ಪುಟ:Mrutyunjaya.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯು೦ಜಯ ೨೪೧

ಒಬ್ಬ ದೇವಸೇವಿಕೆ ಒಮ್ಮೆ ಮಹಾ ಅರ್ಚಕನಿಗೆ ದೂರು ಕೊಟ್ಟಳು.
ಹಿಂದಿನ ಮುಂಚ್ಚಜೆ ದೇವಸೇವಿಕೆಯರ ವಸತಿಯ ಬಳಿ ಮೆನ್ನ ಸುಳಿ
ಯುತ್ತಿದ್ದನ೦ತೆ; ಹೋಗು ಎ೦ದರೂ ಹೋಗಲಿಲ್ಲವ೦ತೆ.
ಮಹಾ ಅರ್ಚಕ ಮೆನ್ನ ನನ್ನು ಕರೆಸಿ ಗದರಿಸಿದ:
" ಯಾಕೊ ?"
ನೀವು ಆ ಕಡೆಗೆ ಹೋದದ್ದನ್ನ ನೋಡಿದೆ; ಅಯ್ಯ ಯಾವಾಗಲೂ
ಸ್ವಲ್ಪ ಹೊತ್ನಲ್ಲೇ ವಾಪಸು ಬರ್‍ತಿದ್ರಿ. ನಿನ್ನೆ ಮಾತ್ರ ಬರಲಿಲ್ಲ. ನಿಮಗೇ
ನಾಯಿತೋ ಅಂತ ನಿಮ್ಮನ್ನು ಹುಡುಕ್ಕೊಂಡು ಅತ್ತ ಹೋದೆ. ಒಬ್ಬಿಬ್ರು
ನನ್ನನ್ನು ಒಳಗೆ ಕರೆದ್ರು. ಆದ್ರೆ ನಾನು ಹೋಗ್ಲಿಲ್ಲ...."
"ಮೂರ್ಖ ! ಮಾಡೋದಕ್ಕೆ ಬೇರೇನೂ ಕೆಲಸ ಇಲ್ದಿದ್ರೆ ಗರ್ಭಗುಡಿ
ಮುಂದೆ ಕೂತಿರ್‍ಬೇಕು.”
"ದೇವಸೇವಿಕೇರು ಗರ್ಭಗುಡಿಯೊಳಗೂ ಬಚ್ಚಿಟ್ಕೋತಾರೆ, ಅಯ್ಯ.”
"ಅಪವಿತ್ರ ಮಾತನ್ನಾಡಿದ್ರೆ ನಾಲಿಗೆ ಬಿದ್ದು ಹೋದೀತು, ಮರುಳೆ!”
"ಯಾವುದು ಪವಿತ್ರ, ಯಾವುದು ಅಪವಿತ್ರ ಅಯ್ಯ?"
"ಹೋಗು ಮಹಾಮಂದಿರದ ಮುಖ್ಯ ಅರ್ಚಕನನ್ನು ಕೇಳು."
ದೂರು ಕೊಡಲು ಬಂದಿದ್ದ ದೇವಸೇವಿಕೆ ನಗುತ್ತ ಹೊರಟು ಹೋದಳು.
ಮೆನ್ನ ಮಹಾ ಅರ್ಚಕನ ಪಾದದ ಬಳಿ ಮುದುರಿ ಕುಳಿತು ಗೋಗರೆದ:
"ಇನ್ನು ನಾನು ನಿಮ್ಮ ಸೇವೆಗೆ ಬರೋದು ಬೇಡವೆ, ಅಯ್ಯ?"
"ಎಲ್ಲರೂ ಅವರವರ ಸ್ಥಾನದಲ್ಲಿದ್ಕೊಂಡು ಮಾಡೋ ಕೆಲಸವೂ ನನ್ನ ಸೇವೆಯೇ."
"....ಅಯ್ಯ, ಶಂಕೆ ಸಂದೇಹಗಳು ನನ್ನನ್ನು ಬಾಧಿಸ್ತವೆ.”
"ಹುಚ್ಚಪ್ಪ! ಮದುವೆ ಮಾಡ್ಕೊಂಡು ನಿಮ್ಮ ತಂದೇ ತರಹ ಗೃಹಸ್ಠ
ಅರ್ಚಕನಾಗು. ಮೂರು ತಿಂಗಳು ಮನೇಲಿರು; ಒಂದು ತಿಂಗಳು ಪರಿಶುದ್ಧ
ವಾಗಿದ್ಕೊಂಡು ಮಂದಿರದಲ್ಲಿ ದುಡಿ.”
" ಮದುವೆ ! ನಾನೊಲ್ಲೆ, ನಾನೊಲ್ಲೆ!”
"ಹಾಗಾದರೆ ಹಾಳಾಗಿ ಹೋಗು !"
"....ಅಯ್ಯ, ದೇವಸೇವಿಕೇರೂ ಮದುವೆ ಮಾಡ್ಕೊಂಡು ಮೂರು

೧೬