ಪುಟ:Mrutyunjaya.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೫೩ ಅನುಸರಿಸಿದಾಗಲೇ ಪ್ರಜಾಹಿತ, ದೇಶಹಿತ. ಪ್ರಾಚೀನ ಕಟ್ಟಳೆಗಳನ್ನು ಮುರಿ ಯುವ ಯತ್ನ ಯಾರೇ ಮಾಡಲಿ, ಯಾರೇ ಮಾಡಲಿ? ಅದರಿಂದ ಹಾನಿ ಉಂಟಾಗ್ತದೆ. ಜನರೊಡನೆ ಹೊಣೆಗೆಟ್ಟು ವರ್ತಿಸಿದವನು ದಂಡನೆಗೆ ಅರ್ಹ."

   (ಯಾರೇ ಮಾಡಲಿ, ಯಾರೇ ಮಾಡಲಿ? ಮಹಾ ಅರ್ಚಕ?.... ‘ಜನರೊಡನೆ ಹೊಣೆಗೆಟ್ಟು ವರ್ತಿಸಿದವನು’? ಟಿಹುಟ?)
    ಅರ್ಥವಾಯಿತು ಎನ್ನುವಂತೆ ಮೆನೆಪ್ ಟಾ ಗೋಣು ಆಡಿಸಿದ.                            ಕಿರೀಟ ಮಿಸುಕಿತು.                                                       “ ಮಹಾಪ್ರಭು ಸಂತೃಪ್ತರಾಗಿದ್ದಾರೆ. ನೀವು ಅತಿಥಿಗೃಹಕ್ಕೆ ವಾಪಸಾಗ್ಬಹುದು.”ಎಂದ ಅಮಾತ್ಯ. 
   ಮೆನೆಪ್ ಟಾ ಎದ್ದ. ಪೆರೋನನ್ನೂ ಅಮಾತ್ಯನನ್ನೂ ನೋಡಿ ನಸುನಗೆ. ವೇದಿಕೆಗೆ ನಮನ.
    ಸೆನೆಬ್ ಪಿಸುನುಡಿದ: 
    “ಪೆರೋಗೆ ಬೆನ್ನು ಹಾಕ್ಬೇಡಿ.
    ನೀಳದೇಹ ಗಂಭೀರವಾಗಿ ಹಿಮ್ಮುಖವಾಗಿ ಚಲಿಸಿತು. ಬಾಗಿಲ ಬಳಿ ಬಟಾ, ಬೆಕ್, ಔಟರು ಆ ದೇಹವನ್ನು ಸುತ್ತುವರಿದರು, ತಮ್ಮ ವಶಕ್ಕೆ ತೆಗೆದುಕೊಂಡರು.
    ನಾಯಕ ಹೊಸ್ತಿಲು ದಾಟುತ್ತಿದ್ದಂತೆ ಪೆರೋ ಅಮಾತ್ಯನಿಗೆ ಅಂದ:                                                         
    “ನೀರಾನೆ ಪ್ರಾಂತ ಮೆಂಫಿಸಿನಿಂದ ಸಿಡಿದು ಹೋಗಿಲ್ಲ; ಮೆಂಫಿಸ್ ತಾನೇ ಆ ಪ್ರಾಂತದಿಂದ ದೂರವಾಗಿದೆ.”
        *       *       *         *
    ಪೆರೋ ಪೇಪಿಯ ತಂದೆಯ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿತ್ತು, ಮೆಂಫಿಸಿನ ನಗರೋದ್ಯಾನ. ಶ್ರೀಮಂತರಿಗಾದರೋ ಅವರ ಅಂಗಳದಲ್ಲೇ ತಾವರೆಕೊಳಗಳೂ ಹೂವಿನ ಗಿಡಗಳೂ ಇದ್ದುವು. ಸಾಮಾನ್ಯ ಪ್ರಜೆಗಳು ಬಿಡುವಿನ ವೇಳೆಯಲ್ಲಿ ಬಂದು ವಿಹರಿಸಲೆಂದು ನಗರೋದ್ಯಾನದ ನಿರ್ಮಾಣವಾಯಿತು. ಮೊದಲು ಹೊಸತನದ ಆಕರ್ಷಣೆ. ಕ್ರಮೇಣ, ಸಂಚರಿಸುವ ಜನರು ಹಾದುಹೋಗುವ ಸ್ಥಳ ಮಾತ್ರವಾಯಿತು ಉದ್ಯಾನ. ಅನಂತರ ಕೆಲವು ವರ್ಷ ನೂತನ ಪೆರೋ ಆಸಕ್ತಿ ತೋರಿದ. ಉದ್ಯಾನ ಮಧ್ಯದ ಕೊಳದಲ್ಲಿ ಒಂದು ಮೊಸಳೆಯನ್ನೂ