ಪುಟ:Mrutyunjaya.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦ ಮೃತ್ಯುಂಜಯ ಮತ್ತೆ ಮೌನ. ನಿರೀಕ್ಷೆ. ಬಳಿಕ ಅರಸ : " ಗೇಬು ಮತ್ತು ಅವನ ಪತ್ನಿಯನ್ನು ಕರೆದು ಬಹಳ ಕಾಲವಾಯ್ತು.

ಒಂದು ಔತಣ ?"

ಮೆನೆಪ್ಟಾ ?" ” ಹ್ಞ. ಆದರೆ ತೀರಾ ಹತ್ತಿರದವರಿಗೆ ಸೀಮಿತ.” “ ಅಪ್ಪಣೆ.” ದ್ವಾರದ ಬಳಿ ಇದ್ದವರಲ್ಲಿ ಜೀವಸಂಚಾರ.

      *                          *                            *                                 *

ಮೆನೆಪ್ಟಾ ಬೆಳಿಗ್ಗೆ ಬೇಗನೆ ಸಿದ್ಧನಾದ, ಪೆರೋ ದರ್ಶನಕ್ಕೆ ಹೋಗಲು. ಕರೆದೊಯ್ಯಲು ಬಂದ ಸೆನೆಬ್ “ಅವಸರವಿಲ್ಲ,” ಎಂದ. ಸಂದರ್ಶನಕ್ಕೆ ಬರುವ ವ್ಯಕ್ತಿ ಪೆರೋವನ್ನು ಕಾಯಿಸುವುದೆಂದರೆ ? ಹಾಗೆ ಆಗಬೇಕೆಂದೇ ಸೆನೆಬ್ ಆ ರೀತಿ ಹೇಳಿದ್ದು ; ಅವನಿಂದ ಯಾರೋ ఆ ಮಾತನ್ನು ಆಡಿಸಿದರು---- ಎಂದು ಮೆನೆಪ್ಟ ಊಹಿಸಲಿಲ್ಲ. ಸಭಾಭವನದ ಸಮಿಪ ಬಂದಾಗ, ವಿಲಂಬವಾಯಿತೇನೊ ? ಪ್ರಮಾದ ವಾಯಿತೇನೊ ? ಎಂದು ವಿವಂಚನೆಗೆ ಅವರು ಒಳಗಾದ. ಮರುಕ್ಷಣವೇ ಹಾಗಿರಲಾರದು ಎಂದುಕೊಂಡ. ಸಭಾಭವನದ ದ್ವಾರವನ್ನು ಪ್ರವೇಶಿಸಿದ ಮೆನೆಪ್ಟಾಗೆ ಬವಳಿ ಬಂದಂತಾಯಿತು. ಅಬ್ಟು ಜಾತ್ರೆಯಲ್ಲಿ ಪೆರೋನನ್ನು ಅವನು ನೋಡಿದ್ದ....ಬೇಕಾದರೆ, ಅಮಾತ್ಯದರ್ಶನಕ್ಕಿಂತ ನೂರುಪಟ್ಟು ಹೆಚ್ಚು ಗಭೀರ...ಅರಸನನ್ನು ಕಂಡಾಗ ತಾನು ವಂದಿಸಬೇಕಾದ ವರ್ತಿಸಬೇಕಾದ ರೀತಿಯನ್ನು ಮತ್ತೆ ಮತ್ತೆ ಮನಸ್ಸಿನಲ್ಲೆ ಅವನು ಚಿತ್ರಿಸಿಕೊಂಡಿದ್ದ. ಆದರೂ----------- ಪಾದರಕ್ಷೆಗಳನ್ನು ಕಳಚಿದ. ರತ್ನಗಂಬಳಿಯ ಮೇಲೆ ಬರಿಯ ಪಾದ. ನುಣುಪು ಮರಳನ್ನು ಮೆಟ್ಟಿದಂತೆ ಕನಸಿನಲ್ಲಿ ನಡೆಯುವವನ ಹಾಗೆ ಸಭಾಭವನದ ಮಧ್ಯಕ್ಕೆ ಸಾಗಿದ. ಪೆಟಾರಿಯನ್ನು ಹೊತ್ತ ಬಟಾ, ಅವನ ಹಿಂದಿದ್ದ ಔಟ ಮತ್ತು ಬೆಕ್ ದ್ವಾರದ ಬಳಿಯೇ ನಿಂತರು,ನಾಯಕನ ನಡಿಗೆಯನ್ನು ನೋಡುತ್ತ.