ಪುಟ:Mrutyunjaya.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ಬಟಾಗೆ ಅಮಾತ್ಯ ಭವನದಲ್ಲಿ ಏನಾಯಿತೆಂದು ತಿಳಿಯುವ ತವಕ. ಬೆಕ್, ಔಟರಿಗೂ.ಬಟಾನ ಸಹಾಯಕರಿಗೂ. ಸೆನೆಬ್ ನನ್ನು ಕಳುಹಿಸಿಕೊಟ್ಟಿ ಮೇಲೆ ಚುಟುಕು ವರದಿ. ಆದರೂ ಅವರಿಗೆ ಅದು ಇಷ್ಟವಾಯಿತು. “ಆಸಾನ ಅಮಾತ್ಯನದಿರಲಿ, ಅರಸನದಿರಲಿ, ಎಲ್ಲ ನಮ್ಮ ನಾಯಕರು ನಡೆಸುವ ಸಭೆಯ ಹಾಗೆಯೇ. ಅಲ್ಲವೇನಣ್ಣ ?" ಎಂದ, బటా ತನ್ನ ಅಭಿಪ್ರಾಯಕ್ಕೆ ಮೆಚ್ಚುಗೆ ಬಯಸಿ.ಅವನ ನಾಯಕ ನಕ್ಕ. ಅವರಿಲ್ಲದ ವೇಳೆಯಲ್ಲಿ ಅರಮನೆಯ ಆಳುಗಳು ಅತಿಥಿಗೃಹವನ್ನು ಚೊಕ್ಕಟಗೊಳಿಸಿದ್ದರು.ಮಲಗುವ ಹೊದೆಯುವ ಬಟ್ಟೆಗಳನ್ನು ಬದಲಿಸಿದ್ದರು. ಧೂಪಧೂವು ಕೊಠಡಿಗಳನ್ನು ವ್ಯಾಪಿಸಿತ್ತು. “ಇಲ್ಲಿ ಉಸಿರು ಕಟ್ಟದ ಹಾಗೆ ನೋಡ್ಕೋಬೇಕು,” ಎಂದ ಬಟಾ. ಮೆನೆಪ್ ಟಾನೆಂದ: “ಈ ಧೂಪ ಆರೋಗ್ಯಕ್ಕೆ ಒಳ್ಳೇದು.” ಅತಿಥಿಗೃಹದ ಅಧಿಕಾರಿ ಬಂದು, "ಅಒಅರಾಹ್ನದ ವಿಶ್ರಾಂತಿ ಆದ್ಮೇಲೆ ಅರ್ಚಕ ಇನೇನಿ ನಿಮ್ಮನ್ನು ನೋಡಲು ಬರುತ್ತಾರಂತೆ. ಈಗ ಭೋಜನ ಮುಗಿಸಿ ನೀವೂ ಕೊಂಚ ಹೊತ್ತು ವಿಶ್ರಮಿಸಬೌದು,” ಎಂದ. "ಭೋಜನ ಎಂದರೆ ಅಜೀರ್ಣದ ಭಯ. ಒಂದು ರೊಟ್ಟಿ ಮತ್ತು ಈರುಳ್ಳಿ ಕೊಟ್ಟರೆ ಸಾಕು." -ಬಟಾನ ನುಡಿ. "ಛೆ ! ಛೆ ! ಅರಮನೆಯಲ್ಲಿ ಸಾಮಾನ್ಯವಾದದ್ದು ಭೋಜನ. ವಿಶೇಷವಾದದ್ದು ಔತಣ. ಇಲ್ಲೇನಾದರೂ ಲೋಪವಾದರೆ ನನ್ನ ತಲೆ ಹೋದೀತು." ಮೆನೆಪ್ ಟಾ ಪರಿಹಾರ ಸೂಚಿಸಿದ: “ಆರೋಗ್ಯ ಕೆಟ್ಟರೆ ತೊಂದರೆ.ನಮಗೆಲ್ಲ ಮಧ್ಯಾಹ್ನದ ಒಂದೊಟ ಸಾಕು." ಆ ನಿರ್ದೆಶವನ್ನು ಸ್ವೀಕರಿಸಿ ಅಧಿಕಾರಿ ಬಟಾನತ್ತ ನೋಡಿ, “ ರಾತ್ರೆಗೆ ಏನಾದರೂ ಪಾನೀಯ...." ಎಂದ.