ಪುಟ:Mrutyunjaya.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಮೃತ್ಯುಂಜಯ ವಸ್ತ್ರದ ಕೆಳಗೆ ಶಿರಸ್ಸು, ಶಿರಸ್ಸಿನ ಭಾಗವಾದ ಮುಖ ಹೊಂದಿಕೊಂಡುವು. ಪರಿ ಸರದ ಪೂರ್ಣಚಿತ್ರವನ್ನು ಅವನು ಕಂಡ. ಅದರಲ್ಲಿ ಅಮಾತ್ಯನಿದ್ದ . ಪರಿಚಿತ ಸ್ವರ ಕೇಳಿಸಿತು :

" ಮಹಾಪ್ರಭುವಿನ ಹತ್ತಿರಕ್ಕೆ ಬನ್ನಿ."
ವೇದಿಕೆಯನ್ನೇರಲು ಪಾವಟಿಗೆ. ಪೆರೋನ ತುಟಿಗಳ ಮೇಲೆ ಮಂದ ಹಾಸ. ಕೊಂಡಿ ಕೋಲನ್ನು ಆತನ ಬಲಗೈ ಮುಂದಕ್ಕೆ ಚಾಚಿತು.

ಮೆನೆಪ್ಟಾ ಬಾಗಿ ಆ ಕೋಲನ್ನು ಚುಂಬಿಸಿ, ವೇದಿಕೆಯಿಂದ ಇಳಿದ. ಸೆನೆಬ್ನ ಪಿಸು ದನಿ ಪಕ್ಕದಿಂದ ಬಂತು : "ಈಚೆಗೆ ಬರಬೇಕು.ಈ ಪೀಠದ ಮೇಲೆ. ಅಮಾತ್ಯರು ಸನ್ನೆ ಮಾಡ್ತಿದ್ದಾರೆ. ಕೂತ್ಕೊಳ್ಳಿ.” ('ಸಂಜ್ಞೆ ತನಗೆ ಕಾಣಿಸುತ್ತಿಲ್ಲವೆ ? ಈತ ಹೇಳಿಕೊಡಬೇಕೆ ಇದನ್ನು?') ಕಿರೀಟಧಾರಿ ತಗ್ಗಿದ ಧ್ವನಿಯಲ್ಲಿ ಏನನ್ನೋ ಹೇಳಿದ ಸದ್ದು. ಅಮಾತ್ಯ :

" ಸೆಡ್ ಉತ್ಸವಕ್ಕೆಂದು ನೀರಾನೆ ಪ್ರಾಂತದ ನಾಯಕ ಇಷ್ಟು ಬೇಗನೆ ರಾಜಧಾನಿಗೆ ಬಂದದ್ದನ್ನು ಕಂಡು, ಮಹಾಪ್ರಭು ಸಂತುಷ್ಟರಾಗಿದ್ದಾರೆ.”

(ತಾನು ಏನಾದರೂ ಹೇಳಬೇಕಲ್ಲ?) ಮೆನೆಪ್ಟಾ ನುಡಿದ :

"ಧನ್ಯ.” 

ಮತ್ತೆ ಪೆರೋನ ನಿಧಾನ ಮಾತು. ತುಸು ದೀರ್ಘ. ಅಮಾತ್ಯ : " ತನ್ನ ಮಂದೆಯ ಸುಖ ದುಃಖಗಳನ್ನು ಮಹಾಕುರುಬ ಚೆನ್ನಾಗಿ ಬಲ್ಲ-ಎನ್ನುತ್ತಾರೆ-ಮಹಾಪ್ರಭು. ದೊಡ್ಡ ಕುಟುಂಬ. ಸಣ್ಣ ಪುಟ್ಟ ವಿರಸ ಸ್ವಾಭಾವಿಕ. ಎಲ್ಲರ ತಂದೆಯ ಒಲವಿನ ಹೊನಲಿನಲ್ಲಿ ತಾಪಗಳು ಮಾಯ ವಾಗ್ತವೆ, ಗಾಯಗಳು ಮಾಯುತ್ತವೆ.” (ಏನು ಪ್ರತಿಮಾತು ಇದಕ್ಕೆ ?) ಮೆನೆಪ್ಟಾ ಬರಿದೆ ತಲೆ ಆಡಿಸಿದ.

ತಿರುಗಿ ಪೆರೋ ಮಾತನಾಡಿದುದನ್ನು ಅಮಾತ್ಯ ವಿವರಿಸಿದ : 

“ ఎల్ల ರೀತಿ ರಿವಾಜುಗಳನ್ನೂ ನೀತಿ ನಿಯಮಗಳನ್ನೂ ಮಹಾದೇವ ರಾ ತನ್ನ ಆಳ್ವಿಕೆಯಲ್ಲೇ ತೀರ್ಮಾನ ಮಾಡಿದ. ಚಾಚೂ ತಪ್ಪದೆ ಅದನ್ನೆಲ್ಲ