ಪುಟ:Mrutyunjaya.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೫೯

ಬಲ್ಲ; ಕೆಟ್ಟದೂ ಮಾಡಬಲ್ಲ, ಅದೂ ಇದೂ ಯೋಚಿಸ್ತಿರ್ತೇನೆ. ವಿಚಾರಗಳು ಸಿಕ್ಕುಗಂಟಾದಾಗ ತಲೆ ಬಿಸಿಯಾಗ್ತದೆ. ಸಹಸ್ರ ಹೋಳಾಗ್ತದೇನೊ ಅನ್ನೋ ಹಾಗೆ ಮೆದುಳು ಧಿಮಿಗುಟ್ತದೆ....ನೀರಾನೆ ಪ್ರಾಂತದಲ್ಲಿ ಅಕ್ಷರಾಭ್ಯಾಸ !....ನಮ್ಮ ಸಮಾಜದ ದೃಷ್ಟೀಲಿ ವಿದ್ಯಾಭ್ಯಾಸದ ಗುರಿಗಳು ಮೂರು. ಒಂದನೇದು, ಆಸ್ಥಾನದಲ್ಲಿ ಉನ್ನತ ಪದವಿಗೇರೋದು; ಎರಡನೇದು, ಯಶಸ್ಸುಗಳಿಸೋದು-ಅಂದರೆ ವಿಸ್ತಾರ ಭೂಮಿಗೂ ಹೆಚ್ಚು ಸಂಖ್ಯೆಯ ರಾಸುಗಳಿಗೂ ಒಡೆಯನಾಗೋದು; ಮೂರನೇದು, ಭವ್ಯ ಗೋರೀಲಿ ಅಂತಿಮ  ವಿಶ್ರಾಂತಿ ಪಡೆಯೋದು. ನೀರಾನೆ ಪ್ರಾಂತದ ಸಮಾಜಕ್ಕೆ ಈ ಗುರಿಗಳು ಸರಿಹೋಗ್ತವಾ ಮೆನೆಪ್ ಟಾ ಅಣ್ಣ?" 
      “ಇಲ್ಲ, ಹೊಸ ಸಮಾಜ ಹೊಸ ಧ್ಯೇಯಗಳನ್ನು ರೂಪಿಸ್ಕೋ ಬೇಕು."
      “ಹಳತು-ಹೊಸತು. ಯಾವುದು ಎಷ್ಟರ ವರೆಗೆ ಹಳತು ? ಹೊಸತು ಎನ್ನುವುದು ಯಾವುದಕ್ಕೆ ? ಎಲ್ಲಿಂದ ? —ಇದು ಇತ್ಯರ್ಥವಾಗಬೇಕಾದ ಸಂಗತಿ."
       ಬಿಸಿಲು ಮೌನ. ರಾನಿಂದ  ತಪ್ಪಿಸಿಕ್ಕೊಳ್ಳಲೆತ್ನಿಸುತ್ತಿದ  ಸಣ್ಣದೊಂದು ಗಾಳಿ ಮರಗಳ ಬಳಿ ಸುತ್ತಿ ಸುತ್ತಿ, ತಾಳೆಗರಿಗಳು ಚಡಪಡಿಸುವಂತೆ ಮಾಡಿತು. ಬೆಳ್ಳಕ್ಕಿಯ ಹಿಂಡೊಂದು ಉದ್ಯಾನದ  ಕೊಳದ  ಬಳಿಯಿಂದ, ದೂರು ಕೊಡುವಂತೆ ವಿಕಾರವಾಗಿ ಸದ್ದು ಮಾಡಿ ರೆಕ್ಕೆ ಬಡೆದು ಮೇಲಕ್ಕೇರಿ, ಕೆಳಕ್ಕಿಳಿಯಿತು.
      ಸುತ್ತಲಿನ ಗಭೀರತೆಯನ್ನು ಗಾಯಗೊಳಿಸುತ್ತ ಮೆನ್ನ ಮಾತನಾಡಿದ:
      “ದೇವಮಂದಿರದಲ್ಲಿ ತಿಂದು ತೇಗಿ ಸೋಮಾರಿಯಾಗಿ ಬಿದ್ದಿರುವ ಬೆಕ್ಕು, ಅದು ಸತ್ತಮೇಲೆ ಅದರ ಲೇಪಿತ ಶವವನ್ನು ಕಾಪಾಡೋದು. ಹೋರಸ್ ನ ಅವತಾರ ಅಂತ ಗೂಳಿಗಳನ್ನು ಮಂದಿರಗಳಲ್ಲಿ ಸಾಕೋದು, ಮೇಕೆಗಳನ್ನು ಬೆಳೆಸೋದು. ಸುಂದರ ಸ್ತ್ರೀಯರನ್ನು ತಂದು ಸಂಭೋಗಕ್ಕಾಗಿ ಈ ಪ್ರಾಣಿಗಳ ಜತೆ ಬಿಡೋದು, ಪ್ರಾಣಿಗಳ ಜತೆ ! ಇದು ಯಾವ ನಾಗರಿಕತೆ ? ಇದರ ಬಗ್ಗೆ ಪೆರೋ ಅಹಮೋಸ್ ಏನು ಹೇಳಿದನೋ ? ಇಂಥ ಪದ್ಧತಿ నిಲ್ಲೋವರೆಗೂ ಮನುಷ್ಯ ಎಷ್ಟು ಲಿಪಿಸುರುಳಿ ಓದಿ ಏನು ಪ್ರಯೋಜನ? ಎಷ್ಟು