ಪುಟ:Mrutyunjaya.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೬ ಮೃತುಂಜಯ

  ಎಳೆಯೋ ಹಕ್ಕಾದರೂ ಬೇಡವಾ ?"
      "ಬಹಳ ಹಿಂಸೆ ಸಹಿಸಿದಿರಿ, ಮೆನ್ನ," ಎಂದ ಮೆನೆಪ್ ಟಾ.
      " ನೀವು ಸಹಿಸಿದ್ದು ಹೆಚ್ಚೋ ? ನನ್ನದು ಹೆಚ್ಚೋ? (ಕುಪ್ಪಳಿಸುತ್ತ ಮೆನೆಪ್ ಟಾಗೆ ಒಂದು ಸುತ್ತು ಬಂದು) ಕತ್ತಲಲ್ಲೂ ಇಲ್ಲ, ಹಗಲಲ್ಲೂ ಇಲ್ಲ. ನೀರಾನೆ ತೊಗಲಿನ ಚಾವಟೀಲಿ ನಿಮಗೆ ಹ್ಯಾಗೆ ಬಾರಿಸಿದೆ ಅಂತ ಬಕಿಲ ಬಡಾಯಿ ಕೊಚ್ಕೊಳ್ತಿದ್ನಂತೆ....ನಿಮ್ಮದು ಕಣ್ಣೀರು ಒರೆಸೋ ಕೈ. ಚಾಟ ಗಾಯಗಳು ಬರಿಯ ಸ್ಪರ್ಶಕ್ಕೇ ಮಾಯವಾಗಿವೆ.”
   ಮರಗಳ ಬಳಿ ಒಂದು ಕಾಂಡಕ್ಕೊರಗಿ ಮೆನ್ನ ಕುಳಿತ. ಚಿಕ್ಕಮಗುವಿನಂತೆ  ಪಾದಗಳನ್ನು ಗಾಳಿಯಲ್ಲಿ ಝೂಡಿಸಿ ಆತನೆಂದ:
   "ಈಗ ನಾನೆಷ್ಟು ಸುಖಿ,ಗೊತ್ತೆ? ನದಿದಂಡೆಯಲ್ಲಿ ನಿಮ್ಮನ್ನೆಲ್ಲ ಆ ರಾತ್ರಿ ಕಂಡ್ಮೇಲೆ ನಾನು ದಂಡೆಗೆ ಹೋಗಿಯೇ ಇಲ್ಲ; ಆ ಹಾಡು ತಿರುಗಿ ನಾನು ಹಾಡಿಯೇ ಇಲ್ಲ. ಅವತ್ತಿನಿಂದ ನಿಮ್ಮ ಜತೆ ನಾನು ಮಾತಾಡ್ತಾನೇ ಇದೇನೆ-ಮನಸ್ನಲ್ಲಿ! ....ಇರೋದನ್ನೆಲ್ಲ ತೊಡೆದು ಹಾಕಿ, ಹೊಸದಾಗಿ ಸೃಷ್ಟಿಸೋದು ಎಷ್ಟು ರೋಮಾಂಚಕಾರಿ! ನಿಮ್ಮ ಬಂಡಾಯದ ವಿಷಯ ಕೇಳಿದಾಗ—ಸಾಧ್ಯವಿಲ್ಲ; ಇದು ಕಟ್ಟುಕತೆ. ಯಾವುದೋ ಉದ್ದೇಶಕ್ಕಾಗಿ ಹುಟ್ಟಿಸಿದ್ದಾರೆ; ನಿಜವಾದ್ದೇ ಆದರೆ ಚಚ್ಚಿ ಸಾಯಿಸ್ಬಿಡ್ತಾರೆ ಅಂದ್ಕೊಂಡೆ. ಮುಂದೆ ಕಥಾನಾಯಕನನ್ನು ಜೀವಂತವಾಗಿ ಕಂಡಾಗ, 'ಎಲ್ಲ ಬದುಕು ಅಸಹ್ಯವಲ್ಲ' ಅನಿಸ್ತು. ನೀಲನದಿಯ ಆಳ ಅಪ್ರಿಯವಾಯ್ತು.ಬದುಕೋ ಆಸೆಯಾಯ್ತು. ನಿನ್ನೆ ಇನೇನಿ ಒಂದಿಷ್ಟೂ ಕಸ ಇಲ್ಲದ ಹಾಗೆ ಗುಡಿಸ್ತಿದೀಯಲ್ಲ ಆಶ್ಚರ್ಯ' ಅಂದ್ರು. ನಾನೀಗ ಸತ್ತ ಕಡ್ಡಿಯಲ್ಲ. ಜೀವಂತ ಪೊರಕೆ.ಅವರಿಗೆ ಅದು ಹ್ಯಾಗೆ ಅರ್ಥವಾದೀತು ?"
   ಇನ್ನಷ್ಟು ಕೇಳೋ ಆಸೆ ಮೆನೆಪ್ ಟಾಗೆ. ಆದರೆ ಮೆನ್ನ ಸುಮ್ಮನಾದ. ಕಣ್ಣುಗಳನ್ನು ಮುಚ್ಚಿಕೊಂಡ. ಕಂಬನಿ ತೊಟ್ಟಕ್ಕಿತು. ಕಣ್ತೆರೆದು, ಬಾಯಿ ಅಗಲಿಸಿ ನಕ್ಕ. ಮೇಲಿನ ಸಾಲಿನ ಎರಡು ಹಲ್ಲುಗಳು ಇರಲಿಲ್ಲ.
   ಬಟಾ ಮೆನೆಪ್ ಟಾನ ಮುಖ ನೋಡಿದ. ಮೆನ್ನನ ಮಾತುಗಳ ಪೂರ್ಣ ಅರ್ಥ ಗ್ರಹಿಸಲು ತಾನು ಅಸಮರ್ಥ ಎಂದಿತು ಅವನ ನೋಟ. ಉಪಯುಕ್ತ ವಾದುದೇನನ್ನಾದರೂ ಮಾತನಾಡೋಣವೆಂದು, ಬಟಾ ಕೇಳಿದ: