ಪುಟ:Mrutyunjaya.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ತಿಂಗಳು ಮನೇಲಿದ್ದು.”

  • ಕತ್ತೆ!! ತೊಲಗಾಚೆ!”

ಮೆನ್ನ ಕಂಬನಿ ತುಂಬಿಕೊಂಡು ಎದ್ದ. ಅವನು ದಡ್ಡನಲ್ಲ; ಹನ್ನೆರಡು ವರ್ಷಗಳ ಅವಧಿಯ ಶಿಕ್ಷಣವನ್ನುಆರೇ ವರ್ಷಗಳಲ್ಲಿ ಕರಗತ ಮಾಡಿಕೊಂಡಿದ್ದ ಬುದ್ದಿವಂತ. “ಇವನ ಮೊದ್ದುತನವೆಲ್ಲ ಬರೀ ನಟನೆ," ಎಂದರು ಕೆಲವರು ಸಹಜ ವರ್ತನೆಯೊ ನಟನೆಯೊ ಸ್ವತಃ ಮೆನ್ನನಿಗೇ ತಿಳಿಯದು. ಮಾಡಬಾರದ ಏನನಾದರೂ ಆತ ಮಾಡುತ್ತಿದ್ದ. ಪದೇ ಪದೇ ಮಹಾಅರ್ಚಕನ ಕ್ರೋಧಕ್ಕೆ ಬಲಿಯಾಗುತ್ತಿದ್ದ. ಎರಡು ವರ್ಷ ಹೀಗೆ ಕಳೆಯಿತು. ಮೂರನೆಯ ವರ್ಷ ವಿಕೋಪಕ್ಕೆಹೋಯಿತು. ಪರಿಸ್ಥಿತಿ. ಅಬ್ಟುನಿಗೆ ಹೋದ ಮಹಾ ಅರ್ಚಕನ ಪರಿವಾರ ದಲ್ಲಿ ಮೆನ್ನನಿದ್ದ. , ಅಲ್ಲಿ ಒಸೈರಿಸನ ಅಂತಿಮ ಯಾತ್ರೆಯ ಪುನರಭಿನಯ ಆದಮೇಲೆ, ದೇವಮಂದಿರದಲ್ಲಿ, ಐಸಿಸ್ ಪಾತ್ರಧಾರಿಣಿಯನ್ನು ಹೇಪಾಟ್ ಮಾತನಾಡಿಸುತ್ತಿದ್ದಾಗ ಮೆನ್ನ ಒಳಗೆ ನುಗ್ಗಿ ಆತನ ಕೋಪಕ್ಕೆ ತುತ್ತಾದ. ಅದು ಕೊನೇ ಭಾರ, ದೋಣಿ ಮುಳುಗಿಯೇ ಬಿಟ್ಟತು. ರಾಜಧಾನಿ ಮೆಂಫಿಸಿಗೆ ಮರಳಿದ ಮಹಾ ಅರ್ಚಕ ಎಲ್ಲ ದೇವಸೇವಕ ಸೇವಿಕೆಯರೆದುರು ಮಹಾಮಂದಿರದಲ್ಲಿ ಮೆನ್ನನನ್ನು ವಿಚಾರಣೆಗೆ ಗುರಿಪಡಿಸಿದ. ... ಮೆನ್ನನಲ್ಲಿ ಸೆತ್ ನ ಆವಾಹನೆಯಾಗಿದೆ !' ಎಂದು ಮಹಾಅರ್ಚಕ ಸಾರಿದ.

  • ಡುರಕ್ ! ಡುರಕ್! ನಾನೀಗ ಕಾಡುಹಂದಿ ! ನಿಮ್ಮನ್ನೆಲ್ಲ ತಿವಿದು ಒಸೈರಿಸನ ರಾಜ್ಯಕ್ಕೆ ಕಳಿಸ್ತೆನೆ!” ಎನ್ನಬೇಕೆ ಮೆನ್ನ ?

ಅಷ್ಟು ಹೇಳಿ ಅವನು ಮಹಾ ಅರ್ಚಕನತ್ತ ನುಗ್ಗಿಯೇ ಬಿಟ್ಟ. ಅರಮನೆಯ ದೇವಮಂದಿರದ ಅರ್ಚಕ ಇನೇನಿ ಸಭೆಗೆ ಬಂದಿದ್ದ. ಹೇಪಾಟ್ ನ ಬಳಿಯಲ್ಲೇ ಇದ್ದ ಅವನು ಮೆನ್ನನ ಬಲಗೈಯನ್ನು ಹಿಡಿದು ತಿರುಚಿದ. ಬಾಣ ತಗಲಿದ ಗಿಡುಗ ಮರಿಯಂತೆ ಮೆನ್ನ ಚಡಪಡಿಸಿದ.

     ಹೇಪಾಟ್ ಕಿರಿಚಿದ;
  • ಧರ್ಮದ್ರೋಹಿ ! ಹೇಳು. ಈ ಐಗುಪ್ತವನ್ನು-ಜಗತ್ತನ್ನು-ಸೃಷ್ಟಿಸಿ ದವನು ಯಾರು ?”