ಪುಟ:Mrutyunjaya.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯಂಜಯ ೨೩೭ ಇರಲಿ—ಎನ್ನಲು ಹೊರಟ ಬಟಾ, ಪದವನ್ನು ನುಂಗಿ, ನಾಯಕನೆಡೆಗೆ ದೃಷ್ಟಿಹರಿಸಿದ. ನಗೆಯನ್ನು ಹತ್ತಿಕ್ಕಿ ಮೆನೆಪಟಾ, "ನೀರಿದೆಯಲ್ಲ ?" ಎಂದ. “ಹಾಲು-ಹಾಲು ಕಳಿಸ್ತೇನೆ," ಎನ್ನುತ್ತ ಅಧಿಕಾರಿ ಭೋಜನದ ಉಸ್ತುವಾರಿಗೆ ನಡೆದ. ಬಟಾ ತಲೆ ಚಚ್ಚಿಕೊಂಡು ಅಂದ : “ನನ್ನ ತಾಯಿ ಈಗ ಇದ್ದಿದ್ರೆ ಸಂತೋಷಪಡ್ತಿದ್ಲು !”

           *             *                *                *

ಉಟ ಮುಗಿಸಿ ವಿಶ್ರಾಂತಿಯ ಕೊಠಡಿಯಲ್ಲಿ ಬಟಾ ಒಬ್ಬನೇ ಇದ್ದಾಗ ಮೆನೆಪ್ಟಾ ತಾನು ಅರ್ಥಮಾಡಿಕೊಂಡ ರಾಜಧಾನಿಯ ರಾಜಕಾರಣವನ್ನು ಗೆಳೆಯರಿಗೆ ವಿವರಿಸಿದ. ದೇಶದ ರಾಜಕಾರಣದಲ್ಲಿ ಮೂರು ಶಕ್ತಿಗಳಿವೆ. ಪೆರೋನದು. ಮಹಾ ಅರ್ಚಕರದು, ಭೂಮಾಲಿಕರದು. ಪೆರೋ ಪ್ರಾಂತಪಾಲರನ್ನು ನೇಮಿಸಿದ್ದರಿಂದ ಭೂಮಾಲಿಕರ ಪ್ರಾಬಲ್ಯ ಸ್ವಲ್ಪ ಕುಗ್ಗಿತಲ್ಲ? ಅವರೀಗ ಮಹಾ ಅರ್ಚಕರ ಆಸರೆ ಪಡೆಯೋ ಹಾಗೆ ಕಾಣ್ತದೆ. ಆಗ ಅವರಿಬ್ಬರ ಶಕ್ತಿ ಪೆರೋನ ಶಕ್ತಿಗಿಂತ ಹೆಚ್ಚಾಗ್ರದೆ; ಮಹಾ ಅರ್ಚಕರಿಗೆ ಅಧೀನವಾಗಿ ಪೆರೋ ಇರಬೇಕಾಗ್ರದೆ.” “ಆಶ್ಚರ್ಯ! ಅರ್ಚಕರ ಮಾತು ಪೆರೋ ಕೇಳೋದೆ?” “ತೋರಿಕೆಗೆ ಪೆರೋನದೇ ಪ್ರಭುತ್ವ; ಆದರೆ ವಾಸ್ತವವಾಗಿ, ಸೂತ್ರ ಗಳೆಲ್ಲ ಮಹಾ ಅರ್ಚಕರ ಕೈಲಿ. ಇದೇ ರಾಜಕೀಯದ ಮಹಾರಹಸ್ಯ. ಸಾಮಾನ್ಯ ಪ್ರಜೆಗಳಿಗೆ ಇದೊಂದೂ ಅರ್ಥವಾಗೋದಿಲ್ಲ.” “ನಾವು ಆದಷ್ಟು ಬೇಗ ನಮ್ಮ ಪ್ರಾಂತಕ್ಕೆ ವಾಪಸಾಗೋಣ." “ಪೆರೋಗೆ ನಮ್ಮ ಪ್ರಂತದ ಸ್ನೇಹ ಬೇಕು, ನಿಷ್ಠೆ ಬೇಕು.” “ಮಹಾ ಆರ್ಚಕರ ಬಲ ಕುಗ್ಗಿದ ಮೇಲೆ ಇವರು ನಮ್ಮನ್ನು ಅರೀತಾರೆ." "ಭಲೆ ! ತಿಳ್ಕೊಂಡ್ಬಿಟ್ಟಿ!ಆದರೆ ಸ್ವತಃ ನಾವು ಬಲಿಷ್ಟರಾಗಿದ್ರೆ;