ಪುಟ:Mrutyunjaya.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯೂ “ಶೌಚಗೃಹ ತೊಳೆಯೋಕೆ. ಹು೦ !"

....ಸ೦ಜೆ ಬಟಾ ತನ್ನ ಅಂಬಿಗರೊಡನೆ ದೋಣಿಕಟ್ಟೆಯ ತನಕ ಹೋದ. 

ಐವರು ಪ್ರಾ೦ತಪಾಲರ ನಾವೆಗಳು ದಂಡೆಯುದ್ದಕ್ಕೂ ತಂಗಿದ್ದುವು. ಬೇಸರ ದಲ್ಲೂ ಕುತೂಹಲ ಬಟಾ ಅತಿಥಿಗೃಹಕ್ಕೆ ಮರಳಿದ. ಕೊಠಡಿಯಲ್ಲಿ ಕುಳಿತು ಕೊಳಲಿನಲ್ಲಿ ಒ೦ದೇ ಸಾಲನ್ನು ಅವನು ನುಡಿಸಿದ.

   "ಇ೦ದು ಯಾರೊಡನೆ ನಾ ಮಾತಾಡಲೀ?"

ಕೊಳಲು ಕೆಳಗಿರಿಸಿ, “ನಾಳೆ ಪೆರೋ ಸಂದರ್ಶನದಲ್ಲಿ ಕಾಣಿಕೆ ಕೊಡ್ಬೇಕು ಅಲ್ಲವಾ ?"ಎ೦ದು ಮೆನೆಪ್ಟಾನನ್ನು ಕೇಳಿದ.

    "ಹೌದು."
    "ಹಾಗಾದರೆ ಧೂಳು ಒರೆಸಿ ಕಾಣಿಕೇನ ಸಿದ್ಧಪಡಿಸ್ತೇನೆ.”
     ಅಷ್ಟು ಹೇಳಿ ಬಟಾ ಚಪ್ಪಾಳೆ ತಟ್ಟಿದ.
     ಸಮೀಪಿಸಿದ ಸೇವಕನಿಗೆ,"ಒ೦ದಿಷ್ಟು ರಾಳ ಮತ್ತು ಚಿ೦ದಿ ಸೆಣಬು                       
  ತಗೊ೦ಡು ಬಾಪ್ಪ,"ಎ೦ದ.
     ಮೆನೆಷ್ ಟಾನನ್ನು  ನೋಡಿ, “ಅರಸನ ಆಸ್ಥಾನಕ್ಕೆ ನಮ್ಮೂರಿನ ಕಾಣಿಕೆ ನಾವೇ ಒಯ್ದು ಮುಟ್ಟಿಸ್ಬೇಕು. ನಾಳೆ ನಾಯಕನ ಜತೆ ಪರಿವಾರವೂ ಇರ್ತದೆ,” ಎ೦ದ.
              *              *             *            *
     ಬೆಳಕು ಹರಿಯುತ್ತಿದ್ದ೦ತೆ ಪವಿತ್ರ ಕೊಳದಲ್ಲಿ ಮಿಂದು, ಒದ್ದೆ ಬಟ್ಟೆ ಯುಟ್ಟು, ಎ೦ದಿನ ಹಾಗೆ ಚಕ್ರವರ್ತಿಯನ್ನು       
 ಕಾಣಲು  ತನ್ನ ಸಹಾಯಕ ಕಿರಿಯ ದೇವಸೇವಕನೊಡನೆ ಇನೇನಿ ಅರಮನೆಗೆ ಹೋದ.ಸಾಧಾರಣವಾಗಿ     ಬೇಗನೆ ಏಳುವುದು ಪೆರೋನ ಪದ್ಧತಿ. ಅ೦ದು ಆಗಲೇ ಮುಖಮಾರ್ಜನ ಮುಗಿಸಿ, ಶಯ್ಯಾಗಾರದ ಹೊರಗಿನ ಮೊಗಸಾಲೆಯಲ್ಲಿ ಕುಳಿತಿದ್ದ.
     ಇನೇನಿ ಆತನೆದುರು ನಿ೦ದು ಊದ್ಗರಿಸಿದ:

“ఓ ದೀರ್ಘಾಯು ದೊರೆಯೇ, ಸ್ವರ್ಣದೇವತೆ ಹಾಥೊರ್ ನಿನ್ನ ಮೂಗಿಗೆ ಬಲ ಕೊಡಲಿ."