ಪುಟ:Mrutyunjaya.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೧೫

ಮಾಟವಾದ ಮೈ ಕಟ್ಟಿನ ಸುಂದರಿ. ಅಗಲವಾದ ಅಲಂಕೃತ ಸೊಂಟ
ಪಟ್ಟಿ. ಎದುರಿಗೆ ಅದರಿಂದ ಇಳಿದಿದ್ದ ಪುಟ್ಟದೊಂದು ಲಂಗೋಟಿ. ಜಡೆ
ಹೆಣೆದ ನೀಳ ತಲೆಗೂದಲು ಜಘನದವರೆಗೂ ಓಲಾಡುತ್ತಿತ್ತು. ಪೆಪೈರಸ್
ದಂಟಿನಿಂದ ಮಾಡಿದ ವಾದನವನ್ನು ಊದಿ ಒಬ್ಬ ಸ್ವರ ಹೊರಡಿಸುತ್ತಿದ್ದ.
ಇನ್ನೊಬ್ಬ ಗೆಜ್ಜೆ ಕಟ್ಟಿದ ತಮಟೆಯನ್ನು ಅಲುಗಿಸುತ್ತಿದ್ದ. ಮೂರನೆಯವ
ನೊಬ್ಬ ಎಡಕಿವಿಯನ್ನು ಎಡಗೈಯಿಂದ ಮುಚ್ಚಿ ಆಲಾಪನೆ ಮಾಡುತ್ತಿದ್ದ.
ತಮಟೆಯ ಗೆಜ್ಜೆ ಸದ್ದಿಗೆ ಅನುಗುಣವಾಗಿ ಹಿಂದಕ್ಕೂ ಮುಂದಕ್ಕೂ ಎಡಕ್ಕೂ
ಬಲಕ್ಕೂ ಹೆಜ್ಜೆಗಳನ್ನಿಡುತ್ತ, ತೋಳುಗಳನ್ನು ತರುಣಿ ಮೇಲಕ್ಕೆತ್ತಿ ಆಡಿಸು
ತ್ತಿದ್ದಳು. ಒಮ್ಮೆ ಎದೆಯನ್ನು ಕುಣಿಸುತ್ತಿದ್ದಳು. ಒಮ್ಮೆ ಹಿಂಬದಿಯನ್ನು.
ಕಣ್ಣುಗಳು ಮೋಹಕವಾಗಿ ಅತ್ತಿತ್ತ ಹೊರಳುತ್ತಿದ್ದುವು. ಕರಡಿ ಹಿಂಗಾಲು
ಗಳ ಮೇಲೆ ನಿಲ್ಲುತ್ತಿತ್ತು. ಕೈ ಕೈ ಹಿಡಿದು ಅವರಿಬ್ಬರ ಮಂದಗತಿಯ
ನೃತ್ಯ.
ಮೈದಡವಿದ ಅನುಭವ ಮೆನೆಪ್ಟಾಗೆ. ನಾಲಿಗೆ ತುಟಿಗಳನ್ನು ಸವ
ರಿತು. ಆತ ನರ್ತಕಿಯನ್ನು ಎವೆಯಿಕ್ಕದೆ ದಿಟ್ಟಿಸಿದ.
ನೆಫಿಸ್ ಗಂಟಲು ಸರಿಪಡಿಸಿಕೊಂಡ ಸದ್ದು. ಮೆನೆಪ್ಟಾ ಅವಳತ್ತ
ನೋಡಿದ___ಅಡುಗೆಮನೆಯಲ್ಲಿ ಕದಿಯುತ್ತಿದ್ದಾಗ ಸಿಕ್ಕಿಬಿದ್ದ ಹುಡುಗನಂತೆ.
ನೆಫಿಸಳ ತೋಳುಗಳು ಮೇಲ್ಮೊಗವಾಗಿದ್ದುವು; ತಲೆಯ ಮೇಲಿನ ಗಂಟನ್ನು
ಮುಟ್ಟಿದ್ದುವು ಬೆರಳುಗಳು. ಭುಜದಿಂದ ಇಳಿದ ಅಗಲ ಕಿರಿದಾದ ಎದೆವಸ್ತ್ರ
ಸ್ತನಗಳ ನಡುವೆ ಬೆವರಿಗೆ ಅಂಟಿಕೊಂಡಿತ್ತು. ಅವಳ ಕಣ್ಣುಗಳು ಗಂಡನ
ದೃಷ್ಟಿಯನ್ನು ಸಂಧಿಸಿ ನಗೆ ಸೂಚಿಸಿದುವು. ಅವಳ ವಕ್ಷಸ್ಥಲ ಸ್ಪಂದಿಸಿತು.
ಅವಳೆಂದಳು :
"ಜತೆಯವರನ್ನೆಲ್ಲ ತಾಳೆ ಮರಗಳ ನೆರಳಿಗೆ ಬರಹೇಳಿದ್ದಿ, ಅಲ್ಲ ?"
"ಹೌದು, ನಡಿ."
ಮಗನನ್ನು ತಾಯಿ ಕರೆದಳು :
"ಬಾರೊ, ರಾಮೆರಿ."

****

ನಾಲ್ಕು ಹೆಜ್ಜೆ ಹೋಗುವುದರೊಳಗೆ ರಸ್ತೆಯ ಅಂಚಿನಿಂದ ಧ್ವನಿ