ಪುಟ:Mrutyunjaya.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೫೧ ಸಿಂಹಾಸನದ ಪ್ರಭೆ ಕಣ್ಣು ಕುಕ್ಕಿತು. ಅದರಲ್ಲೊಂದು ಜೋಡಿ ಕಿರೀಟ. ಮೆನೆಪ್ಟಾ ನಡುಬಗ್ಗಿಸಿ ನಮಿಸಿ, ನೆಟ್ಟಗೆ ನಿಂತು ನುಡಿದ : “ ಪೆರೋನ ಆಯುರಾರೋಗ್ಯ ವರ್ಧಿಸಲಿ !" ಆ ಬಗೆಗೆ ನೀರಾನೆ ಪ್ರಾಂತದ ನಾಯಕ ಮೊದಲೇ ಯೋಚಿಸಿದ್ದ: ಬಂಡಾಯವೆದ್ದವರು ಶಿಷ್ಟಾಚಾರ ಪಾಲಿಸಬಾರದೆಂದು ಎಲ್ಲಿದೆ ? ಅವನೆಂದುಕೊಂಡ : ಅತ್ಯಂತ ಕಷ್ಟದ ಹಂತವನ್ನು ದಾಟಿದ್ದಾಯಿತು; ಇನ್ನು ಉಸಿರಾಡಬಹುದು. ತುಸು ಕತ್ತು ಹೊರಳಿಸಿ, ಧ್ವನಿ ಬದಲಿಸಿ, ಅವನು ಕರೆದ: "ಬಟಾ !" ಕಾಣಿಕೆ ಚಲಿಸಿತು. ಸೆನೆಬ್ನ ಸ್ವರ ಕೇಳಿಸಿತು: " ಇನ್ನೂ ಮುಂದೆ ಹೋಗಿ.” ಮುಂದಕ್ಕೆ ವೇದಿಕೆಗಿದರು. "ಹಿಡೀಲಾ ?” ಎಂದು ಮೆನೆಪ್ಟಾ ಕೇಳಿದುದು, ಬಟಾ "ಬೇಡ" ಎಂದುದು ಎಲ್ಲರ ಕಿವಿಗೂ ಬಿತ್ತು. ಪೆರೋಗೆ ಇದು ಅಪೂರ್ವ ಅನುಭವ. ಅಮಾತ್ಯನಿಗೂ. ಫಳಫಳನೆ ಹೊಳೆಯುತ್ತಿದ್ದ ಪೆಟಾರಿಯನ್ನು ಬಟಾ ಕೆಳಗಿಳಿಸಿದ. ಮುಚ್ಚಳ ತೆರೆದು, ಅಮೂಲ್ಯ ಹರಳುಗಳ ಶುಭ್ರತೆಯೊಡನೆ ಸ್ಪರ್ಧಿಸುತ್ತಿದ್ದ ಗಡಿಯಾರ ವನ್ನು ಎತ್ತಿ, ರತ್ನ ಗಂಬಳಿಯ ಮೇಲಿರಿಸಿದ, ಮತ್ತೆ ಪೆಟಾರಿ ಮುಚ್ಚಿ, ನುಣುಪಾದ ಅದರ ಕವಚದ ಮೇಲೆ ಗಡಿಯಾರವನ್ನಿಟ್ಟ. ಎಲ್ಲರ ದೃಷ್ಟಿಗಳೂ ಅದರ ಮೇಲೆ ನೆಟ್ಟಾಗ, ಬಟಾ ತಾನು ಹಿಂದಕ್ಕೆ ಸರಿದು, ಕರಗಿ ಹೋದ. ಮೆನೆಪ್ಟಾನ ಮಾತು : " ಐಗುಪ್ತದ ಮಹಾಪ್ರಭುವಿಗೆ ನೀರಾನೆ ಪ್ರಾಂತದ ಅಲ್ಪ ಕಾಣಿಕೆ. ಸ್ವೀಕರಿಸಬೇಕು.” (ಕೆಫ್ಟು ಕೂಡಾ 'ಅಲ್ಪ ಕಾಣಿಕೆ' ಎಂದಿದ್ದ, ವಿನಯ ದ್ಯೋತಕ ಪದ.) ಮೆನೆಪ್ಟಾನ ನೋಟಕ್ಕೆ ಸಿಂಹಾಸನ, ಕಿರೀಟ,ಅದಕ್ಕಂಟದ ಶಿರವಸ್ತ್ರ,