ಪುಟ:Mrutyunjaya.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೪೯ ಖಚಿತ ಸಿಂಹಾಸನದಲ್ಲಿ ಆರೂಢನಾದ ಅರಸ ಭವನದ ದ್ವಾರದತ್ತ ನಿರೀಕ್ಷೆಯ ನೋಟ ಬೀರಿದ. ಬೆನ್ನ ಹಿಂದೆ ಅಂಗರಕ್ಷಕರು. ಮುಂದುಗಡೆ ಎಡಬಲಗಳಲ್ಲಿ ಚಾಮರ ಸೇವಕರು. ಲಿಪಿಕಾರರು ವೇದಿಕೆಯ ಮಗ್ಗುಲುಗಳಲ್ಲಿ. ಬಲಗಡೆ ಸಿಂಹಾಸನದಿಂದ ಮೂರು ಮೊಳ ದೂರದಲ್ಲಿ ಸಾಧಾರಣ ಪೀಠದ ಮೇಲೆ ಅರಸನ ಪಾರ್ಶ್ವನೋಟಕ್ಕೆ ಎದುರಾಗಿ ಅಮಾತ್ಯ ಕುಳಿತಿದ್ದ. ವೇದಿಕೆ ಯನ್ನೂ ಕೆಳಗಿನ ನೆಲವನ್ನೂ ರತ್ನಗಂಬಳಿ ಆವರಿಸಿತ್ತು. ಹಿನ್ನೆಲೆಯಲ್ಲಿ ಅದೇ ಮಟ್ಟದಲ್ಲಿ ಇನ್ನೊಂದು ವೇದಿಕೆ. ಪಟ್ಟದ ಮಹಿಷಿಯೂ ಇತರ ರಾಜಪರಿವಾರದವರೂ ಸಭೆಗೆ ಬರಲು ಇಚ್ಛೆಪಟ್ಟ ದಿನ ಅದರ ಬಳಿಕೆ. ಭವನದ ತುಂಬ ಐಗುಪ್ತ ರಾಷ್ರ ನಿರ್ಮಾಪಕ ಮೆನೆಸ್, ಆಳಿದ ಜೋಸರ್, ಕಾಫ್ರಾ, ಮೆನ್ ಕೋರಾ, ಖೂಫು ಮತ್ತಿತರ ಪೆರೋ-ಪೂರ್ವ ಜರು ವಿವಿಧ ಚಟವಟಿಕೆಗಳಲ್ಲಿ ನಿರತರಾಗಿರುವುದನ್ನು ತೋರುವ ಭಿತ್ತಿಚಿತ್ರಗಳು. ಶುಭ್ರ ವರ್ಣಗಳಲ್ಲಿ. ಪೆರೋ ಪೇಸಿಗೆ ಸಭಾಭವನ ಪರಮಪ್ರಿಯ ಸ್ಥಳ. ಅದೂ, ಸಭಾಸದರ ಗದ್ದಲ ಇಲ್ಲದಿದ್ದಾಗ. ಈ ಸಿರಿಸಂಪದ, ವೈಭವ, ಅಧಿಕಾರ ಎಲ್ಲವೂ ವಾಸ್ತವ ಎಂಬ ದೃಢಭಾವ ಪೇಸಿಗೆ ಮೂಡುತ್ತಿದ್ದುದು ಆತ ಸಭಾಭವನದಲ್ಲಿ ಸಿಂಹಾಸನದ ಮೇಲೆ ಕುಳಿತಾಗಲೇ. (ಇದೆಲ್ಲ ಕನಸು ಎಂದು ಭಾಸವಾಗುತ್ತಿದ್ದುದು. ರಾತ್ರೆ ಅರಮನೆಯ ಹಿಂಬದಿಯಲ್ಲಿ ನದಿ ದಂಡೆಯ ಮೇಲೆ ತಂಗಾಳಿಗೆ ಮೈಯ ನ್ನೊಡ್ಡಿ ಆಕಾಶದಲ್ಲಿನ ಅಸಂಖ್ಯ ನಕ್ಷತ್ರಗಳನ್ನು ದಿಟ್ಟಿಸಿದಾಗ.) ನಿರೀಕ್ಷೆಯ ನಡುವೆ ಒಂದೆರಡು ಮಾತು. " ಪ್ರಾಂತಪಾಲರು ಒಬ್ಬೊಬ್ಬರಾಗಿ ರಾಜಧಾನಿಗೆ ಬರತೊಡಗಿದ್ದಾರೆ.” -ಪೆರೋನಲ್ಲಿ ಅರಿಕೆ. " ಬರಲಿ, ಮುನ್ನೂರ ಅರವತ್ತೈದು ದಿನಗಳೂ ದುಡಿತ ಸಲ್ಲದು. ರಾಜಧಾನಿಯಲ್ಲಿ ನಮ್ಮ ಸಮಿಪದಲ್ಲಿದ್ದು ವಿಶ್ರಾಂತಿ ಪಡೆಯಲಿ."