ಪುಟ:Mrutyunjaya.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ಪೆರೋ ನುಡಿದ : “ಎಲ್ಲ ದ್ವಾರಗಳನ್ನೂ ತೆರೆ;ಒಳಬರುವುದೆಲ್ಲವೂ ಒಳಬರಲಿ,ಹೊರ ಹೋಗುವುದೆಲ್ಲವೂ ಹೊರಹೋಗಲಿ.”

  ಆ ಅಣತಿಯೊಡನೆ ಇನೇನಿ ಮರಳಿದೊಡನೆಯೇ ನಗಾರಿಯ ಸದ್ದಾಯಿತು. ಸೇವಕರು ಅರಮನೆಯ ಆವರಣದ ಮಹಾದ್ವಾರವನ್ನೂ ಹೆಬ್ಬಾಗಿಲನ್ನೂ ತೆರೆದರು. ಇದರ ಜತೆಗೆ ಭವನಗಳ ವಸತಿಗಳ ನೂರಾರು ಬಾಗಿಲುಗಳೂ ತೆರೆದುಕೊಂಡುವು.
   ಅರಸನನ್ನು ದೇವಸನ್ನಿಧಿಗೆ ಬರಮಾಡಿಕೊಳ್ಳುವ ಪೂರ್ವ ಸಿದ್ಧತೆಗಾಗಿ ಇನೇನಿ ಸಹಾಯಕನೊಡನೆ ದೇವಮಂದಿರಕ್ಕೆ ನಡೆದ.

ಅರಮನೆಯ ಹಿರಿಯ ಕ್ಷೌರಿಕ ಆವರಣದ ಮೂಲೆಯಲ್ಲಿದ್ದ ತನ್ನ ವಸತಿಯಿಂದ ಹೊರಟು, ಪೆರೋ ಕುಳಿತ ಮೊಗಸಾಲೆಗೆ ಬಂದ. ಜತೆಗೊಬ್ಬ ಕಿರಿಯ ಕ್ಷೌರಿಕ_ಸಹಾಯಕ. ಅರಮನೆಯ ಪರಿಚಾರಕನೊಬ್ಬ ಒಳಗಿನಿ೦ದ ಕ್ಷೌರದ ಸಲಕರಣೆಗಳನ್ನು ತಂದು, ಒಂದು ತಗ್ಗು ಮೇಜಿನ ಮೇಲಿರಿಸಿದ : ಮುಖ ಪ್ರತಿಫಲಿಸುವಷ್ಟು ಹೊಳೆಯುತ್ತಿದ್ದ ನುಣುಪಾದ ಕಂಚಿನ ಸ್ವರೂಪ ದರ್ಶಕ. ತಾಮ್ರದ ಪಾತ್ರೆಯಲ್ಲಿ ಬಿಸಿನೀರು; ಹರಿತ ಅಲಗಿನ ಕಂಚಿನ ಕ್ಷೌರ. ಕತ್ತಿ. ಅದನ್ನು ತೀಡಿ ಕ್ಷೌರಕ್ಕೆ ಅಣಿಗೊಳಿಸಲು ತೊಗಲಿನ ನೀಳ ತುಣುಕು ಬಿಸಿನೀರನ್ನು ಮುಖಕ್ಕೆ ಒತ್ತಲು ಸೆಣಬು ಅರಿವೆಯನ್ನು ಮಡಚಿ ಮಾಡಿದ ಮೆತ್ತೆ.

   ಹೆಚ್ಚುಕಡಮೆ ಪೆರೋನದು ನಿತ್ಯಕ್ಷೌರ.  ತಲೆಗೂದಲು ನರೆಯುವ

ಸೂಚನೆ ಕಂಡೊಡನೆಯೇ ಅದಕ್ಕೆ ಕಪ್ಪು ಬಳೆಸಲು ಆರಂಭಿಸಿದ್ದ. ನಡು ವಯಸ್ಸು ದಾಟಿದ ಮೇಲೆ ಕೆನ್ನೆ ಗಲ್ಲ ಮೇಲ್ದುಟಗಳಲ್ಲೂ ನರೆತದ ಛಾಯೆ. ಇನೇನಿ ತಯಾರಿಸಿ ಕೊಟ್ಟ ಗಿಡಮೂಲಿಕೆಗಳ ಕಷಾಯ ಕುಡಿದ. ಪ್ರಯೋಜನ ವಾಗಲಿಲ್ಲ. ಬೆಳಿಗ್ಗೆ ಕ್ಷೌರಿಕನನ್ನು ಕಂಡಾಗಲೇ ಅವನಿಗೆ ತುಸ ಸಮಾಧಾನ. ಮುಖಕ್ಷೌರವಾಯಿತು. ಕಂಕುಳ ಕೂದಲನ್ನೂ ಕ್ಷೌರಿಕ ಬೋಳಿಸಿದ. ಸ್ಫಟಿಕದ ತ೦ಪು_ಉరి ಕಿರಿಯ ಕ್ಷೌರಿಕ ತನ್ನೆದುರು ಹಿಡಿದಿದ್ದ ಸ್ವರೂಪ ದರ್ಶಕದಲ್ಲಿ ಪ್ರತಿಬಿಂಬ ನೋಡಿ ಪೆರೋಗೆ ತೃಪ್ತಿ.