಿರುವಷ್ಟು ಆಹಾರಧಾನ್ಯ ಬಿಡುಗಡೆ ಮಾಡೋದಕ್ಕೆ ಆದೇಶ ನೀಡ್ತೇನೆ." ಎಳೆಯ ಲಿಸಿಕಾರರಲ್ಲೊಬ್ಬ ಅಮಾತ್ಯನ ಉತ್ತರವನ್ನು ಬರೆದುಕೊಂಡ. ಇನ್ನೊಬ್ಬ ಕಣಜದ ಅಧಿಕಾರಿಗೆ ನೀಡಬೇಕಾದ ಆದೇಶವನ್ನು ಅಣಿಗೊಳಿಸಿದ. ಪ್ರವಾಸಿಗಳ ಅಧಿಕಾರಿ, “ಪೆರೋನ ಸಂಪತ್ತು ವರ್ಧಿಸಲಿ,” ಎಂದು ಮತ್ತೊಮ್ಮೆ ಉದ್ಗರಿಸಿ, ಅಮಾತ್ಯನಿಗೆ ವಂದಿಸಿ, ನಾಲ್ಕು ಹೆಜ್ಜೆ ಹಿಂದೆ ಹಿಂದಕ್ಕೆ ಸರಿದು, ಬಳಿಕ ವೇದಿಕೆಗೆ ಬೆನ್ನು ಹಾಕಿ ಹೊರಟು ಹೋದ . ಅನಂತರ ಬಂದನನು ಒಳನಾಡು ಸಾರಿಗೆ ಅಧಿಕಾರಿ.ಅವನ ಹೆಸರೂ ನೆನಪಿತ್ತು ಅಮಾತ್ಯನಿಗೆ. ಬಹ್ವಂಶ ಸಾರಿಗೆ ನೀಲನದಿಯಲ್ಲೇ ಆದರೂ, ಒಳನಾಡಿನಲ್ಲಿ ಅಷ್ಟಿಷ್ಟು ಹೇರು ಸಾಗಣೆ ಕತ್ತೆಗಳ ಮೇಲೆ ನಡೆಯುತ್ತಿತ್ತು. ದೇಶದ ಎಲ್ಲ ಕತ್ತೆಗಳ ಐದರಲ್ಲೊಂದು ಭಾಗ ಪ್ರಭುತ್ವದ ಸೊತ್ತು. ಈ ಪ್ರಾಣಿಕಂದಾಯದ ವಸೂಲಿ ತೃಪ್ತಿಕರನಾಗಿ ಆಗದೆ, ಪ್ರಭುತ್ವದ ಸಾರಿಗೆಗೆ ಸಾಕಷ್ಟು ಕತ್ತೆಗಳು ದೊರೆಯದೆ, ತೊಂದರೆಯಾಗಿತ್ತು. “ ಕತ್ತೆಗಳು ಸಾಕಷ್ಟಿಲ್ಲ ಅಂತ ಅರಿಕೆ ಮಾಡ್ಕೊಂಡಿದ್ದೆ. ಜ್ಞಾಪಿಸೋಣ ಅಂತ ಬಂದೆ." ನೆರಿಗೆ ಕಟ್ಟಲು ಯತ್ನಿಸಿದ ಹಣೆಯನ್ನೊಮ್ಮೆ ನಡು ಬೆರಳನಿಂದ ತೀಡಿ ಅಮಾತ್ಯನೆಂದ :
"ಕುಯಿಲಿಗೆ ಮುಂಚೆ ಪ್ರಾಣಿ ಗಣತಿ ವರದಿಗಳು ಸಿದ್ಧವಾಗ್ತಿವೆ. ಮುಂದಿನ ಸಲ ಕಂದಾಯ ವಸೂಲಿಗೆ ಹೋದಾಗ, ಬರಬೇಕಾದ ಕತ್ತೆ, ಹಸು, ಎತ್ತುಗಳನ್ನೂ ವಶಪಡಿಸಿಕೋಳ್ತೇವೆ. ಆಗ ನಿನ್ನ ಸಮಸ್ಯೆ ತಾನಾಗಿಯೇ ಬಗೆ ಹರೀತದೆ ."
ಒಳನಾಡು ಸಾರಿಗೆ ಅಧಿಕಾರಿ ನಿರ್ಗಮಿಸಿದ ಬಳಿಕ ಆಮೆರಬ್ ಮೆನೆಪ್ ಟಾ