ಪುಟ:Mrutyunjaya.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ಎಂದು ಮೂರನೆಯ ಬಾರಿ ಬಾರಿಸಿ, ಸಲಾಕೆಯನ್ನು ಎಸೆದುಬಿಟ್ಟ. ಸ್ವರ ಉಡುಗಿತೇನೋ ಎನ್ನುವಂತೆ ಮೆನ್ನನ ಆಕ್ರಂದನ ನಿಂತಿತು. ಹೇಪಾಟ್ ಅಂಗೈ ಆಡಿಸಿದೊಡನೆಯೇ, ಮೆನ್ನನನ್ನು ನೆಲಕ್ಕೆ ಅದುಮಿದ್ದವರು ಹಿಡಿತ ಸಡಿಲಿಸಿ ಎದ್ದರು. ಮೆನ್ನ ಬಿದ್ದಲ್ಲಿಯೇ ಇದ್ದ. ಸುಟ್ಟ ಹಾವುಗಳಂತಿ ದ್ದುವು, ಬೆನ್ನಿನ ಮೇಲಣ ಗೆರೆಗಳು. “ಉಸಿರಾಡ್ತಿದ್ದಾನೆ. ದೇವಸನ್ನಿಧಿಯ ಸಾವು ಪಾಪಿಗಳಿಗೆ ಲಭಿಸೋ ದಿಲ್ಲ,” ಎಂದು ನುಡಿದು ಹೇಷಾಟ್ ನಾಲ್ಕು ಹೆಜ್ಜೆ ದೂರ ಸರಿದು, ಟೊಂಕದ ಮೇಲೆ ಎರಡೂ ಅಂಗೈಗಳನ್ನು ಇರಿಸಿ ನಿಂತು, ದೇವಸೇವಕ ಸಮುದಾಯ ದತ್ತ ದೃಷ್ಟಿ ಹರಿಸಿದ.

   ಪದಗಳನ್ನು  ಎಣಿಸಿ ಎಣಿಸಿ ಎಸೆಯುವವನಂತೆ ಅವನೆಂದ :

“ಇವತ್ತಿನಿಂದ ಹುಚ್ಚ ಮೆನ್ನನನ್ನು ನಮ್ಮ ಆಪ್ತ ಪರಿವಾರದಿಂದ ಬಹಿಷ್ಕರಿಸಿದ್ದೇವೆ. ಇನ್ನು ಅವನ ದುಡಿಮೆ ಅರಮನೆಯ ದೇವಮಂದಿರದಲ್ಲಿ, ಅಲ್ಲಿ ಕಸ ಗುಡಿಸುವ ಕೆಲಸ.. ಇವನು ಇನ್ನು ಮುಂದೆ ಇನೇನಿಯ ಅಧೀನ. ದೇವರು ದಯೆತೋರಿಸಿ ಇವನ ಹುಚ್ಚೇನಾದರೂ ಬಿಟ್ಟುಹೋದರೆ,ನಾವು ಬರೆ ಎಳೆದದ್ದು ಸಾರ್ಥಕವಾಗ್ರದೆ..ದೇವಸೇವಕ ಗಣಕ್ಕೆಲ್ಲ ಈ ಮೆನ್ನ ಒಂದು ಪಾಠ, ಸದಾಕಾಲ ನೆನಪಿಡಬೇಕಾದ ಪಾಠ.” ಇಷ್ಟು ಹೇಳಿ ಹೇಪಾಟ್ ಬಲತೋಳನ್ನೆತ್ತಿದ. ಅಲ್ಲಿದ್ದವರೆಲ್ಲ ಎದು ನಮಿಸಿದರು. ಸಭೆ ಚೆದರಿತು.

 ಹೇಪಾಟ್ ತನ್ನ ನಿವಾಸಕ್ಕೆ ತೆರಳಿದ ಮೇಲೆ ಮೆನ್ನ ಎದು ಕುಳಿತ.. ಆ ಹಗಲು ಅವನು ಆಹಾರ ಸ್ವೀಕರಿಸಿರಲಿಲ್ಲ, ಕತ್ತಲಾದ ಮೇಲೆ ಅರಮನೆಯ ದೇವಮಂದಿರದತ್ತ ಹೊರಟ ಇನೇನಿಯನ್ನು, ಮರುಮಾತನಾಡದೆ ಅವನು ಹಿಂಬಾಲಿಸಿದ.
       *             *                *               *               *

ಮತ್ತೊಮ್ಮೆ ತನ್ನ ನುಣುಪು ತಲೆಯನ್ನು ಅಂಗೈಯಿಂದ ಸವರಿ ಕೆಲವು ನಿಮಿಷ ಸುಮ್ಮನಿದ್ದು, ನಿಟ್ಟುಸಿರು ಬಿಟ್ಟು,ಇನೇನಿ ಮೆನೆಪ್ ಟಾ

ನೋಡನೆ ಅಂದ :