ಪುಟ:Mrutyunjaya.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ಮೃತ್ಯುಂಜಯ

   ನೊಡನೆ ಅ೦ದ :

" ಐಗುಪ್ತ ದೇಶದ ಸರ್ವಸ್ವವೂ ಪೆರೋನ ಸೊತ್ತು. ಅದು ದೇವರಿಂದ ಅನುಗ್ರಹಿಸಲ್ಪಟ್ಟದ್ದು. ಆದರೂ ದಯಾಮಯ ಪೆರೋ ಐದರಲ್ಲಿ ಒಂದು ಭಾಗ ಮಾತ್ರ ತಮಗೆ ಸಾಕು ಎನ್ನುತ್ತಾರೆ. ಈ ದೇವಭೂಮಿ ಬಲಾಢ್ಯವಾಗ ಬೇಕಾದರೆ ಭಾರೀ ಸೈನ್ಯ ಬೇಕು. ಐವರಲ್ಲೊಬ್ಬರು ಯೋಧರಾದರೆ ತಾನೆ ಅಂಥ ದಂಡು ಸಾಧ್ಯ ? ಏನು ಹೇಳ್ತೀರಿ, ನಾಯಕರೆ ?”

  ಮೆನೆಪ್ ಟಾ ಬರಿಯ ಮುಗುಳು ನಗೆಯ ಉತ್ತರವನ್ನಷ್ಟೇ ನೀಡಿದ.

ಅಮಾತ್ಯ ನಗುತ್ತ ಅಂದ : " ಮೌನ,ಮಾತಿನ ಮಿತಬಳಕೆ ಶ್ರೇಷ್ಠ ರಾಜನೀತಿರ ಗುಣಗಳು. ಇದಕ್ಕೇನು ಹೇಳ್ತೀರಾ ?” ಈ ಸಲವೂ ಸುಮ್ಮನಿರುವುದು ಸಾಧ್ಯಾವಿರಲಿಲ್ಲ .ಮೆನೆಪ್ ಟಾನೆಂದ : " ನೀರಾನೆ ಪ್ರಾಂತದ ನಾವು ಸರಳ ಜನ. ರಾಜನೀತಿ ಕುಶಲರಲ್ಲ.” " ನೇರ ನಡತೆಯ ಸಾಮಾನ್ಯ ರೀತಿಯ ಜನ. ಯಾರು ಈ ಮಾತನ್ನು ಇಲ್ಲಿ ಈ ವೇದಿಕೆಯ ಮೇಲೆ ಈ ಮೊದಲು ಹೇಳ್ದೋರು? ಆಹ!ಕೆಫ್ಟು. ಜಾಣ ವರ್ತಕ. ನಿಯತ್ತಿನ ಮನುಷ್ಯ. ನಿಮ್ಮ ಸಮಾಚಾರ ಸಮಾಚಾರ ನಮಗೆ ಸರಿ ಯಾಗಿ ತಿಳಿದದ್ದೇ ಅವನಿಂದ." ಈ ಸಂವಾದ ನಡೆಯುತ್ತಿದ್ದಂತೆ ಹಿರಿಯ ಲಿಪಿಕಾರ ಸದ್ದಿಲ್ಲದೆ ಹೊರಕ್ಕೆ ನುಸುಳಿ, ಅಲ್ಲಿದ್ದವರನ್ನು ನೋಡಿ, ಮರಳಿದ. " ಇನ್ನೂ ಯಾರಾದರೂ ಇದ್ದಾರೊ ?” ಆಮೆರಬ್ ನ ಪ್ರಶ್ನೆಗೆ ಗಟ್ಟಿಯಾಗಿ ಉತ್ತರ ನೀಡಲು ಸೆನೆಬ್ ಹಿಂಜರಿ ದಂತೆ ಕಂಡಿತು. ಅದನ್ನು ಗಮನಿಸಿ ಅಮಾತ್ಯ ಕೇಳಿದ: “ ಹೆಸರು ಹೇಳೋದಕ್ಕೆ ಸಂಕೋಚವೆ?”

"ನುಟ್ ಮೋಸ್,"ಎಂದ ಸೆನೆಬ್,ಹೆಸರು ಹೇಳಲು ತಾನು ಹಿಂಜ ದದ್ದು ಸಕಾರಣವಾಗಿತ್ತೆಂಬುದನ್ನು ಧ್ವನಿಯಲ್ಲೇ ತೋರ್ಪಡಿಸುತ್ತ.

ನುಟ್ ಮೋಸ್! ಇದ್ದಕ್ಕಿದ್ದಂತೆ ಮೆನೆಪ್ ಟಾನ ದೋಣಿ ನೀರಿನೊಳಗಿನ ಮರಳದಿನ್ನೆಯನ್ನು ಒರೆಸಿತ್ತು.