ಪುಟ:Mrutyunjaya.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೩೮ ಮೃತ್ಯಂಜಯ ಸ್ವಾವಲಂಬಿಗಳಾಗಿದ್ರೆ, ನಮ್ಮನ್ನು ಯಾರೂ ಏನೂ ಮಾಡೋದಕ್ಕೂ ಆಗೋದಿಲ್ಲ್." "ಈ ಪಾಠ ಕಲಿಯೋದಕ್ಕೆ ಇಷ್ಟು ದೂರ ಬರಬೇಕಾಯ್ತೆ ?...ಹೂಂ... ఆ ಮಂದಿರದ ಆರ್ಚಕ ಬಂದಾಗ ನಿನ್ನೆ ರಾತ್ರೆಯ ಕನಸಿನ ಅರ್ಥ ಕೇಳೋಣ.” “ಅವರು ಸಾಮಾನ್ಯ ಅರ್ಚಕ ಅಂತ ಅನಿಸೋದಿಲ್ಲ ಬಟಾ. ಇವತ್ತೇ ಅಮಾತ್ಯರ ಭೇಟಗೆ ಬರೇವೆ ಅಂತ ಹೇಳಿಕಳ್ಸಿದ್ಸು, ಬಿಡುವಿಲ್ಲ ಅಂದ್ರು ಅಮಾತ್ಯರು. ಏನಾದರೂ ಸುದ್ದಿ ಸಿಗುತ್ತೊ ಅಂತ ಇಲ್ಲಿಗೇ ಬಲ್ತಿ ದಾರೇನೋ ?” ಎಷ್ಟೆಂದರೂ ಅಪೆಟ್ ಜಾತಿ !" ಹೊರಗೆ ದಪ್ಪ ಗಂಟಲು ಕೇಳಿಸಿತು: "ಮಲಕ್ಕೊಂಡಿದ್ರೆ ಆಮೇಲೆ ಬರ್ತೇನೆ. ಎಬ್ಬಿಸೋದು ಬೇಡ." ಔಟನ ಧ್ವನಿ : “ಇಲ್ಲ, ನಿದ್ದೆ ಮಾಡಿಲ್ಲ, ಬರಬಾದು.” ಮೆನೆಪ್ಟಾ ಮತ್ತು ಬಟಾ ಹೊರಬಂದರು. ಇವರನ್ನು ಕಂಡೊಡನೆ ಆಶೀರ್ವದಿಸುವ ಭಂಗಿಯಲ್ಲಿ ಲಾಂಛನ ಕೋಲು ಹಿಡಿದಿದ್ದ ಬಲಗೈಯನ್ನು ಎತ್ತಿ ಅರ್ಚಕ ಒಳಕ್ಕೆ ಕಾಲಿರಿಸಿದ. ಆ ಹಿರಿಯ ದೇವಸೇವಕನಿಗೆ ಇಬ್ಬರೊ ಬಾಗಿ ನಮಿಸಿದರು. ಪಡಸಾಲೆಯಲ್ಲಿ ಎಲ್ಲರೂ ಕುಳಿತಾಗ, ಇನೇನಿ ಅಂದ : "ಸುಮ್ಮನೆ ನೋಡಿ ಹೋಗೋಣ ಅಂತ ಬಂದೆ. ನಿಮ್ಮನ್ನು ರಾಜ ಧಾನಿಗೆ ಕರೆಸಬೇಕೂಂತ ಮಹಾ ಅರ್ಚಕರು ಹೇಳ್ತಾನೇ ಇದ್ರು.” ಇನೇನಿ ಮಾಡತೊಡಗಿದ್ದು ಅವನ ಪಾಲಿನ ಕರ್ತವ್ಯ. ಮೆನೆಪ್ ಟಾಗೆ ಅನಿಸಿತು: ಇಲ್ಲಿ ಎಲ್ಲರೂ ರಾಜಕೀಯ ಪಟುಗಳೇ. ಅವನೆಂದ : "ಮಹಾಅರ್ಚಕರು ಆನ್ ನಗರಿಯಲ್ಲಿದ್ದಾ ರೇಂತ ಕೇಳ್ದೆ.” అల్లి ಮಹತ್ವದ ಧಾರ್ಮಿಕ ಜಿಜ್ಞಾಸೆ ನಡೀತಿದೆ.” “ರಾಜಧಾನಿಗೆ ವಾಪಸಾಗುವ ಕಾರ್ಯಕ್ರಮ?”