ಪುಟ:Mrutyunjaya.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

“ಇಲ್ಲ. ಅಮಾತ್ಯರಿಗೆ ಬಿಡುವಾದರೆ ತಮ್ಮನ್ನು ಕರೀಬೇಕು ಅಂತ ಆರ್ಚಕ ಇನೇನಿ ಹೇಳಿದ್ದಾರೆ.” ಕಂಡೂ ಕಾణిಸದಂಥ ಅಸಹನೆయ ತೆರೆ ಅಮಾತ್ಯನ ಮುಖದ ಮೇಲೆ ಮೂಡಿತು. “ಇವತ್ತು ಬಿಡುವಿಲ್ಲ. ನಾಳೆ ಬರಲಿ.” ಮಹಾ ಅರ್ಚಕ ಹೇಪಾಟ್ ಗೆ ರಹಸ್ಯವಾಗಿ ಸುದ್ದಿ ಕಳುಹಿಸುವವನೇ ಇನೇನಿ.ನೀರಾನೆ ಪ್ರಾಂತದ ನಾಯಕನನ್ನು ರಾಜಧಾನಿಗೆ ಕರೆಸಿದ್ದಾರೆಂದು ಅವನ ಕುತೂಹಲ ಕೆರಳಿತು. ಇದರಲ್ಲಿ ನಿಗೂಢವಾದುದೇನಾದರೂ ಇದೆಯೆ ఎంದು ತಿಳಿಯುವ ತವಕ. ಅದೂ ಇದೂ ಮಾತನಾಡಿ ಕೆದಕಿ ತಿಳಿಯಲೆಂದು ಅಮಾತ್ಯ ಸಂದಾರ್ಶನ- ಅದು ಕೂಡ ಮೆನೆಪ್ ಟಾ ಒಳಗಿರುವಾಗಲೇ. ಇನೇನಿ ಎಷ್ಟು ಚಾಣಾಕ್ಷ್ ಎಂಬುದನ್ನು ಅಮೆರಬ್ ಬಲ್ಲ. ಪೆಟಾರಿ ಸಿದ್ಧವಾಯಿತು.ಸೆನೆಬ್ ಇನ್ನೂ ನಿಂತೇ ಇದ್ದ. "ಪೆಟಾರಿ ಎತ್ಕೊಳ್ಳಿ....ನೀವೆಲ್ಲ ಹೋಗಿ." ಅವರು ಹೊರಟು, ಮೆನೆಪ್ ಟಾ ಮತ್ತು ತಾನು ಇಬ್ಬರೇ ಉಳಿದಾಗ,ಅಮೆರಬ್ ಪೀಠ ದ ಮೇಲೆ ಮೈ ಸಡಿಲಬಿಟ್ಟ. ತಲೆವಾಗಿಲ ಕಡೆಗೊಮ್ಮೆ ನೋಡಿ ತಗ್ಗಿದ ಸ್ವರದಲ್ಲಿ ಅವನೆಂದ: “ಐಗುಪ್ತದ್ದು ಧರ್ಮರಾಜ್ಯ.ಪೆರೋ ದೇವರ ಅವತಾರ.ಆನ್ ನಗರಿಯ ರಾ ಇರಲಿ, ಮೆಂಫಿಸಿನ ಪ್ ಟಾ ಇರಲಿ, ವೆಸಿಯ ಅಮನ್ ಇರಲಿ_ ಅವರಿಗೆಲ್ಲ ಪ್ರಥಮ ಪೂಜೆ ಸಲ್ಲೋದು ಪೆರೋನಿಂದ, ಮಹಾ ಅರ್ಚಕರ ಸ್ಥಾನ ಏನಿದ್ದರೂ ಪೆರೋಗಿಂತ ಕೆಳಗೆ. ದೇಶದ ದೇವಮಂದಿರಗಳ ವ್ಯವಸ್ಥೆ ಅವರ ಹೊಣೆ.ಜನನ ಫಲ ಲೇಖನ, ವಿವಾಹ ವಿಧಿ,ಯುದ್ಧದಲ್ಲಿ ವಿಜಯಕ್ಕಾಗಿ ವಿಶೇಷ ಪೂಜೆ, ಸೆಡ್ ಉತ್ಸವ, ಈ ಲೋಕದಲ್ಲಿ ಆಳ್ವಿಕೆ ಮುಗಿದಾಗ ಪರಲೋಕಕ್ಕೆ విదాయ ನುಡಿ- ಇವೆಲ್ಲ ಅವರಿಂದ ಆಗಬೇಕಾದ ಧಾರ್ಮಿಕ ಕ್ರಮಗಳು. ದಿನನಿತ್ಯದ ಆಡಳಿತದಲ್ಲಿ ಅವರು ಕೈ ಹಾಕಬೇಕು ಅಂತ ಯಾರೂ ನಿರೀಕ್ಷಿಸೋದಿಲ್ಲ. ಅಂಥ ಹಸ್ತಕ್ಷೇಪ ಧರ್ಮಸಮ್ಮತವಲ್ಲ.” ತಾನು ಸುರಿದುದು ಎಷ್ಟು ಆಳಕ್ಕೆ ఇళిಯಿತು ಎಂದು ಅರಿಯಲು ಬಯಸಿ ಆಮೆರಬ್ ಮೆನೆಪ್ ಟಾನನ್ನು ಸೂಕ್ಷ್ಮವಾಗಿ ದಿಟ್ಟಿಸಿದ.