ಪುಟ:Mrutyunjaya.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ತ್ಯು೦ಜಯ “ಕಡು ಪಾಪಿ. ದೇವರು ಕೃಪಾದೃಷ್ಱಿ ಬೀರಿಯೇ ಇಲ್ಲ. ಅವತ್ತು ಹುಚ್ಚ. ಇವತ್ತೂ ಹುಚ್ಚನೇ. ವಿಷಯ ತಿಳಿದಿರಲಿ ಅಂತ ಹೇಳ್ದೆ. ಅವನ ಯಾವ ಮಾತೂ ನೀವು ನಂಬಬೇಡಿ. ಯಾಕೆಂದರೆ ಅವನಿಗೆ ಏನೂ ಗೊತ್ತೇ ಇಲ್ಲ.”

     ಮೆನೆಪ್ೞಾ ಎದ್ದು ಕಿಟಕಿಯ ಬಳಿ ಸಾರಿದ. ಬಿಸಿಲು ಬಾಡಿತ್ತು.
   ಜರ್ಜರಿತ ಮೆನ್ನನ ರೂಪ ಅವನ ಕಣ್ಣೆದುರು ಕಾಟ್ಟಿತು.
       ಇನೇನಿಯೂ ಎದ್ದ.
       ನಿ೦ತಲ್ಲಿ೦ದ ಕತ್ತು ಹೊರಳಿಸಿ ಮೆನೆಷ್ಟಾ ಅ೦ದ :
       “ಮೆನ್ನನ ವಿಷಯ ನೀವು ಹೇಳಿದ್ದು ಒಳ್ಳೇದಾಯ್ತು.”
       “ದೈವಕ್ಕೆ ಧರ್ಮಕ್ಕೆ ಎದುರು ನಿಲ್ಲೋದು ಎಷ್ಟು ಅಪಹಾಸ್ಯಕರ! ಅವನ ವಿಷಯ ಮಾತನಾಡೋದೆ೦ದರೆ ನನಗೆ ಬೇಸರ. ಆದರೂ ಕರ್ತವ್ಯ ಆಂತ....... "
       ಮುಗುಳುನಗುತ್ತ,ಮೆನೆಪ್ಟಾ ನಮಿಸಿದ:
       "ಹೋಗಿ ಬನ್ನಿ."
       ಬಲ ಅ೦ಗೈಯನ್ನೆತ್ತಿ ಆಡಿಸಿ, ತನ್ನ ಲಾ೦ಛನಕೋಲಿನೋಡನೆ ಇನೇನಿ ಹೊರಕ್ಕೆ ನಡೆದ.
       ಅವನು ಹೂದೋಟ ದಾಟುವವರಿಗೂ ಸುಮ್ಮನಿದ್ದು, ಬಟಾ ಅ೦ದ:       
       "ಮೆನೆಷ್ಱಾ ಆಣ್ಣ.ಈ ಮೆನ್ನ ಖ೦ಡಿತ ಹುಚ್ಚ ಅಲ್ಲ. ನಾವು ಅವನನ್ನು ನಮ್ಮೂರಿಗೆ ಕರಕೊಂಡು ಹೋಗ್ಬಿಡೋಣ.” 

“ಬರೋದಕ್ಕೆ ಅವನೂ ಒಪ್ಪಬಹುದು. ಆದರೆ ಇವರು ಬಿಡ್ತಾರೆ ಅ೦ದ್ಕೊ೦ಡ್ಯಾ ? ಜನರ ಕಣ್ಣಿಗೆ ಅವನು ಹುಚ್ಚನಾಗಿಯೇ ತೋರ್ಭೇಕು, ಇಲ್ದೆ ಹೋದರೆ ಇವರಿಗೆ ತೊಂದರೆ...”

     "ಈಗ್ಲೇ ಹೋಗಿ ಮೆನ್ನನನ್ನು ನೋಡೋಣ ಅನಿಸ್ತದೆ."
     “ಬೇಡ. ಈಗಲೂ ಬೇಡ. ರಾತ್ರೆಯೂ ಬೇಡ. ಇನ್ನು ಮೂರು ನಾಲ್ಕು ದಿವಸ ಆ ಕಡೆಗೆ ಹೋಗೋದೇ ಬೇಡ.ನಾವಾಗಿಯೇ ಮೆನ್ನನನ್ನು ಭೇಟಿ ಮಾಡ್ತೇವೇ೦ತ  ಗೊತ್ತಾದ್ರೆ ಅವನನ್ನು ಇನ್ನೆಲ್ಲಿಗಾದರೂ ಕಳಿಸ್ಟಿಡ್ತಾರೆ.”