ಪುಟ:Mrutyunjaya.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

          “ನಿಮಗೆ ಜನನ ಫಲ ಹೇಳೋದಕ್ಕೆ ಬರ್ತದಾ?”
         "ಬರದೇನು? ಜನನ ಫಲ, ಕನಸಿನ ಅರ್ಥ ವಿವರಣೆ, ಮಂತ್ರ ಮಾಯೆ--ಆರ್ತರನ್ನು ಸಾಂತ್ವನಪದಿಸೋ ಈ ಎಲ್ಲಾ ವಿದ್ಯೆ ಕಲಿತಿದ್ದೇನೆ.ಯಾವನೋ ಬುದ್ದಿವಂತ--ಥೊಥ್ ನೇ ಇರಬೇಕು--ಇಥಂದು ಹೀಗೆ,ಅಂದ.ನಾವು ಅದನ್ನು ಪುನರುಚ್ಚರಿಸ್ತೇವೆ; ಲಂಗು ಲಗಾಮಿಲ್ಲದೆ ಬುರುಡೆ ಬಿಡ್ತೇವೆ."
          ತಾನು ಮಾಡಿದ ಪ್ರಸ್ತಾಪ ಅನುಚಿತವಾಯಿತೇನೋ ಎನಿಸಿತು ಬಟಾ ನಿಗೆ. ಹೇಗೂ ಹೆಜ್ಜೆ ಇಟ್ಟಾಯಿತಲ್ಲ ಎಂದು, “ನಾನು ಹುಟ್ಟಿದ್ದು ಪಾವೋಫಿ ಮಾಸದ ಆರರ ದಿನ," ಎಂದ.
        “ಪಾವೋಫಿ ಆರು...ಅದ್ಬುತ....ಪ್ರಾಚೀನ ಜ್ಞಾನದ ಪ್ರಕಾರ ಈ ದಿನ ಹುಟ್ಟಿದವನು ಕುಡಿದು ಕುಡಿದು ಸಾಯ್ತಾನೆ.”

“ನೀವು ಹೇಳಿದ್ದು ಸತ್ಯಕ್ಕೆ ಬಹಳವೇನೂ ದೂರವಿಲ್ಲ!" ಎಂದು ಮೆನೆಪ್ ಟಾ, ಬಟಾನೆಡೆಗೆ ದೃಷ್ಟಿಬೀರಿ, ನಕ್ಕ. “ನನ್ನ ಹದಿನಾರನೇ ವರ್ಷದಲ್ಲಿ ಒಬ್ಬ ದೇವಸೇವಕ ಹೀಗೆಯೇ ಭವಿಷ್ಯ ಹೇಳಿದ್ರು, ಒಂದು ಗುಟುಕು ಜಾಸ್ತಿ ಕುಡಿಯೋಕೆ ಅವತ್ತೇ ಶುರು ಮಾಡ್ಡೆ,” ಎಂದ ಬಟಾ, ಗೊಳ್ಳೆಂದು ನಗುತ್ತ,

       ಮೆನ್ನನೆಂದ:
      “ನಾನು ಹುಟ್ಟಿದ್ದು ಥೊಥ್ ತಿಂಗಳ ಇಪ್ಪತ್ತಮೂರನೇ ದಿವಸ. ನನ್ನ ತಂದೆ ಸ್ವತಃ ದೇವಸೇವಕ, ಈ ಮಗೂಗೆ ಅಲ್ಪಾಯುಸ್ಸು; ಬಹಳ ದಿನ ಇರೋದಿಲ್ಲ-ಅಂತ ಹೇಳಿ, ಅವನು ತಲೆಕೆರೆದುಕೊಂಡ್ನಂತೆ. ನನಗೆ ಸಾವು ಬರಲಿಲ್ಲ. ಅವನಿಗೆ ಬಂತು-ಮುಂದೆ ಒಂದೇ ತಿಂಗಳಲ್ಲಿ! ಮೆನೆಪ್ ಟಾ ಅಣ್ಣ, ನಿಮ್ಮ ಜನ್ಮದಿನ ?”
      "ಚೊಯಾಕಲೆ ಇಪ್ಪತು....ನಾನು ಕುರುಡನಾಗ್ತೇನೆ ಅಂತ ಅರ್ಚಕ ಹೇಳಿದ್ರು.”
      “ಹೌದು-ಜನನ ಫಲದ ಪ್ರಕಾರ. ಆದರೆ ಯಾರಿಗೂ ಇಲ್ಲದ ದೃಷ್ಟಿ ಸಾಮರ್ಥ್ಯ ನಿಮಗಿದೆ. ನೀರಾನೆ ಪ್ರಾಂತದಲ್ಲಿ ಈ ಹೊತ್ನಲ್ಲಿ ಯಾರು ಯಾರು ಏನೇನು ಮಾಡ್ತಿದ್ದಾರೆ ಅನ್ನೋದು ಇಲ್ಲಿಂದಲೇ ನಿಮಗೆ ಕಾಣಿಸೋದಿಲ್ವಾ?”
          ೧೭