ಪುಟ:Mrutyunjaya.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೨೩೯ “ ಈಗಂತೂ ಮಹಾ ಅರ್ಚಕರಿದ್ದಲ್ಲೇ ರಾಜಧಾನಿ, ಸೆಡ್ ಮಹೋತ್ಸ ವದ ವಿಷಯ ನೀವು ಕೇಳೋದಾದರೆ, ಸದ್ಯದಲ್ಲಿ ಅದು ನಡೀಲಾರದು. ಎರಡು ಮೂರು ತಿಂಗಳ ಕಾಲ ನಿಮ್ಮ ವಸತಿ ಇಲ್ಲಿಯೇ ! ಇಷ್ಟರ ಮೇಲೆ ಮಹಾ ಅರ್ಚಕರ ಮರ್ಜಿ, ಅಮಾತ್ಯರು ಈ ವಿಷಯ ಏನಾದರೂ ಹೇಳಿದರಾ ?” "ಹೆಚ್ಚು ಮಾತಾಡಲು ಆಗಲಿಲ್ಲ. ಬಹಳ ಜನ ಸಂದರ್ಶಕರಿದ್ರು.” “ ಸಂದರ್ಶಕರಿಗೇನು ಬರಗಾಲ ? ಅಮಾತ್ಯ ಸ್ಥಾನದಲ್ಲಿ ಅವರಿದ್ರೂ, ಬರಾರೆ, ನಾವಿದನ್ನೂ ಬರ್ತಾರೆ. ಅಂದ ಹಾಗೆ, ಟೆಹುಟ ನಿಮ್ಮ ವಿಷಯದಲ್ಲಿ ನಿಷ್ಟುರವಾಗಿ ನಡಕೊಂಡ್ರು ಅಂತ ಕೇಳ್ದೆ." “ ಹಾಗೇಂತ ಹೇಳ್ಲಾರೆ. ಅವರು ತಮ್ಮ ಮಾಟನಂತೆ ನಡಕೊಂಡ್ರು ” ಸರಿಯಾದ ದೃಷ್ಟಿ. ಸ್ವತಃ ಟಿಹುಟಯೇ ನೀರಾನೆ ಪ್ರಾಂತದ ನಾಯಕನ ಬಗೆಗೆ ಅಭಿಪ್ರಾಯ ಬದಲಿಸಬಹುದು..ನಾಳೆ ಪೆರೋನನ್ನು ನೀವು ಕಾಣ್ತೀರಂತೆ.” “ ನಿಮಗೆ ಎಲ್ಲಾ ಸಂಗತಿಗಳೂ ಗೊತ್ತಾಗ್ತವೆ” ಮಂದಿರದ ಅರ್ಚಕ ನಾನು. ಜನರಿಗೆ ನನ್ನಲ್ಲಿ ಭಕ್ತಿ.” ಮಾತುಗಳ ನಡುವಿನ ಮಾನವನ್ನು ಉಪಯೋಗಿಸಿಕೊಂಡು ಬಟಾನೆಂದ: “ ನಮ್ಮ ನಾಯಕರಿಗೆ ನಿನ್ನೆ ರಾತ್ರೆ ಒಂದು ಭಾರೀ ಕನಸು ಬಿತ್ತು ಅಯ್ಯ.” ಮೆನೆಪ್ಟಾನತ್ತ ನೋಡಿ ಇನೇನಿ ಅಂದ : ಹೌದಾ? ಏನು ಕಂಡಿರಿ ?" ನಾಯಕ ತಾನು ಕಂಡ ಕನಸನ್ನು ಇದ್ದುದು ಇದ್ದಂತೆ ಬಣ್ಣಿಸಿದ. ವಿಸ್ತರಿಸಿದ್ದ ತನ್ನ ಹೊಟ್ಟೆಗೆ ಅಡ್ಡವಾಗಿ ಇನೇನಿ ಅಂಗೈಗಾಳನ್ನು ಇರಿಸಿ, ಒಂದು ತೋರು ಬೆರಳಿನಿಂದ ಇನ್ನೊಂದನ್ನು ತಟ್ಟುತ್ತ, ಯೋಚಿಸುವವನಂತೆ ಸ್ವಲ್ಪ ಹೊತ್ತು ಸುಮ್ಮನಿದ್ದು, ಅಂದ : ಪಾಪಿಗಳಾ!! ಹೋಯ್ತು! ಕಸದ ಜತೆ ರಸವೂ ಹೋಯ್ತು ! ಅರ್ಥ ಪೂರ್ಣ-ಅರ್ಥಪೂರ್ಣ! ನಾಯಕ ಮೆನೆಪ್ಟಾ, ನೀವು ಅದೃಷ್ಟಶಾಲಿ. ನೀವು ಬಂಗಾರದ ಗಣಿಯ ಒಡೆಯರಾಸ್ತೀರಿ. ಅಂದರೆ, ಅತುಳೈಶ್ವರ್ಯ ನಿಮ್ಮ ದಾಗ್ತದೆ. ರಾ, ಪ್ಟಾ, ಅಮನ್, ಈ ಮೂವರು ದೇವರ ಅನುಗ್ರಹವನ್ನೂ