ಪುಟ:Mrutyunjaya.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಮೃತ್ಯುಂಜಯ ಮಿನುಗುತ್ತಿದ್ದ ಈಟಿಗಳನ್ನೂ ಅತ್ಯಂತ ಕುತೂಹಲದಿಂದ ತಮ್ಮನ್ನ ನೋಡುತ್ತಿದ್ದ ಯೋಧರನ್ನೂ ದಿಟ್ಟಿಸಿ,ಬಟಾನೆಂದ  : "ಅರಮನೆ ಬೊಕ್ಕಸಾನ ನಾವು ಲೂಟಿ ಹೊಡೆದೆವೇನೋಂತ ಭಾವಿಸ ಬೇಕು ಕಂಡೋರು!" ಪರಿವಾರ ಅತಿಥಿಗೃಹ ಸೇರಿದಾಗ ಸೆನೆಬ್ ಧಾವಿಸಿ ಬಂದ. ಅವನ ಹಿಂದಿದ್ದ, ಅತಿಥಿಗೃಹದ ಅಧಿಕಾರಿ. ಆ ಅಧಿಕಾರಿಯ ಬಿಳಿಚಿಕೊಂಡಿದ್ದ ಮುಖಕ್ಕೆ ಬೊಟ್ಟು ಮಾಡಿ ಸೆನೆಬ್ ಎಂದ : “ಎಲ್ಲ ಇವನಿಂದಾಗಿ.ಬರೀ ಗುಲ್ಲು. "ತಿರುಗಾಟಕ್ಕೆ ಹೋಗಿದ್ದಾರು; ಭೋಜನದ ಹೊತ್ತಿಗೆ ಬರ್ತರೆ"ಎಂದರೆ ಕೇಳಲಿಲ್ಲ . ತನ್ನ ತಲೆಹೋಗ್ರದೇಂತ ಹೆದರಿ ಅಮಾತ್ಯರಿಗೆ ತಿಳಿಸಿಯೇ ಬಿಟ್ಟ್. ಅಂತೂ ಬಂದಿರಲ್ಲ ! ರಾಜಧಾನಿ ಯಲ್ಲಿ ನಿಮಗೆ ವೈರಿಗಳಿದ್ದಾರೆ. ನೀರಾನೆ ಪ್ರಾಂತದ ಭೊಮಾಲಿಕರು ಇಲ್ಲಿ ವಸತಿ ಮಾಡ್ತಿರೋದನ್ನು ಮರೆತಿರಾ ?ನಿಮಗೇನಾದರು ಅಪಾಯ ಉಂಟಾದರೆ, ರಾಜಧಾನಿಗೆ ಕಳಂಕ, ಆಮೇಲೆ ನಿಮ್ಮ ಜನತೆಗೆ ನಾವು ಮುಖ ತೋರಿ ಸೋದು ಹ್ಯಾಗೆ?” ತಾನೇ ಪೆರೋ ಎನ್ನುವಂತೆ ಮಾತನಾಡುತ್ತಿರುವನಲ್ಲ ಈತ ಎಂದು ಬಟಾಗೆ ಸಿಟ್ಟು ಬಂತು. ಆದರೂ ಅದನ್ನು ತೋರ್ಪಡಿಸದೆ, “ಆತ್ಮ ರಕ್ಷಣೆ ಮಾಡಿಕೊಳ್ಳೋ ಸಾಮರ್ಥ್ಯ ನಮಗಿದೆ ಲಿಪಿಕಾರಯ್ಯ," ಎಂದ. ಪೆಟಾರಿ ಹೊರುವ ದೋಣಿಗಾರನಿಗೆಷ್ಟು ಸೊಕ್ಕು!—ಎಂದು ಮನಸ್ಸಿ ನಲ್ಲೆ ಕಟೊಕ್ತಿಯಾಡಿ, ಸೆನೆಬ್ ರಾಗವೆಳೆದ : ಛೆ!ಛೆ! ಇಲ್ಲ ಅಂದೆನೆ? ನನ್ನ ಮಾತಿನಿಂದ ನಾಯಕರಿಗೆ ಬೇಸರವಾಗಿದ್ದರೆ ಕ್ಷಮಿಸ್ಬೇಕು. ನೀವು ('ಏ ದೋಣಿಕಾರ, ನೀನಲ್ಲ!) ಗೌರವಾನ್ನಿತ ಅತಿಥಿ, ಅರಮನೆಯ ಪೀಠಪಲ್ಲಕಿ ಬಳಸ್ಬೇಕು. ಕಾಲ್ನಡಿಗೇಲಿ ಹೋಗಾರದು.” “ಚಿಂತಿಸ್ಬೇಡಿ ಸೆನೆಬ್, ನಡೆದು ಹೋಗೋದು ಅವಮಾನಕರ ಅಂತ ನಾನು ಭಾವಿಸಿಲ್ಲ, ನಮೂರಲ್ಲಿ ನಾನು ಪಲ್ಲಕಿ ಉಪಯೋಗಿಸೋದಿಲ್ಲ.” “ಹೌದು, ಕೇಳಿದ್ದೇನೆ. ಅದರೆ, ರಾಜಧಾನಿಗೆ ಬಂದ ಮೇಲೆ ಇಲ್ಲಿಯ ರಿವಾಜು ಪಾಲಿಸ್ಬೇಕಲ್ಲ?”