ಪುಟ:Mrutyunjaya.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಮೃತ್ಯುಂಜಯ


ಸಾಕಿದ. ಮೂತಿಗೆ ಆಭರಣಗಳನ್ನು ಚುಚ್ಚಿದ ಮೊಸಳೆ. ಜನರು ಅದರ ಪೂಜೆಗೆ, ಅದಕ್ಕೆ ಆಹಾರ ನೀಡವುದಕ್ಕೆ, ಬರತೊಡಗಿದರು. ಕೆಲವರು ಹೊ ಕೀಳುತ್ತಿದ್ದರು. ಅವರನ್ನು ಗದರಿಸಿ ಓಡಿಸುವುದೇ ಕಾವಲು ಭಟರ ಕೆಲಸವಾಯಿತು.

    ಊರಿನಲ್ಲಿ ರಾಜಗೃಹದ ಸುತ್ತಲೂ ಉದ್ಯಾನ ನಿರ್ಮಿಸಿದ್ದ ಮೆನೆಪ್ ಟಾ ರಾಜಧಾನಿಯ ವಿಹಾರೋದ್ಯಾನವನ್ನು ನೋಡಬಯಸಿದ.
    ಪೆರೋನನ್ನು ಕಂಡ ಎರಡು ದಿನಗಳ ಅನಂತರ ಬೆಳಿಗ್ಗೆ ಅಂಬಿಗರನ್ನೊಳ ಗೊಂಡ ತನ್ನಪರಿವಾರದೊಡನೆ ನಾಯಕ ಅರಮನೆಯ ಆವರಣದಿಂದ ಹೊರ ಬಿದ್ದ. ಬಟಾ ಎಂದೋ ಒಮ್ಮೆ ಇತರ ಅಂಬಿಗರ ಜೊತೆಯಲ್ಲಿ ಅಮಲೇರಿದ್ದ ಸ್ಥಿತಿಯಲ್ಲಿ ಉದ್ಯಾನ ನೋಡಿದ್ದ. ಯಾವ ಹಾದಿಯೊ ನೆನಪಿರಲಿಲ್ಲ.
    ದಾರಿ ಕೇಳುತ್ತ ನಗರೋದ್ಯಾನ ತಲಪಿದರು, ಉದ್ಯಾನ ವಿಶಾಲವಾಗಿತ್ತು.ಬಗೆ ಬಗೆಯ ಮರಗಳಿದ್ದುವು, ಗಿಡಬಳ್ಳಿಗಳಿದ್ದುವು. ಆದರೆ ಕಳೆ ಹೇರಳವಾಗಿತ್ತು. ಮುಳ್ಳು ಪೊದೆಗಳು ಬೆಳೆದಿದ್ದುವು. ನೀರು ಹಾಯಿಸುವ ಕಾಲುವೆ ವ್ಯವಸ್ಥೆ ಕೆಟ್ಟತ್ತು. ಕಾಲುದಾರಿಗಳು ಚೊಕ್ಕಟವಿರಲಿಲ್ಲ.
    ಬಟಾ ಊರಿನ ಉದ್ಯಾನವನ್ನು ನೆನೆದು, “ ನಮ್ಮ ಸೆಬೆಕ್ಖು ಮಾವ   ಇದನ್ನು ನೋಡಿದರೆ ಇಸ್ಸಿ ಎಂದಾರು," ಎಂದ.
    ಮೆನೆಪ್ ಟಾನೆಂದ:
    "ದೇಶದ ಸ್ಥಿತಿಯೇ ಉದ್ಯಾನಕ್ಕೂ." 
    ಜನರಿರಲಿಲ್ಲ. ರಾತ್ರಿ ಅಲ್ಲಿಯೇ ಮರಗಳ ಕೆಳಗೆ ಮಲಗಿದ್ದ ವಸತಿಹೀನ ಪಟ್ಟಣಿಗರು ಕೆಲವರು 'ಸೂರ್ಯ ಕಿರಣಗಳು ಚುಚ್ಚುತಿವೆಯಲ್ಲ, ಇನ್ನು ಏಳ ಬೇಕಲ್ಲ' ಎಂದು ಚಡಪಡಿಸುತ್ತಿದ್ದರು. ಗ್ರಾಮಾಂತರ ಪ್ರದೇಶದಿಂದ ಬಂದಿದ್ದ ಎರಡು ಕುಟುಂಬಗಳು ಕೊಳದ ಬಳಿ ಬುತ್ತಿಯೂಟಕ್ಕೆ ಕುಳಿತಿದ್ದುವು. ಮೊಸಳೆಗೆ ಆಹಾರ ನೀಡುವ ಅಪೇಕ್ಷೆ ಅವರಿಗೆ. ಆದರೆ ಆ ದೇವತೆ ಕೊಳದ ನಡುವಿನ ಬಂಡೆ ಅಂಚೆಗೆ ತೆವಳಿ ಎಳೆಬಿಸಿಲು ಕಾಯಿಸುತ್ತ ನಿದ್ದೆ ಹೋಗಿತ್ತು. ಯಾವುದರ ಗಮನವೂ ಅದಕ್ಕೆ ಇರಲ್ಲಿಲ.
    ಸ್ವಲ್ಪ ಹೊತ್ತು ಕುಳಿತು ಕಾಲ ಕಳೆಯೋಣವೆಂದು ಉದ್ಯಾನದ ಅಂಚಿನಲ್ಲಿದ್ದ ತಾಳೆ ಮರಗಳ ಒಂದು ಗುಂಪಿನೆಡೆಗೆ ಮೆನೆಪ್ ಟಾ ಸಂಗಡಿಗರೂ ನಡೆದರು.