ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೨೫೫
ಅವರು ಅದನ್ನು ಸಮಿಪಿಸುತ್ತಿದ್ದಂತೆ ಹಿಂದಿನಿಂದ ಒಂದು ಧ್ವನಿ ಕೇಳಿಸಿತು: "ಅಣ್ಣಾ ! ಓ ಅಣ್ಣಾ !" ಹತ್ತಿರ ಬರುತ್ತಿದ್ದ ಕರೆ. ನಡೆಯುತ್ತಿದ್ದವರು ತಡೆದು, ತಿರುಗಿ ನೋಡಿದರು. ತಿರುಗಿ ನೋಡಿ, ನಿಂತರು. ಆತ ಮೆನ್ನ. ಮೆನ್ನ ಪ್ರಶ್ನಿಸಿದ: "ಹ್ಯಾಗೆ ತಪ್ಪಿಸ್ಕೊಂಡು ಬಂದ್ರಿ ?" ಬಟಾ ಮರುಪ್ರಶ್ನೆ ಹಾಕಿದ: "ಹ್ಯಾಗೆ ತಪ್ಪಿಸ್ಕೊಂಡು ಬಂದ್ರಿ ಅಂತ ನಾವೇ ನಿಮ್ಮನ್ನು ಕೇಳಿದರೆ?" " ಹ್ಞ ! ದ್ವಂದ್ವ ! ಉತ್ತರ ಹೇಳ್ತೇನೆ. ಏಳು ದಿನಕ್ಕೊಮ್ಮೆ ಅರಮನೆ ಅರ್ಚಕ ಇನೇನಿ ಮಹಾಮಂದಿರಕ್ಕೆ ಹೋಗ್ತಾರೆ. ಮಹಾ ಅರ್ಚಕರಿದ್ದರೆ, ಅವರ ಭೇಟಿಗೆ, ಅವರಿಲ್ಲವಾದರೆ, ಅರಮನೆ ಸುದ್ದೀನ ಅವರಿಗೆ ತಿಳಿಸೋ ವ್ಯವಸ್ಥೆ ಮಾಡೋದಕ್ಕೆ. ಅಂಥ ದಿವಸ ನಾನು ಇಲ್ಲಿ! ಮೊದಲ ಸಲ ಗೊತ್ತಾದಾಗ ಇನೇನಿ ಕೂಗಾಡಿದ್ರೂ, ಆ ಮೇಲೆ ಗಲಾಟೆ ಇಲ್ಲ. 'ಎಲ್ಲಾದರೂ ಹಾಳಾಗಿ ಹೋಗ್ಲಿ,' ಅಂತ ಬಿಟ್ಟರ್ಬೇಕು. ನೀವು? ಓ! ತಿಳೀತು! ನೀವು ರಾಜ ಅತಿಥಿಗಳು. ಸ್ವತಂತ್ರರು. ಆದರೂ ಹುಷಾರಾಗಿರ್ಬೇಕಪ್ಪ, ಹುಷಾರಾಗಿರ್ಲೇಬೇಕು. ಅರಮನೆಯಿಂದ ಅಂಗರಕ್ಷಣೆಗೆ ಅಂತ ಯಾರೂ ಬಂದಿಲ್ವ? ಕೇಳದೆ ಹೊರಟ್ರಾ? ಇವರು ಯಾರು? ತೋಳುಗಳ ಮಾಂಸಖಂಡ ನೋಡಿದರೇ ಗೊತ್ತಾಗ್ತದೆ. ನಿಮ್ಮ ಅಂಬಿಗರು ಅಲ್ಲವಾ?” ಮೆನೆಪ್ ಟಾನೆಂದ: "ಬನ್ನಿ ಮೆನ್ನ. ಆ ಮರಗಳ ಕೆಳಗೆ ಕೂತ್ಕೊಳ್ಳೋಣ." "ಓಹೋ ! ಓಹೋ ! ನಡೀರಿ." ಬಟಾ ತುಸು ನಿಧಾನಿಸಿ ಮೆನ್ನನ ಹಿಂದಿನಿಂದ ಬರತೊಡಗಿದ. ಅವನೆಂದ: "ಬೆನ್ನಿನ ಮೇಲೆ ಗುರುತು ಇನ್ನೂ ಇದೆ. ಅವತ್ತು ಕತ್ತಲೇಲಿ ಕಾಣಿಸ್ಲಿಲ್ಲ.” ಮೆನ್ನ ನಕ್ಕ. "ಅದಾ? ಇನೇನಿ ಹೇಳಿದರಾ? ಪೆರೋ ತಾನು ಸೆರೆಹಿಡಿದವರಿಗೆ ಕಾದ ತಾಮ್ರದ ತುಂಡಿನಿಂದ ಮುದ್ರೆ ಒತ್ತುತ್ತಾರೆ. ಮಹಾ ಅರ್ಚಕರಿಗೆ ಬರೆ