ಪುಟ:Mrutyunjaya.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಮೃತ್ಯುಂಜಯ ತಾರಂತೆ-ಔತಣಕ್ಕೆ. ತೀರಾ ಖಾಸಗಿ ಮೆನೆಪ್ಟಾ ನಾಯಕರೇ ಅವತು ವಿಶೇಷ ಅತಿಥಿ." "ಪರಿವಾರದವರಿಗೆ ಪ್ರವೇಶವಿಲ್ಲ ಆನ್ನಿ" “ಇಲ್ಲ, ಆದರೆ ಔತಣಕ್ಕೆ ಮಾಡಿದ್ದೆಲ್ಲ ಕೆಳಗಿನವರೆಗೂ ಮುಟ್ತದೆ.” “ಅವತ್ತಾದರೂ, ಕೆಳಗಿನ ನಾವೂ ನೀವೂ ಒಟ್ಟೀಗೆ...." “ಲಿಪಿಕಾರರೆಲ್ಲ ಮಂದಿರದಲ್ಲೇ ಉಣ್ಣೋದು ಸಂಪ್ರದಾಯ.” ಸೆನೆಬ್ ನಗುತ್ತಲಿದ್ದ ಮೆನೆಪ್ ಟಾಗೆ ವಂದಿಸಿ, “ನಾನು ಹೊರಡ್ತೇನೆ.” ಎಂದ. ಉಂಡಮೇಲೆ ಆಂಬಿಗರು ದೋಣಿಕಟ್ಟೆಗೆ ಹೊರಟರು. ಆಲೆದು ಬಳಲಿದ್ದ ಮೆನೆಪ್ಟಾನೂ ಬಟಾನನೂ ಅಡಾದರು.ಔಟ ಮತ್ತು ಬೆಕ್ ಮೊಗಸಾಲೆಯಲ್ಲಿ ಚೌಕಮಣೆ ಆಟಕ್ಕೆ ಕುಳಿತರು. ಊಟದ ವೇಳೆಗೂ ಔಟನನ್ನು ಆಕ್ಷಿ ಕಾಡಿಸಿತ್ತು, ಆಟ ಆರಂಭಿಸಿ ಕಾಯಿಗಳ ಮೇಲೆ ದೃಷ್ಟಿ ನೆಟ್ಟೊಡನೆ ಮನೂಗಿನ ಹೊಳ್ಳೆಗಳಿಂದ ನೀರು ಸುರಿಯ ತೊಡಗೆತು. “ಸುರು ಸುರು ಮಳೆ ಶುರುವಾಯ್ತಪ್ಪೊ” ಎಂದ ಔಟ, ಬೇಸರದಿಂದ. ಮೂಗು ಬರಿದು ಮಾಡಲೆಂದು ಆತ ಆಗಾಗ್ಗೆ ಎದ್ದು ಹೊರಹೋಗ ಬೇಕಾಯಿತು. ಆದರೂ ಮೊದಲ ಆಟದಲ್ಲಿ ಅವನೇ ಗೆದ್ದ,

  • * * *

ರಾ ಅಸ್ತಮಿಸುವ ಹೊತ್ತಿಗೆ ಅರ್ಚಕ ಇನೇನಿ ಮಹಾಮಂದಿರದಿಂದ ಮರಳದಿದ್ದರೆ,ಕಿರಿಯ ದೇವಸೇವಕನೇ ಮುಚ್ಚಂಜೆಯ ಪೂಜೆಯನ್ನು ಮಾಡು ತ್ತಿದ್ದ, ಹಾಗಾಗುತ್ತಿದ್ದುದು ಮಹಾ ಅರ್ಚಕ ರಾಜಧಾನಿಯಲ್ಲಿರುತ್ತಿದ್ದ ಸಂದರ್ಭಗಳಲ್ಲಿ ಒಮೊಮ್ಮೆ ಮಾತ್ರ. ವರದಿ ಕಳುಹಿಸಲು ಕೆಲಸ ಬೇಗನೆ ಮುಗಿದುದರಿಂದ,ಬಿಸಿಲು ಪೂರ್ತಿ ಬಾಡುವುದಕ್ಕೆ ಮುನ್ನವೇ ಇನೇನಿ ವಾಪಸಾದ. “ನಿನ್ನ ವರದಿಗಳ ಶೈಲಿ ಮಹಾ ಅರ್ಚಕರಿಗೆ ಇಷ್ಟವಾಗಿದೆ.” -ಈ ಮಾತನ್ನು ಆಡಿದ್ದವನು, ಆನ್ ನಗರದಲ್ಲಿ ಮಹಾ ಅರ್ಚಕರನ್ನು